/home/u584543641/domains/suddidina.com/public_html/wp-content/themes/zox-news/amp-single.php on line 77

Warning: Trying to access array offset on value of type bool in /home/u584543641/domains/suddidina.com/public_html/wp-content/themes/zox-news/amp-single.php on line 77
" width="36" height="36">

ಸಿನಿ ಸುದ್ದಿ

ಮತ್ತೆ ಟೈಟಲ್ ವಿವಾದದಲ್ಲಿ ಡಿ ಬಾಸ್ ‘ಒಡೆಯರ್’

Published

on

ಸುದ್ದಿದಿನ ಡೆಸ್ಕ್ | ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ 51ನೇ ಚಿತ್ರ ಒಡೆಯರ್ ಮತ್ತೆ ಟೈಟಲ್ ವಿವಾದಕ್ಕೆ ಸಿಲುಕಿದೆ. ‘ಒಡೆಯರ್’ ಶೀರ್ಷಿಕೆಯುಳ್ಳ ಕಮರ್ಶಿಯಲ್ ಚಿತ್ರದ ಹೆಸರನ್ನು ಬದಲಾಹಿಸುವಂತೆ ಒತ್ತಾಯಿಸಿ ಕನ್ನಡ ಕ್ರಾಂತಿದಳ ಸದಸ್ಯರು ಕೆ.ಆರ್.ಪೊಲೀಸ್ ಠಾಣೆಗೆ ಶುಕ್ರವಾರ ದೂರು ನೀಡಿದರು.

ಎಂಡಿ ಶ್ರೀಧರ್ ನಿರ್ದೇಶಿಸುತ್ತಿರುವ ಈ ಸಿನಿಮಾಗೆ ಸಂದೇಶ್ ನಾಗರಾಜ್ ಹಣ ಹೂಡಿದ್ದಾರೆ.

ಠಾಣೆಯ ಹೊರಗೆ ಮಾದ್ಯಮದವರೊಂದಿಗೆ ಮಾತನಾಡಿದ, ಕನ್ನಡ ಕ್ರಾಂತಿದಳದ ಯುವಘಟಕದ ರಾಜ್ಯಾಧ್ಯಕ್ಷ ತೇಜಸ್ವಿ ಕುಮಾರ್ ಒಡೆಯರ್ ಚಿತ್ರದ ಹೆಸರನ್ನು ಬದಲಾಯಿಸುವಂತೆ ಸುದ್ದಿಗೋಷ್ಠಿ ನಡೆಸಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ಎಚ್ಚರಿಕೆ ನೀಡಿದ್ದೆವು. ಆದರೆ ಇದಕ್ಕೆ ಪ್ರತಿಕ್ರಿಯಿಸಿದ ಚಿತ್ರತಂಡವು ಒಡೆಯರ್ ಶೀರ್ಷಿಕೆಯನ್ನು ಇಟ್ಟುಕೊಂಡು ಆ.16ರಂಧು ಚಿತ್ರಕ್ಕೆ ಮಹೋರ್ತ ಏರ್ಪಡಿಸಿರುವುದು ಖಂಡನೀಯ ಎಂದು ಆಕ್ರೋಶವ್ಯಕ್ತಪಡಿಸಿದರು.

ಒಡೆಯರ್ ಎಂಬ ಶೀರ್ಷಿಕೆಯುಳ್ಳ ಈ ಚಿತ್ರವು ಕಮರ್ಶಿಯಲ್ ಆಗಿದ್ದು, ಇದಕ್ಕೆ ಕನ್ನಡ ಕ್ರಾಂತಿದಳ ಮತ್ತು ನಾಲ್ವಡಿ ಕೃಷ್ಣರಾಜ ಒಡೆಯರ್ ಅಭಿಮಾನಿಗಳು ರಾಜ್ಯಾದ್ಯಂತ ವಿರೋಧ ವ್ಯಕ್ತಪಡಿಸಲಾಗುವುದು. ವಾಣಿಜ್ಯ ಮಂಡಳಿ ಹಾಗೂ ಚಿತ್ರತಂಡದವರು ಒಡೆಯರ್ ಎಂಬ ಶೀರ್ಷಿಕೆಯನ್ನು ಬದಲಾಯಿಸಬೇಕೆಂದು ಒತ್ತಾಯಿಸಿ ದೂರು ಸಲ್ಲಿಸುತ್ತಿದ್ದೇವೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಹಿರಿಯ ಹೋರಾಟಗಾರರಾದ ಸತ್ಯಪ್ಪ, ವಸಂತ್ ರಾಜೇ ಅರಸ್, ಪುನಿತ್ ಅರಸ್, ಅರವಿಂದ್ ರಾಜೇ ಅರಸ್, ಮಾದರಾಜೇ ಅರಸ್, ಯಶ್ವಂತ್ ರಾಜೇ ಅರಸ್,ಶರತ್ ಅರಸ್, ಮಂಜುನಾಥ್ ಮುಂತಾದವರು ಉಪಸ್ಥಿತರಿದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9986715401

Leave a Reply

Your email address will not be published. Required fields are marked *

Trending

Exit mobile version