ದಿನದ ಸುದ್ದಿ

ದಾವಣಗೆರೆಯಲ್ಲಿ ನಾಳೆ ವಿದ್ಯುತ್ ವ್ಯತ್ಯಯ

Published

on

ಸುದ್ದಿದಿನ,ದಾವಣಗೆರೆ : 66/11 ಕೆ.ವಿ. ವಿ.ವಿ. ಕೇಂದ್ರ ದಿಂದ ಹೊರಡುವ ಎಂ.ಸಿ.ಸಿ.ಬಿ ಹಾಗೂ ಡಿ.ಸಿ.ಎಂ. ಫೀಡರ್‍ಗಳಲ್ಲಿ ಬೆ.ವಿ.ಕಂ ವತಿಯಿಂದ ತುರ್ತು ಕಾರ್ಯವನ್ನು ಹಮ್ಮಿಕೊಂಡಿರುವುದರಿಂದ ಅ.29 ರಂದು ಬೆಳಿಗ್ಗೆ 10 ರಿಂದ ಸಂಜೆ 4 ಗಂಟೆಯವರೆಗೆ ಈ ಕೆಳಕಂಡ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವುಂಟಾಗಲಿದೆ.

ಎಮ್.ಸಿ.ಸಿ.ಬಿ ಫೀಡರ್ ವ್ಯಾಪ್ತಿಯ ಶಾಬನೂರು ರಸ್ತೆ, ಎಸ್.ಎಸ್. ಲೇಔಟ್, ಎ ಬ್ಲಾಕ್, ಕುವೆಂಪು ನಗರ, ಬಾಟ್ಲಿ ಬಿಲ್ಡಿಂಗ್ ಸುತ್ತ ಮುತ್ತ, ಸಿದ್ದವೀರಪ್ಪ ಬಡಾವಣೆ, 1ನೇ ಅಡ್ಡ ರಸ್ತೆ ಯಿಂದ 7ನೇ ಅಡ್ಡರಸ್ತೆವರೆಗೆ, ಗ್ಲಾಸ್ ಹೌಸ್, ಬಾಪೂಜಿ ಬ್ಯಾಂಕ್ ಸಮುದಾಯ ಭವನದ ಹಿಂಭಾಗದ ಪ್ರದೇಶ, ಬಿ.ಐ.ಇ.ಟಿ. ಕಾಲೇಜು.

ಗುಂಡಿ ಛತ್ರದ ಸುತ್ತ ಮುತ್ತ, ಸದ್ಯೋಜಾತ ಮಠದ ಸುತ್ತಮುತ್ತ, ಕಾಸಲ್ ಶೆಟ್ಟಿ ಪಾರ್ಕ್, ಶಾಮನೂರು ಶಿವಶಂಕರಪ್ಪರವರ ನಿವಾಸದ ಸುತ್ತ ಮುತ್ತ ಪ್ರದೇಶಗಳು.

ಡಿ.ಸಿ.ಎಂ. ಫೀಡರ್ ವ್ಯಾಪ್ತಿಯ ಶ್ರೀರಾಮ ಬಡಾವಣೆ, ಡಿ.ಸಿ.ಎಂ. ಟೌನ್‍ಶಿಪ್, ಶಕ್ತಿನಗರ, ಅಂಬಿಕಾ ನಗರ, ಕೊಟ್ಟೂರೇಶ್ವರ ಬಡಾವಣೆ, ಜಯನಗರ, ಶೇಖರಪ್ಪ ಗೋಡೌನ್ ಹಾಗೂ ಸುತ್ತ ಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ ಪ್ರಕಟಣೆ ತಿಳಿಸಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version