ದಿನದ ಸುದ್ದಿ

ಮೋದಿ ಬಜೆಟ್ ಪಾಪ್ ಕಾರ್ನ್ ಬಜೆಟ್ : ಡಿ.ಕೆ. ಶಿವಕುಮಾರ್

Published

on

ಸುದ್ದಿದಿನ,ಬೆಂಗಳೂರು : ಕೇಂದ್ರದ ಬಜೆಟ್ ರೈತರಿಗೂ ಅನುಕೂಲವಾಗಲ್ಲ ಬಿಜೆಪಿಯ ರಾಜಕೀಯಕ್ಕೂ ಈ ಬಜೆಟ್ ಅನುಕೂಲ ಆಗೋಲ್ಲ, ಕಾಂಗ್ರೆಸ್ ಪ್ರಣಾಳಿಕೆಯಲ್ಲೆ ಒಣಭೂಮಿ ಬೇಸಾಯ ಮಾಡೋರಿಗೆ 10 ಸಾವಿರ ಘೋಷಣೆ ಮಾಡಿದ್ವಿ. ವ್ಯವಸಾಯ ಮಾಡೋರಿ 6 ಸಾವಿರ ಕೊಡ್ತೀನಿ ಅಂತ ಹೇಳ್ತಿದ್ದಾರೆ ಅಷ್ಟೇ ಇದರಲ್ಲಿ ಯಾವುದೇ ಲಾಭವಿಲ್ಲ , ಇನ್ನು, ಏನಾದ್ರು ಕೊಟ್ಟರೆ ಹೊಟ್ಟೆ ತುಂಬ ಕೊಡಬೇಕು‌‌ ಎಂದು ಸಚಿವ ಡಿ.ಕೆ.ಶಿವಕುಮಾರ್ ಕಿಡಿಕಾರಿದ್ದಾರೆ.

ಇದು ಬಿಜೆಪಿ ಅವರಿಗೂ ಅನುಕೂಲ ಆಗೋಲ್ಲ ಇದು ಚುನಾವಣೆ ಬಜೆಟ್ ಅಷ್ಟೇ, ಮೋದಿ ಅವರು ರಾಜ್ಯ ಸರ್ಕಾರದ ಸಾಲಮನ್ನವನ್ನು ಲಾಲಿಪಪ್ ಅಂತ ಹೇಳಿದ್ದರು ಈಗ ಮೋದಿ ಬಜೆಟ್ ಪಾಪ್ ಕಾರ್ನ್ ಬಜೆಟ್ ಅಂತೀರಾ?ರೈತರಿಗೆ ನಮ್ಮ ರಾಜ್ಯದಲ್ಲಿ 50 ಸಾವಿರದಷ್ಟು ಉಚಿತ ವಿದ್ಯುತ್ ನೀಡುತ್ತಿದ್ದೇವೆ. ನಮ್ಮ ಸರ್ಕಾರ ಮೋದಿ ಸರ್ಕಾರಕ್ಕಿಂತ ಉತ್ತಮ ಯೋಜನೆಗಳನ್ನ ನೀಡಿದೆ. ಉದ್ಯೋಗ ಸೃಷ್ಟಿಯಲ್ಲೂ ಯಾವುದೇ ಆಶಾಭಾವನೆ ಈ ಬಜೆಟ್ ನಲ್ಲಿ ಇಲ್ಲ ಇದೊಂದು ಫೇಲ್ಯೂರ್ ಬಜೆಟ್ ಎಂದು ಸಚಿವ ಡಿ.ಕೆ‌ ಶಿವಕುಮಾರ ತಿಳಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9986715401

Trending

Exit mobile version