ದಿನದ ಸುದ್ದಿ
ಕ್ಷುಲ್ಲಕ ಕಾರಣಕ್ಕೆ ತಂದೆಯನ್ನೇ ಕೊಚ್ಚಿ ಕೊಂದ ಮಕ್ಕಳು..!
ಸುದ್ದಿದಿನ,ದಕ್ಷಿಣ ಕನ್ನಡ : ಕ್ಷುಲ್ಲಕ ಕಾರಣಕ್ಕೆ ಸ್ವಂತ ಮಕ್ಕಳೇ ತಂದೆಯನ್ನು ಮಚ್ಚಿನಿಂದ ಕಡಿದು ಕೊಂದಿರುವ ಪೈಶಾಚಿಕ ಕೃತ್ಯ ಉಪ್ಪಿನಂಗಡಿಯ ಕರಾಯ ಗ್ರಾಮದ ಮುಗ್ಗದ ಆನೆಪಲ್ಲ ಎಂಬಲ್ಲಿ ನಡೆದಿದೆ.
ಹತ್ಯೆಯಾದ ವ್ಯಕ್ತಿ ಧರ್ನಪ್ಪ ಪೂಜಾರಿ (65), ಎಂದು ಗುರುತಿಸಲಾಗಿದ್ದು, ಮಕ್ಕಳಾದ ಮೋನಪ್ಪ ಮತ್ತು ನವೀನ ಈ ಇಬ್ಬರು ಸೇರಿ ಈ ಕೃತ್ಯ ಎಸಗಿದ್ದಾರೆ.ಇಬ್ಬರನ್ನು ಉಪ್ಪಿನಂಗಡಿ ಪೋಲಿಸರು ಬಂಧಿಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಮೃತ ಧರ್ನಪ್ಪ ಪೂಜಾರಿಯವರು ಮನೆಯಲ್ಲಿಯೇ ತೆಂಗಿನ ಮರದಿಂದ ತೆಂಗಿನಕಾಯಿ, ಸೀಯಾಳಗಳನ್ನು ತೆಗೆದು ಮಾರಾಟ ಮಾಡುತ್ತಿದ್ದರು. ಆಗಾಗ ತಂದೆ ಜೊತೆಗೆ ಜಗಳ ಮಾಡುತ್ತಿದ್ದ ಇಬ್ಬರು ಮಕ್ಕಳು ನಿನ್ನೆ ಮಧ್ಯರಾತ್ರಿಯೂ ಯಾವುದೋ ವಿಚಾರಕ್ಕೆ ತಂದೆ ಮಕ್ಕಳ ಮಧ್ಯೆ ಜಗಳ ನಡೆದಿದೆ ಆದರೆ ಕೊಲೆ ಮಾಡುವಂತಹ ಕಾರಣವೇನಿತ್ತು ಎಂಬುದು ತನಿಖೆ ನಂತರ ತಿಳಿದು ಬರಲಿದೆ ಎಂದು ಉಪ್ಪಿನಂಗಡಿ ಪೊಲೀಸರು ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243