ದಿನದ ಸುದ್ದಿ
ದಾವಣಗೆರೆ ಮಹಾನಗರಪಾಲಿಕೆ ಉಪಚುನಾವಣೆ : 02 ಸ್ಥಾನಗಳಿಗೆ 07 ಅಭ್ಯರ್ಥಿಗಳು ಕಣದಲ್ಲಿ
ಸುದ್ದಿದಿನ,ದಾವಣಗೆರೆ: ಮಹಾನಗರಪಾಲಿಕೆಯ ವಾರ್ಡ್ ನಂ.20 ಮತ್ತು 22 ರಲ್ಲಿ ರಾಜೀನಾಮೆಯಿಂದ ತೆರವಾಗಿರುವ ಸದಸ್ಯ ಸ್ಥಾನಗಳಿಗೆ ಉಪ ಚುನಾವಣೆ ನಡೆಸಲಾಗುತ್ತಿದ್ದು, 02 ಸ್ಥಾನಗಳಿಗೆ ಒಟ್ಟು 07 ಅಭ್ಯರ್ಥಿಗಳು ಅಂತಿಮ ಕಣದಲ್ಲಿ ಉಳಿದಂತಾಗಿದೆ.
ವಾರ್ಡ್ ಸಂಖ್ಯೆ 20 ರಲ್ಲಿ ಕಾಂಗ್ರೆಸ್ ಹಾಗೂ ಬಿ.ಜೆ.ಪಿ ಪಕ್ಷದ ಅಭ್ಯರ್ಥಿಗಳು ಸೇರಿದಂತೆ ಒಟ್ಟು 02 ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ದಾರೆ.
ವಾರ್ಡ್ ಸಂಖ್ಯೆ 22 ರಲ್ಲಿ ಅಭ್ಯರ್ಥಿಗಳು ಕಾಂಗ್ರೆಸ್-01, ಬಿ.ಜೆ.ಪಿ-01, ಎ.ಐ.ಎಂ.ಇ.ಐ.ಎಂ-01, ಪಕ್ಷೇತರ-02 ಸೇರಿದಂತೆ ಒಟ್ಟು 05 ಅಭ್ಯರ್ಥಿಗಳು ಕಣದಲ್ಲಿದ್ದಾರೆ.
ಮತದಾನ ಮಾ. 29 ರಂದು ಬೆಳಿಗ್ಗೆ 07 ರಿಂದ ಸಂಜೆ 5 ಗಂಟೆಯವರೆಗೆ ನಡೆಯಲಿದೆ ಎಂದು ಅಪರ ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ |ಕೋವಿಡ್ ವ್ಯಾಕ್ಸಿನ್ 2ನೇ ಡೋಸ್ ಹಾಕಿಸಿಕೊಳ್ಳದಿದ್ದರೆ ಲಸಿಕೆ ಫಲಕಾರಿಯಾಗುವುದಿಲ್ಲ
ಸುದ್ದಿದಿನ.ಕಾಂ|ವಾಟ್ಸಾಪ್|9980346243