ದಿನದ ಸುದ್ದಿ

ದಾವಣಗೆರೆ | ಎಂಸಿಸಿ ‘ಬಿ’ ಬ್ಲಾಕ್ ನ ಲಕ್ಷ್ಮೀ ವೆಂಕಟೇಶ್ವರ ದೇವಸ್ಥಾನದ ಹುಂಡಿ ಕಳವು

Published

on

ಸುದ್ದಿದಿನ,ದಾವಣಗೆರೆ: ನಗರದ ಎಂಸಿಸಿ ‘ಬಿ’ ಬ್ಲಾಕ್ ನಲ್ಲಿರುವ ಲಕ್ಷ್ಮೀ ವೆಂಕಟೇಶ್ವರ ದೇವಸ್ಥಾನದ ಹುಂಡಿ ಕಳ್ಳತನವಾಗಿದೆ. ಶನಿವಾರ ತಡ ರಾತ್ರಿ ಈ ಘಟನೆ ಸಂಭವಿಸಿದೆ.

ದೇವಸ್ಥಾನದ ಮುಖ್ಯ‌ ದ್ವಾರದ ಬೀಗ ಹೊಡೆಯಲು ಕಳ್ಳರು ಪ್ರಯತ್ನಿಸಿದ್ದು, ಅದು ಸಾಧ್ಯವಾಗದಿದ್ದಾಗ ಉತ್ತರ ದ್ವಾರದ ಕಬ್ಬಿಣದ ಸರಳುಗಳನ್ನು ಕೆಲವು ಆಯುಧಗಳಿಂದ ಮುರಿದು ದೇವಸ್ಥಾದೊಳಗೆ ಹೋಗಿದ್ದಾರೆ. ನಂತರ ಹುಂಡಿಗಳನ್ನು ಹೊಡೆದು ಹಣವನ್ನದೋಚಿಕೊಂಡು‌ ಪರಾರಿ ಆಗಿದ್ದಾರೆ.

ದೇವಸ್ಥಾನದ ಸಮಿತಿಯು ಎರಡು ತಿಂಗಳ ಹಿಂದೆಯಷ್ಟೇ ಹುಂಡಿಯನ್ನು ಏಣಿಕೆ ಮಾಡಿದ್ದರಿಂದ ಅಂದಾಜು 50 ಸಾವಿರ ಹಣ ಕಳ್ಳತನವಾಗಿರುವುದಾಗಿ ಶಂಕೆ ವ್ಯಕ್ತವಾಗಿದೆ. ಹಾಗೆ ದೇವರ ಅಭರಣಗಳಿದ್ದ ಕೊಠಡಿ ಬಾಗಿಲನ್ನು ಸಹ ಕಳ್ಳರು ತೆಗೆಯಲು ಪ್ರಯತ್ನಿಸಿ ವಿಫಲರಾಗಿದ್ದಾರೆ. ಸಿಸಿಟಿವಿ ಗಳನ್ನು ಕಳ್ಳರು ಹಾನಿಮಾಡಿದ್ದಾರೆ. ಪೊಲೀಸರು ತನಿಖೆಯನ್ನು ಕೈಗೊಂಡಿದ್ಧಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version