ಬಹಿರಂಗ

ಆರ್.ಎಸ್.ಎಸ್.ನಲ್ಲಿನ ಹೊಲೆಮಾದಿಗರು : ಡಾ.ಅಂಬೇಡ್ಕರ್ ಚಿಂತನೆಗಳ ಹಂತಕರು.. !

Published

on

ಬೋಧಿಸತ್ವ ಬಾಬಾಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ರವರನ್ನು ಮತ್ತು ಅವರ ಚಿಂತನೆಗಳನ್ನು ನಾಶ ಮಾಡಲೆಂದೆ 1925 ರಲ್ಲಿ ಆರ್.ಎಸ್.ಎಸ್. ಸ್ಥಾಪನೆ ಮಾಡಲಾಗಿದೆ. ಇದರ ಅರಿವಿದ್ಧ ಡಾ.ಅಂಬೇಡ್ಕರ್ ಅವರು ಆ ಸಂಘಟನೆಯಿಂದ ತುಂಬಾ ಜಾಗರೂಕರಾಗಿದ್ದರು ಹಾಗೂ ಹೊಲೆ-ಮಾದಿಗರನ್ನು ಅದರಿಂದ ರಕ್ಷಣೆ ಮಾಡಿದ್ದರು.

ಆದರೆ ಇತ್ತಿಚಿನ ಕೆಲವು ದಿನಗಳಲ್ಲಿ ಕರ್ನಾಟಕದಲ್ಲೀನ ‘ಹೊಲೆ-ಮಾದಿಗರು’ ತಮ್ಮ ಸ್ವಾಭಿಮಾನವನ್ನು ಮಾರಿಕೊಂಡು ಅಧಿಕಾರದ ದುರಾಸೆಗಾಗಿ ‘ಆರ್.ಎಸ್.ಎಸ್’ . ‘ವಿಶ್ವಹಿಂದೂ ಪರೀಷತ್’ ಮತ್ತು ಅದರ ಅಂಗವಾದ ‘ಬಿ.ಜೆ.ಪಿ’ .ಯನ್ನು ಸೇರುವ ಮೂಲಕ ಡಾ.ಅಂಬೇಡ್ಕರ್ ರವರನ್ನು ತಲೆಹಿಡಿದು ತಮ್ಮ ಸ್ವಾರ್ಥ ಸಾಧಿಸಿಕೊಳ್ಳುವ ತಲೆಹಿಡುಕರಾಗುತ್ತಲಿದ್ದಾರೆ.

ಮೀಸಲಾತಿಯ ಲಾಭ ಪಡೆದು ರಾಜ್ಯಮಟ್ಟದ ವೈದ್ಯಾಧಿಕಾರಿಯಾಗಿ ನಿವೃತ್ತಿಯಾಗಿರುವ ‘ವಿಜಯಲಕ್ಷ್ಮಿ ದೇಶಮಾನೆ’ ಎನ್ನುವ ಕಲಬುರಗಿಯ ‘ಮಾದಿಗ’ ಸಮುದಾಯದ ಹೆಣ್ಣು ಮಗಳು ಈಶಾನ್ಯ ವಲಯದ ವಿಶ್ಚಹಿಂದೂ ಪರೀಷತ್ತಿನ. ಮಹಿಳಾ ಘಟಕದ ಅಧ್ಯಕ್ಷೆಯಾಗಿ ಪ್ರಭಾರತ್ವ ವಹಿಸಿಕೊಂಡಿರುವುದು. ‘ಸುಭಾಷ್ ಕಾಂಬಳೆ’ ಎನ್ನುವ ‘ಹೊಲೆಯ’ ಸಮುದಾಯದ ವ್ಯಕ್ತಿ ವಿಶ್ಚಹಿಂದೂ ಪರೀಷತ್ತಿನ ಕಲಬುರಗಿ ಜಿಲ್ಲಾ ಅಧ್ಯಕ್ಷನಾಗಿರುವುದು ಖೇದದ ಸಂಗತಿಯಾಗಿದೆ.

ಅದರೆ ದುರಂತದ ಸಂಗತಿ ಎಂದರೆ ಇವರಿಬ್ಬರ ಕುಟುಂಬದ ಸದಸ್ಯರು ತಮ್ಮವರನ್ನು ಮನುವಾದಿಗಳ ಕಪಿಮುಷ್ಟಿಯಿಂದ ಹೊರಗೆ ತರದೆ ಡಾ.ಅಂಬೇಡ್ಕರ್ ರವರ ಹೆಸರಲ್ಲಿ ಜನರನ್ನು ಯಾಮಾರಿಸುತ್ತಾ ನಮ್ಮ ತಿರಗುತ್ತಲಿದ್ದಾರೇ . ಇವರಿಬ್ಬರಷ್ಟೆ ಅಲ್ಲ ‘ಚಿ.ನಾ.ರಾಮು’ ಎನ್ನುವ ಬಿ.ಜೆ.ಪಿ. ಬಾಗೀಲು ಕಾಯುವ ಕಾವಲುಗಾರ, ‘ಕೆ.ಶಿವರಾಮ್’ , ಎನ್ನುವ ಕಾಲು ಹಿಡಿಯುವ ಗುಲಾಮ, ಡಾ.ಅಂಬೇಡ್ಕರ್ ರವರ ಅನುಯಾಯಿ ಎಂದು ಬೀಗುತ್ತ ಅಧಿಕಾರದ ಆಸೆಗಾಗಿ ಅಮಂಗಳವಾದ ‘ಶ್ರೀನಿವಾಸ ಪ್ರಸಾದ’,ಮನುವಾದಿಗಳ ಮಂದಿರದಲ್ಲಿ ಅವರ ಚಪ್ಪಲಿ ಹತ್ತಿರ ನಿಲ್ಲುವ ‘ರಮೇಶ ಹಿಗಜಿಣಗಿ’, ಮನುವಾದಿಗಳಿಗೆ ಬೆನ್ನೆಲುಬಾದ ಗೋವಿಂದ ಕಾರಜೋಳ್, ದಲಿತಪರ ಧ್ವನಿ ಎತ್ತದ ‘ಡಿ.ಎಸ್.ವೀರಯ್ಯಾ’ , ಹೊಸಕಾವಲುಗಾರ ‘ಛಲವಾದಿ ನಾರಾಯಣಸ್ವಾಮಿ’, ಡಾ.ಅಂಬೇಡ್ಕರ್ ಭವನ ಕಟ್ಟಲು ಯೊಗ್ಯತೆ ಇರದ ‘ಎಸ್.ಅಂಗಾರು’ , ಕಟ್ಟಾ ಕಮ್ಯುನಿಷ್ಟ್ ಎಂದು ಫೋಜ್ ಕೊಡುತ್ತಾ, ರಾಮಮಂದಿರದ ಭಕ್ತನಾಗಿ, ಹಿತ್ತಲ ಬಾಗೀಲಿನ ಮೂಲಕ ರಾಜ್ಯಸಭಾ ಸದಸ್ಯನಾಗುವ ‘ಕೆ.ಬಿ.ಶ್ಯಾಣಪ್ಪ’ , ಸಮಾಜವನ್ನೇ ಅಡವಿಟ್ಟು ಅಧಿಕಾರ ಹಿಡಿಯುವ ಸ್ವಾರ್ಥ ಶಾಸಕರುಗಳಾದ ‘ಚಂದ್ರಪ್ಪ’, ‘ನಾರಾಯಣಸ್ವಾಮಿ, ಹರ್ಷವರ್ಧನ, ಲಿಂಗಣ್ಣ, ಎಸ್.ರಾಘು, ಕುಮಾರಸ್ವಾಮಿ, ಬಸವರಾಜ್, ಡಿ.ಎಸ್.ಹುಲಗೇರಿ, ಬಸವರಾಜ ಮತ್ತಿಮೂಡ , ಮುಂತಾದ ಹೊಲೆ ಮಾದಿಗರು ಒಮ್ಮೆಯಾದರೂ ಈ ಸಮಸ್ಯೆಗಳ ಬಗ್ಗೆ ಧ್ವನಿ ಎತ್ತಿದ್ದಾರೆಯೇ ?.

  1. ಭಾರತದ ಸಂವಿಧಾನ ಬದಲಾವಣೆ ಮಾಡಲೆಂದೇ ನಾವು (ಬಿ.ಜೆ.ಪಿ) ಅಧಿಕಾರಕ್ಕೆ ಬಂದಿರುವುದು ಎಂದ ಅವಿವೇಕಿ ಕುರಿತು.
  2. ದಲಿತರು ಬೀದಿ ನಾಯಿಗಳು ಮತ್ತು ಜಾತ್ಯಾತೀತರು ಒಂದು ಅಪ್ಪನಿಗೆ ಹುಟ್ಟಿಲ್ಲ ಎಂದು ಉದ್ಧಟತನದ ಹೇಳಿಕೆ ಕೊಟ್ಟ ಅವಿವೇಕಿ
    ಅನಂತಕುಮಾರ ಹೆಗಡೆ ವಿರುದ್ಧ.
  3. ಎಸ್.ಸಿ.ಎಸ್.ಟಿ.ದೌರ್ಜನ್ಯ ತಡೆಕಾಯ್ದೆ 1989 & 95 ಯನ್ನು ‘ಜಾಮೀನುಸಹಿತ’ ಕಾಯ್ದೆ ಮಾಡಿದಾಗ.
  4. ಸರಕಾರಿ ನೌಕರರ ಬಡ್ತಿ ಮೀಸಲಾತಿ ಕಾಯ್ದೆಯ ಗೊಂದಲಾದಾಗ ಮತ್ತು ಜಾರಿ ಮಾಡದೆ ವಿಳಂಬ ಮಾಡುತ್ತಲಿರುವಾಗ.
  5. ಪ್ರತಿನಿತ್ಯ ದಲಿತರ ಮೇಲಾಗುತ್ತಿರುವ ದೌರ್ಜನ್ಯ, ಮಹೀಳೆಯರ ಮೇಲಿನ ಬಲತ್ಕಾರಗಳು ನಡೆದಾಗ.
  6. ಡಾ.ಬಿ.ಆರ್.ಅಂಬೇಡ್ಕರ್ ಅವರ ಪ್ರತಿಮೆಯ ಮೇಲಾಗುತ್ತಿರುವ ಆಕ್ರಮಣಗಳ ನಡೆದಾಗ.
  7. ನಕಲಿ ಎಸ್.ಸಿ.ಎಸ್.ಟಿ ಜನರು ನಮ್ಮವರ ಬದಲಾಗಿ ಸರಕಾರಿ ನೌಕರಿ ಪಡೆದುಕೊಂಡಾಗ.
  8. ಡಾ.ಅಂಬೇಡ್ಕರ್ ಸಾಹಿತ್ಯವನ್ನು ತಿರಚುತ್ತಲಿರುವ ರಾಷ್ಟ್ರೋತ್ಥಾನ ಪ್ರತಿಷ್ಠಾನದ ಬಗ್ಗೆ
  9. ಎಸ್.ಸಿ.ಎಸ್.ಟಿ ಅನುದಾನ ಬಳಕೆ ಮಾಡದೆ ಅನುದಾವನ್ನು ಲ್ಯಾಪ್ಸ್ ಮಾಡಿದಾಗ.
  10. ಗತೆಗೆಟ್ಟ ‘ಹಾಸ್ಟಲ್ಗಳ ಬಗ್ಗೆ’ ಮತಿಗೆಟ್ಟ ಸಮಾಜ ಕಲ್ಯಾಣಾಧಿಕಾರಿಗಳ ಮತ್ತು ಕಳಪೆ ಮಟ್ಟದ ಆಹಾರದ ಬಗ್ಗೆ.
  11. ಇಪ್ಪತ್ತುಸಾವೀರಕ್ಕೂ ಹೆಚ್ಚಿನ ಬಾಕಿ ಉಳಿದಿರುವ ಬ್ಯಾಕ್ಲಾಗ್ ಹುದ್ದೆಗಳ ಭರ್ತಿ ಬಗ್ಗೆ.
  12. ‘ಜಂತರ್ ಮಂತರ್ದಲ್ಲಿ ಭಾರತದ ಸಂವಿಧಾನದ ಪ್ರತಿಯನ್ನು ಬ್ರಾಹ್ಮಣವಾದಿಗಳು ಸುಟ್ಟಾಗ ಅವರ ಮೇಲೆ ಕ್ರಮ ಜರುಗಿಸಲು ಒತಾಯ
    ಮಾಡುವಾಗ.
  13. ದಾನಮ್ಮಳನ್ನು ಬಲತ್ಕಾರ ಮಾಡಿ ಕೊಂದುಹಾಕಿರುವ ಆರ್.ಎಸ್.ಎಸ್. ಕಾರ್ಯಕರ್ತರ ಬಗ್ಗೆ.
  14. ಮೌಢ್ಯವನ್ನು ಹೋಗಲಾಡಿಸಲು, ದಲಿತರನ್ನು ಜಾಗೃತ ಮಾಡಲು ತಮ್ಮ ಬರವಣಿಗೆ ಮೂಲಕ ಕಾಯಕದಲ್ಲಿ ತೊಡಗಿದ್ದ ‘ಗೌರಿಲಂಕೇಶ’,
    ‘ಎಮ್.ಎಮ್.ಕಲಬುರಗಿ’ಯವರನ್ನು ಸಂಘ ಪರಿವಾರದವರು ಕೊಲೆ ಮಾಡಿದಾಗ.
  15. ಎಪ್ರೀಲ್ 2. 2018ರಂದು ಮದ್ಯಪ್ರದೇಶ ಮತ್ತು ಉತ್ತರ ಪ್ರದೇಶದಲ್ಲಿ ಮೆರವಣಿಗೆ ಮಾಡುತ್ತಲಿದ್ದ ದಲಿತ ಯುವಕರನ್ನು ಗುಂಡಿಟ್ಟು ಕೊಂದ ಆರ್.ಎಸ್.ಎಸ್. ಕಾರ್ಯಕರ್ತರ ಬಗ್ಗೆ.
  16. ಡಾ.ಅಂಬೇಡ್ಕರ್ವಾದಿ ‘ಚಂದ್ರಶೇಖರ ರಾವಣ’ನನ್ನು ಫರಜಿ ಕೇಸ್ನಲ್ಲಿ ಫಿಟ್ ಮಾಡಿ ಒಂದು ವರ್ಷದಿಂದಲೂ ಜೈಲಿನಲ್ಲಿ ಕೊಳಡಸುತ್ತಿರುವ ಆದಿತ್ಯನಾಥನ ಬಗ್ಗೆ.

ಹೀಗೆ ಬಾಬಾಸಾಹೇಬರ ಪ್ರತಿಮೆಯ ಮೇಲೆ, ಸಂವಿಧಾನದ ಮೇಲೆ ಮತ್ತು ದಲಿತರ ಮೇಲೆ ದಿನನಿತ್ಯ ರಾಷ್ಟ್ರವಾದಿಗಳಿಂದ ನಡೆಯುತ್ತಿರುವ ದೌರ್ಜನ್ಯ ಗಳ ಕುರಿತು ಒಂದೂ ಮಾತನ್ನಾಡುವುದಿಲ್ಲ. ದಲಿತರ ಧ್ವನಿಯಾಗಬೇಕಾದ ಇವರು ಆಯಾ ಪಕ್ಷಗಳ ಧ್ವನಿಯಾಗಿ ಸ್ವಾರ್ಥ ರಾಜಕಾರಣಕ್ಕಾಗಿ ಮತ್ತು ಅಧಿಕಾರಕ್ಕಾಗಿ ತಮ್ಮ ಸಮಾಜಕ್ಕೆ ಮತ್ತು ಬಾಬಾಸಾಹೇಬರಿಗೆ ವಂಚನೆ ಮಾಡುತ್ತಲಿದ್ದಾರೆ. ಅಧಿಕಾರಕ್ಕಾಗಿ ಆರ್.ಎಸ್.ಎಸ್. ಸೇರುವ ಹೊಲೆ ಮಾದಿಗರ ಸಂಖ್ಯೆ ಹೆಚ್ಚಾಗುತ್ತಲಿದೆ. ಇವರು ಖಾಕಿಚಡ್ಡಿ ಹಾಕಿಕೊಂಡು ಕೈಯಲ್ಲಿ ಲಾಠಿ ಹಿಡಿದು ಬ್ರಾಹ್ಮಣವಾದವನ್ನು ಕಾಯುತ್ತಲಿದ್ದಾರೆ. ಹಾಗೂ ಇವರೆ ಮುಂದು ನಿಂತು ಡಾ.ಅಂಬೇಡ್ಕರ್ ಚಿಂತನೆಗಳ ಕೊಲೆ ಮಾಡುತ್ತಲಿದ್ದಾರೆ.

ಎಚ್ಚರಾಗಿ ಭೀಮನ ಹುಲಿಗಳೆ ಹೊಲೆ ಮಾದಿಗರೆಂದು ವಿಭಜಿಸಿ ಆಳುತ್ತಿರುವ ಈ ಅವಕಾಶವಾದಿ ರಾಜಕಾರಣಿಗಳ ಕಪಿಮುಷ್ಠಿಯಿಂದ ಹೊರ ಬಂದು ಹೊಲೆ ಮಾದಿಗರು ಒಂದಾಗುವ ಮೂಲಕ ‘ಭೀಮರಾಜ್ಯ’ವನ್ನು ಸ್ಥಾಪಿಸೋಣ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version