ದಿನದ ಸುದ್ದಿ
ದಾವಣಗೆರೆ | ಅತ್ಯಂತ ಗಂಭೀರ ಸ್ವರೂಪದ ಕಾಯಿಲೆಯವರನ್ನೂ ಗುಣಪಡಿಸಲಾಗಿದೆ : ಜಿಲ್ಲಾಧಿಕಾರಿ
ಸುದ್ದಿದಿನ,ದಾವಣಗೆರೆ: ಹೃದಯ ರೋಗ ಹೊಂದಿದ್ದ 18 ವರ್ಷದ ಸೋಂಕಿತ ಯುವತಿಯನ್ನು ಕೊರೊನಾದಿಂದ ಹಾಗೂ ಅತ್ಯುನ್ನತ ಚಿಕಿತ್ಸೆ ನೀಡುವ ಮೂಲಕ ಹೃದ್ರೋಗವನ್ನು ಗುಣಪಡಿಸಲಾಗಿದೆ ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ತಿಳಿಸಿದರು.
ಒಂದೇ ಕಿಡ್ನಿ ಹೊಂದಿದ್ದು ಅನಾರೋಗ್ಯದಿಂದ ಬಳಲುತ್ತಿದ್ದ 65 ವರ್ಷದ ಸೋಂಕಿತ ಮಹಿಳೆಯನ್ನು ಗುಣಪಡಿಸಲಾಗಿದೆ. ಕಾಲಲ್ಲಿ ಗ್ಯಾಂಗ್ರೀನ್ ಹೊಂದಿದ್ದ 69 ವರ್ಷದ ವೃದ್ದರನ್ನು ಕೊರೊನಾದಿಂದ ಗುಣಮುಖಪಡಿಸಿ ಹುಬ್ಬಳ್ಳಿಯ ಆಸ್ಪತ್ರೆಗೆ ಕಳುಹಿಸಿ ಅವರ ಕಾಲಿನ ಗ್ಯಾಂಗ್ರೀನ್ ರಿಮೂವ್ ಮಾಡಿಸಿ ಗುಣಪಡಿಸಲಾಗಿದೆ. ಹಾಗೂ ಹೃದ್ರೋಗ ಮತ್ತು ಹೈಪರ್‍ಟೆನ್ಶನ್ ಇದ್ದ 68 ವರ್ಷದ ವೃದ್ದೆ, 26 ಸೈಕೋಸಿಸ್ ಕಾಯಿಲೆಯಿಂದ ಬಳಲುತ್ತಿದ್ದ 26 ವರ್ಷದ ಯುವತಿ, ಗಂಭೀರ ನ್ಯುಮೋನಿಯಾ ಮತ್ತು ಹೈಪರ್‍ಟೆನ್ಶನ್‍ನಿಂದ ಬಳಲುತ್ತಿದ್ದ 73 ವರ್ಷದ ವೃದ್ದೆಯನ್ನು ಸಹ ಗುಣಪಡಿಸಲಾಗಿದೆ.
ಜೊತೆತೆ ಅತ್ಯಂತ ಗಂಭೀರ ಸ್ಥಿತಿ ಹೊಂದಿದ್ದ 64 ವರ್ಷದ ಆರೋಗ್ಯ ಕಾರ್ಯಕರ್ತರನ್ನು ಹೈಫ್ಲೋ ನೇಸಲ್ ಆಕ್ಸಿಜನ್ ನೀಡಿ ಗುಣಪಡಿಸಲಾಗಿದೆ. ಹೀಗೆ ಅನೇಕ ತೀವ್ರತರ ಕಾಯಿಲೆಗಳಿರುವ ಸೋಂಕಿತರನ್ನೂ ಕೂಡ ಗುಣಪಡಿಸಿದ್ದೇವೆ ಎಂದು ಮಾಹಿತಿ ನೀಡಿದ ಅವರು ನಮ್ಮಲ್ಲಿ ಅತ್ಯುತ್ತಮ ನುರಿತ ತಜ್ಞರು ಮತ್ತು ಆರೋಗ್ಯ ವ್ಯವಸ್ಥೆ ಇದೆ.
ಆದರೆ ಜನರು ತಮ್ಮ ಲಕ್ಷಣಗಳನ್ನು ಮುಚ್ಚಿಡದೇ ಪ್ರಾಥಮಿಕ ಹಂತದಲ್ಲೇ ಬಂದಲ್ಲಿ ಜೀವ ಉಳಿಸುವ ಸರ್ವ ಪ್ರಯತ್ನ ಮಾಡಲಾಗುವುದು. ಆದ್ದರಿಂದ ಜನರಲ್ಲಿ ನಾನು ಆದಷ್ಟು ಬೇಗ ತಮ್ಮ ಲಕ್ಷಣಗಳ ಬಗ್ಗೆ ತಿಳಿಸಿ ತೋರಿಸಿಕೊಳ್ಳಬೇಕೆಂದು ಮನವಿ ಮಾಡುತ್ತೇನೆ ಎಂದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243