ದಿನದ ಸುದ್ದಿ
ದಾವಣಗೆರೆ ಜಿಲ್ಲೆಗೆ ‘ವಿಸ್ಮಯ’ ಎಸ್.ಎಸ್.ಎಲ್.ಸಿ ಟಾಪರ್..!
ಸುದ್ದಿದಿನ,ದಾವಣಗೆರೆ : ನಗರದ ತರಳಬಾಳು ಶಾಲೆಯ ವಿಸ್ಮಯ ಎಸ್.ಎಂ. ಎಸ್ಸೆಸ್ಸೆಲ್ಲಿಯಲ್ಲಿ ಜಿಲ್ಲೆಗೆ ಟಾಪರ್ ಆಗಿ ಹೊರ ಹೊಮ್ಮಿದ್ದಾರೆ.
621 ಅಂಕ ಪಡೆದಿರುವ ವಿಸ್ಮಯ ಕನ್ನಡದಲ್ಲಿ-125, ಇಂಗ್ಲೀಷ್ -99, ಹಿಂದಿ-100, ಗಣಿತ-100,ವಿಜ್ಞಾನ -97 ಹಾಗೂ ಸಾಮಾಜಿಕ ವಿಜ್ಞಾನದಲ್ಲಿ-100 ಅಂಕಗಳನ್ನು ಗಳಿಸಿ ಶೇ.99.36ರಷ್ಟು ಅಂಕ
ಪಡೆದಿದ್ದಾರೆ.
ಟಾಪರ್ ಅಗಿರುವುದು ಸಂತಸ ತಂದಿದೆ.ದಿನಕ್ಕೆ 6 ತಾಸು ಓದುತ್ತಿದ್ದೆ. ಶಾಲೆಯಲ್ಲಿಯೇ ಉತ್ತಮ ಬೋಧನೆ ಇದ್ದುದರಿಂದ ಟ್ಯೂಷನ್ ಹೋಗುವ ಅಗತ್ಯವೇ ಬರಲಿಲ್ಲ. 6 ಬಾರಿ ಪೂರ್ವ ಸಿದ್ಧತಾ ಪರೀಕ್ಷೆಗಳನ್ನು ನಡೆಸಿದ್ದುದು ಹೆಚ್ಚು ಅಂಕಗಳಿಸಲು ಸಹಕಾರಿಯಾಯಿತು ಎಂದು ಹೇಳಿದರು.
ಬಾಪೂಜಿ ಆಸ್ಪತ್ರೆಯಲ್ಲಿ ಮಕ್ಕಳ ತಜ್ಞರಾಗಿ ಸೇವೆ ಸಲ್ಲಿಸುತ್ತಿರುವ ಡಾ.ಎಸ್. ಮೃತ್ಯುಂಜಯ ಹಾಗೂನೀತು ದಂಪತಿಗಳ ಪುತ್ರಿಯಾದ ವಿಸ್ಮಯಾ, ಮುಂದೆ ಪಿಯುಸಿಯಲ್ಲಿ ಪಿಸಿಎಂಬಿ ಆಯ್ಕೆ ಮಾಡಿಕೊಂಡ ನಂತರ ಐಎಎಸ್ ಮಾಡುವ ಬಯಕೆ ಹೊಂದಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243