ದಿನದ ಸುದ್ದಿ

ಸೈಬರ್ ಬೆದರಿಕೆ | ದೇಶದ ಸಾಮಾಜಿಕ, ಆರ್ಥಿಕ ಸುರಕ್ಷತೆಯ ಮೇಲೆ ಪರಿಣಾಮ : ಅಜಿತ್ ದೋವೆಲ್

Published

on

ಸುದ್ದಿದಿನ ಡೆಸ್ಕ್ : ಡಿಜಿಟಲ್ ಪರಿವರ್ತನೆಯ ಸಫಲತೆಯಲ್ಲಿ ಸೈಬರ್ ಭದ್ರತೆ ಆಧಾರಸ್ತಂಬವಾಗಿದ್ದು, ಸೈಬರ್ ಬೆದರಿಕೆಗಳು ದೇಶದ ಸಾಮಾಜಿಕ ಮತ್ತು ಆರ್ಥಿಕ ಸುರಕ್ಷತೆಯ ಮೇಲೆ ನೇರ ಪರಿಣಾಮ ಬೀರಲಿದೆ ಎಂದು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವೆಲ್ ಹೇಳಿದ್ದಾರೆ.

ನವದೆಹಲಿಯಲ್ಲಿಂದು ರಾಷ್ಟ್ರೀಯ ಸೈಬರ್ ಭದ್ರತೆ ಕುರಿತ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ದೇಶದ ಡಿಜಿಟಲ್ ಕ್ರಾಂತಿಗೆ ಸರ್ಕಾರ ಹಲವಾರು ಕ್ರಮಗಳನ್ನು ಕೈಗೊಂಡಿದೆ. ಹಲವು ಡಿಜಿಟಲ್ ಸೇವೆಗಳನ್ನು ಆರಂಭಿಸಿದ್ದು, ಇಂತಹ ಸಂದರ್ಭದಲ್ಲಿ ದೇಶದ ಸೈಬರ್ ಭದ್ರತೆಗೆ ಒತ್ತು ನೀಡುವ ಅಗತ್ಯವಿದೆ ಎಂದು ಹೇಳಿದರು.

ಹತ್ತು ದಿನಗಳ ಕಾಲ ಹೈಬ್ರಿಡ್ ಮಾದರಿಯಲ್ಲಿ ರಾಷ್ಟ್ರೀಯ ಸೈಬರ್ ಭದ್ರತಾ ಪ್ರಕರಣಗಳಿಗೆ ಪ್ರತಿಕ್ರಿಯೆ ನೀಡುವ ಅಭ್ಯಾಸ ಕಾರ್ಯಕ್ರಮವನ್ನು ನವದೆಹಲಿಯಲ್ಲಿ ಹಮ್ಮಿಕೊಳ್ಳಲಾಗಿದೆ. ಹಿರಿಯ ನಿರ್ವಹಣಾ ತಜ್ಞರು ಮತ್ತು ತಾಂತ್ರಿಕ ಸಿಬ್ಬಂದಿಯನ್ನು ಸೈಬರ್ ಭದ್ರತೆ ವಲಯದಲ್ಲಿ ಬಳಸಿಕೊಳ್ಳಲು ಸಜ್ಜುಗೊಳಿಸಲಾಗುತ್ತಿದೆ. ಈ ಅಭ್ಯಾಸ ಕಾರ್ಯಕ್ರಮದಲ್ಲಿ 140ಕ್ಕೂ ಅಧಿಕ ಸಿಬ್ಬಂದಿಗೆ ತರಬೇತಿ ನೀಡಲಾಗುತ್ತಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version