ದಿನದ ಸುದ್ದಿ

ದಾವಣಗೆರೆ | ಆಧ್ಯಾತ್ಮ ಪರಿಚಾರಕಿ ರಾಜಯೋಗಿನಿ ನಾಗರತ್ನಮ್ಮ ಅವರಿಗೆ ನೆರವಾಗಿ

Published

on

ಸುದ್ದಿದಿನ, ದಾವಣಗೆರೆ : ಸಂಪೂರ್ಣ ಸಮಾಜ ಸೇವೆಗೆ ತಮ್ಮನ್ನು ಸಮರ್ಪಿಸಿಕೊಂಡು ಸುಮಾರು 40ಕ್ಕೂ ಅಧಿಕ ವರ್ಷಗಳಿಂದ ಆಧ್ಯಾತ್ಮ ಪರಿಚಾರಕರಾಗಿ, ಕಾಲಜ್ಞಾನ, ಬ್ರಹ್ಮ ಜ್ಞಾನ, ಛಾಯಾಪುರುಷ, ಸಾಂಖ್ಯಾ ತಾರಕ ಇತ್ಯಾದಿ ಆತ್ಮೋನ್ನತಿಯ ಬೋಧಕರಾಗಿ ಹಾಗೂ ವಿಷಜಂತು ಕಚ್ಚಿದವರಿಗೆ ಉಚಿತವಾಗಿ ಗಿಡಮೂಲಿಕೆ ಔಷಧ ನೀಡಿ ಗುಣಪಡಿಸುವ ಮೂಲಕ ಹಲವರ ಜೀವ ಉಳಿಸುವ ಕಾರ್ಯವನ್ನೂ ಮಾಡಿರುವ ದಾವಣಗೆರೆ ವಿನೋಬನಗರ ನಿವಾಸಿ ರಾಜಯೋಗಿನಿ ಶ್ರೀಮತಿ ನಾಗರತ್ನಮ್ಮ ಅವರಿಗೆ ಈಗ್ಗೆ ಕೆಲವು ತಿಂಗಳುಗಳಿಂದ ಅನಾರೋಗ್ಯ ಉಂಟಾಗಿದೆ.

ಯಾವುದೇ ಆಸ್ತಿ, ಮನೆ, ಮಠ, ಆರ್ಥಿಕ ಮೂಲದ ಆಶ್ರಯವಿಲ್ಲದಿದ್ದರೂ ನಿಸ್ವಾರ್ಥ ಸೇವಾಕಾಂಕ್ಷಿಯಾಗಿ 40 – 45 ವರ್ಷಗಳಿಂದಲೂ ಉಚಿತ ಸೇವೆಯಲ್ಲೇ ತೊಡಗಿ ಪ್ರಸ್ತುತ ಆರ್ಥಿಕ ಸಂಕಷ್ಟ ಅನುಭವಿಸುತ್ತಿರುವ ಅವರಿಗೆ ಈಗ ಬಾಡಿಗೆ ಹಣ ಹಾಗೂ ಆಸ್ಪತ್ರೆ ಖರ್ಚು ನಿಭಾಯಿಸುವ ಸಮಸ್ಯೆ ಉಲ್ಭಣಿಸಿದೆ. ಆದ್ದರಿಂದ ಆಧ್ಯಾತ್ಮ ಜೀವಿಗಳು, ದಾನಿಗಳು, ಸಹಾಯ ಮಾಡುವ ಮನಸುಳ್ಳವರು ಅವರಿಗೆ ನೆರವಾಗುವಂತೆ ಈ ಮೂಲಕ ನಾಗರತ್ನಮ್ಮ ನವರು ಮನವಿ ಮಾಡಿದ್ದಾರೆ.

ನೆರವು ನೀಡಲು ಬಯಸುವವರು ಅವರ ಮೊ. ಸಂ : 9741458905 ಗೆ ಸಂಪರ್ಕಿಸಿ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version