ಸಿನಿ ಸುದ್ದಿ

ಹುಟ್ಟು ಹಬ್ಬ | ‘ಮಾರ್ಚ್1ಕ್ಕೆ ಯಜಮಾನ ಬರ್ತಾನೆ, ಅವ್ನೇ ಎಲ್ಲಾ ಹೇಳ್ತಾನೆ’ ಅಂದ್ರು ಡಿ ಬಾಸ್..! ವಿಡಿಯೋ ನೋಡಿ

Published

on

ಸುದ್ದಿದಿನ, ಬೆಂಗಳೂರು : ಕೈ ನೋವಿದ್ರೂ ಅಭಿಮಾನಿಗಳಿಗೆ ಕೈ ಕುಲುಕಿದ ದರ್ಶನ್ ಅವರು ಅಭಿಮಾನಿಗಳ ಅಭಿಮಾನದ ಮುಂದೆ ಕೈ ನೋವೆಲ್ಲಾ ಏನೂ ಇಲ್ಲ. ಕಳೆದ ವರ್ಷ ರಾಶಿ ರಾಶಿ ಹಾರ,ಕೇಕ್ ವೇಸ್ಟ್ ಆಗಿ ಬಂದು ಬೀಳ್ತಿತ್ತು, ಹಾಗಾಗಿ ಈ ಬಾರಿ ನನ್ನಿಂದ ಸಹಾಯ ಆಗ್ಲಿ ಅಂತ ದವಸ ಧಾನ್ಯಗಳನ್ನು ತರುವಂತೆ ವಿನಂತಿ‌ ಮಾಡಿದ್ದೆ ಎಂದರು.

ಇಂದು ಹುಟ್ಟು ಹಬ್ಬ ಆಚರಿಸಿಕೊಂಡ ದರ್ಶನ್ ಅವರು, ಮಾರ್ಚ್1 ರಂದು ಯಜಮಾನ ಬರ್ತಾನೆ ಅವ್ನೇ ಎಲ್ಲಾ ಹೇಳ್ತಾನೆ. ಸಿನಿಮಾ ಇಂಡಸ್ಟ್ರಿ ಯಾರಪ್ಪನ ಸ್ವತ್ತೂ ಅಲ್ಲ. ಹೊಸಬರು ಬರ್ಬೇಕಲ್ಲಾ, ಬಂದು ಬೆಳೀಬೇಕಲ್ವಾ? ಯಾರೇ ಹೊಸಬರು ಬಂದು ಕೇಳಿಕೊಂಡ್ರೂ ನಾನು ಸಪೋರ್ಟ್ ಮಾಡ್ತೀನಿ.ಉಡುಗೊರೆ ರೂಪದಲ್ಲಿ ಪ್ರಾಣಿ ಪಕ್ಷಿಗಳನ್ನ ಕೊಡುತ್ತಿರೋ ಅಭಿಮಾನಿಗಳು.ಇಂತಹ ಉಡುಗೊರೆಗಳನ್ನು ಫಾರ್ಮ್ ಹೌಸ್‌ಗೆ ಕಳುಹಿಸುವೆ.ಸ್ನೇಹಿತರು ಇಷ್ಟ ಪಟ್ಟು ಅವುಗಳನ್ನು ಸಾಕಲು ತೆಗೆದುಕೊಂಡು ಹೋಗ್ತಾರೆ ಎಂದು ಹೇಳಿದರು.

ಈ ವರ್ಷ 3 ಸಿನಿಮಾ ರಿಲೀಸಾಗಲಿವೆ ಯಜಮಾನ, ಒಡೆಯ,ಕುರುಕ್ಷೇತ್ರ ರಿಲೀಸಾಗಲಿರುವ ಸಿನೆಮಾಗಳು.ಗ್ರಾಫಿಕ್ಸ್ ನಿಂದಾಗಿ ಕುರುಕ್ಷೇತ್ರ ತಡವಾಗಿದೆ ಅಷ್ಟೆ.ಒಂದೂವರೆ ವರ್ಷದಿಂದ ಸುಮ್ಮನಿದ್ನಲ್ಲಾ ಹಾಗಾಗಿ ಒಟ್ಟಿಗೆ ಸಿನಿಮಾಗಳು ಬರ್ತಿದೆ.ಅಭಿಷೇಕ್ ಗೆ ಆಲ್ ದಿ ಬೆಸ್ಟ್ ಹೇಳ್ತೀನಿ, ಅವನೂ ಸಿನಿಮಾ ಇಂಡಸ್ಟ್ರಿ ಗೆ ಬರ್ಬೇಕು.ಮಂಡ್ಯ ಯೋಧನ ಜೊತೆಗೆ ಬೇರೆ ಯೋಧರು ಸಹ ಅಗಲಿದ್ದಾರೆ
ಮನಸಿಗೆ ತುಂಬಾ ದುಃಖ ತಂದಿದೆ.
ಇನ್ಮುಂದೆ ವ್ಯಾಲೆಂಟೈನ್ಸ್ ಡೇನ ಡಾರ್ಕ್ ಡೇ ಅಂತ ಆಚರಿಸ್ಬೇಕು ಎಂದು ಬೇಸರ ವ್ಯಕ್ತಪಡಿಸಿದರು.

ಡಿ ಬಾಸ್ ಹುಟ್ಟು ಹಬ್ಬದ ವಿಡಿಯೋ ನೋಡಿ

ಪ್ರತಿನಿತ್ಯ ನನ್ನ ನಿವಾಸದ ಮುಂದೆ ಅಭಿಮಾನಿಗಳ ಜಾತ್ರೆಯೇ ಇರುತ್ತದೆ.ಬರ್ತಡೇ ಹೊರತು ಪಡಿಸಿ ಪ್ರತೀದಿನ ಸಾವಿರಾರು ಅಭಿಮಾನಿಗಳು ಬರ್ತಾರೆ.ಪ್ರತಿದಿನ ಅಭಿಮಾನಿಗಳಿಗಾಗೇ ಅರ್ಧ ಗಂಟೆ ಮೀಸಲಿಟ್ಟಿದ್ದೇನೆ.ಶೂಟಿಂಗ್ ಹೋಗೋಕು ಮುಂಚೆ ಅಭಿಮಾನಿಗಳಿಗೆ ಗಳನ್ನ ಭೇಟಿ ಮಾಡಿಯೇ ಹೋಗೋದು ಎಂದರು ದರ್ಶನ್.

ಸುದ್ದಿದಿನ.ಕಾಂ|ವಾಟ್ಸಾಪ್|9986715401

Trending

Exit mobile version