ದಿನದ ಸುದ್ದಿ
ಬಂದ್ ಮಾಡಿದ ಕಾಂಗ್ರೆಸ್ ಗೆ ನೈತಿಕತೆ ಇದೆಯೇ; ದಾವಣಗೆರೆ ಸಂಸದ ಸಿದ್ದೇಶ್ವರ ಪ್ರಶ್ನೆ
ಸುದ್ದಿದಿನ ದಾವಣಗೆರೆ: ಭಾರತ ಬಂದ್ ಮಾಡಿದ ಕಾಂಗ್ರೆಸ್ ಪಕ್ಷಕ್ಕೆ ನೈತಿಕತೆ ಇದೆಯೇ ಎಂದು ಪ್ರಶ್ನೆ ಮಾಡಿರುವ ದಾವಣಗೆರೆ ಲೋಕಸಭಾ ಕ್ಷೇತ್ರದ ಸದಸ್ಯ ಜಿ.ಎಂ. ಸಿದ್ದೇಶ್ವರ್, ಎನ್‌ಡಿಎ ಮತ್ತು ಯುಪಿಎ ಸರ್ಕಾರದ ಅವಧಿಯಲ್ಲಿ ದಿನನಿತ್ಯ ಸಾಮಗ್ರಿಗಳ ದರ ಏರಿಕೆಯ ಹೋಲಿಕೆ ಪಟ್ಟಿ ಬಿಡುಗಡೆ ಮಾಡಿದ್ದು, ತೈಲ ಸ್ವಾವಲಂಬನೆ ಹೊಂದದೇ ಇರಲು ಯುಪಿಎ ಸರ್ಕಾರ ಕಾರಣ ಎಂದು ದೂರಿದ್ದಾರೆ.
ಸರ್ಕಾರದ ಅವಧಿಯಲ್ಲಿ ದಿನಸಿ ಪದಾರ್ಥಗಳ ಬೆಲೆ ಏರಿಕೆ ಕಂಡಿವೆ. ಈರುಳ್ಳಿ ೧೦೦ರೂ, ಟೊಮೆಟೊ ೧೦೦ ರೂ, ಸಕ್ಕರೆ ೪೫ ರೂ, ಎಲ್ಪಿಜಿ ೯೦೧ ರೂ, ಬೇಳೆ ೮೫ ರೂ, ಎಲ್ಇಡಿ ಬಲ್ಬ್ ೪೦೦ ರೂ, ಇನ್ಸುರೆನ್ಸ್ ಪ್ರೀಮಿಯಂ ೫೦೦೦ ರೂಪಾಯಿ ಇತ್ತು. ಎನ್‌ಡಿಎ ಸರ್ಕಾರದ ಅವಧಿಯಲ್ಲಿ ಕಡಿಮೆಯಾಗಿದೆ ಎಂದು ತೋರಿಸಿದ್ದಾರೆ. ಈರುಳ್ಳಿ ೨೦ ರೂ, ಟೊಮೆಟೊ ೨೦ ರೂ, ಸಕ್ಕರೆ ೩೫ ರೂ, ಎಲ್ಪಿಜಿ ೮೪೫ರೂ, ಬೇಳೆ ೬೫ ರೂ, ಎಲ್ಇಡಿ ಬಲ್ಬ್ ೬೦ ರೂ, ಇನ್ಸುರೆನ್ಸ್ ಪ್ರೀಮಿಯಂ ೩೩೦ ರೂಪಾಯಿ ಆಗಿದೆ ಎಂದು ಟ್ವಿಟರ್ ನಲ್ಲಿಬಿಡುಗಡೆ ಮಾಡಿದ ಪಟ್ಟಿಯಲ್ಲಿ ತೋರಿಸಿದ್ದಾನೆ.
ಭಾರತ ಬಂದ್ ಮಾಡಿದ ಕಾಂಗ್ರೆಸ್ ಪಕ್ಷಕ್ಕೆ ನೈತಿಕತೆ ಇದೆಯೇ? pic.twitter.com/Os18Yf5Ce7
— G.M. Siddeshwara (@gmsiddeshwara) September 11, 2018
ಜನಸಾಮಾನ್ಯರು ಬದುಕುವಂತ ದಿನನಿತ್ಯ ಸಾಮಗ್ರಿಗಳ ಬೆಲೆ ಇದೆ. ಆದರೆ, ಯುಪಿಎ ಸರ್ಕಾರದ ಅವಧಿಯಲ್ಲಿ ದರ ದುಪ್ಪಟ್ಟು ಇದ್ದು ಸಾಮಾನ್ಯರು ಜೀವನ ನಡರಸುವುದು ಕಷ್ಟವಾಗುವಂತಿದೆ ಎಂದು ಟೀಕಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9986715401