ದಿನದ ಸುದ್ದಿ

ದಾವಣಗೆರೆ | 1005 ಕೊರೋನಾ ಸಕ್ರಿಯ ಪ್ರಕರಣಗಳು

Published

on

ಸುದ್ದಿದಿನ, ದಾವಣಗೆರೆ : ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಬಸವರಾಜ್ ಬುಧವಾರ ವಿಡಿಯೋ ಕಾನ್ಫರೆನ್ಸ್ ಮೂಲಕ ಜಿಲ್ಲಾಡಳಿತ ಮತ್ತು ತಾಲ್ಲೂಕು ಆಡಳಿತಗಳೊಂದಿಗೆ ಸಭೆ ನಡೆಸಿ, ಕೋವಿಡ್ ನಿಯಂತ್ರಣದ ಹೊಸ ಮಾರ್ಗಸೂಚಿಗಳು ಮತ್ತು ದಾವಣಗೆರೆ ನಗರ ಹಾಗೂ ತಾಲ್ಲೂಕುಗಳಲ್ಲಿನ ಕೋವಿಡ್ ಹಿನ್ನೆಲೆಯ ವಾಸ್ತವಿಕ ಸ್ಥಿತಿಗತಿಗಳ ಬಗ್ಗೆ ಸವಿವರವಾಗಿ ಡಿಸಿ, ಎಸ್‍ಪಿ, ಡಿಹೆಚ್‍ಓ, ತಾಲ್ಲೂಕುಗಳ ತಹಶೀಲ್ದಾರರು ಮತ್ತು ಆರೋಗ್ಯಾಧಿಕಾರಿಗಳಿಂದ ಮಾಹಿತಿ ಪಡೆದು ಮಾತನಾಡಿದರು.

ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ರಾಘವನ್ ಮಾತನಾಡಿ, ಜಿಲ್ಲೆಯಲ್ಲಿ 387415 ಆರ್.ಟಿ.ಪಿ.ಸಿ.ಆರ್, 111204 ರ್ಯಾಪಿಡ್ ಆ್ಯಕ್ಸಿಜನ್ ಟೆಸ್ಟ್ ಸೇರಿದಂತೆ ಒಟ್ಟು 4,98,619 ಪರೀಕ್ಷೆ ಮಾಡಲಾಗಿದ್ದು, ಏ.27 ರವರೆಗೆ 1454 ಸಕ್ರಿಯ ಪ್ರಕರಣಗಳಿದ್ದು ಆಸ್ಪತ್ರೆಯಲ್ಲಿ 517 ಜನರಿದ್ದರೆ ಮನೆಯಲ್ಲಿ ಪ್ರತ್ಯೇಕವಾಗಿ 937 ಜನರಿದ್ದಾರೆ. ಇದುವರೆಗೆ ಕೋವಿಡ್‍ನಿಂದ 268 ಜನರು ಮೃತಪಟ್ಟಿದ್ದಾರೆ.

ಇದನ್ನೂ ಓದಿ | ದಾವಣಗೆರೆ | ಜಿಲ್ಲಾ ಉಸ್ತುವಾರಿ ಸಚಿವರಿಂದ ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ : ಕೋವಿಡ್ ನಿಯಂತ್ರಣ ಮಾರ್ಗಸೂಚಿಗಳ ಕಟ್ಟುನಿಟ್ಟಿನ ಜಾರಿಗೆ ಸಚಿವರ ಸೂಚನೆ

ದಾವಣಗೆರೆ ತಾಲ್ಲೂಕಿನಲ್ಲಿ ಒಟ್ಟು 1,97,788 ಕೋವಿಡ್ ಪರೀಕ್ಷೆ ಮಾಡಲಾಗಿದೆ. 14,269 ಜನರಿಗೆ ಪಾಸಿಟಿವ್ ಬಂದಿದ್ದು 12,985 ರೋಗಿಗಳು ಗುಣ ಮುಖವಾಗಿದ್ದಾರೆ. ಇಲ್ಲಿವರೆಗೂ 179 ಜನ ಕೋವಿಡ್ ಸೋಂಕಿನಿಂದ ಮೃತಪಟ್ಟಿದ್ದು, 636 ಜನರನ್ನು ಮನೆಯಲ್ಲೆ ಪ್ರತ್ಯೇಕವಾಗಿ ಇರಿಸಲ್ಪಟ್ಟಿದೆ. ಪ್ರಸ್ತುತ 369 ಜನರು ಆಸ್ಪತ್ರೆಯಲ್ಲಿ ದಾಖಲಾಗಿದ್ದು, 1005 ಸಕ್ರಿಯ ಪ್ರಕರಣಗಳಿವೆ.

ಹರಿಹರ ತಾಲ್ಲೂಕಿನಲ್ಲಿ ಒಟ್ಟು 88083 ಕೋವಿಡ್ ಪರೀಕ್ಷೆ ಮಾಡಲಾಗಿದೆ. 3699 ಜನರಿಗೆ ಪಾಸಿಟಿವ್ ಬಂದಿದ್ದು, 3507 ರೋಗಿಗಳು ಗುಣ ಮುಖವಾಗಿದ್ದಾರೆ. ಇಲ್ಲಿವರೆಗೂ 38 ಜನ ಮೃತಪಟ್ಟಿದ್ದಾರೆ. 97 ಜನರನ್ನು ಮನೆಯಲ್ಲೆ ಪ್ರತ್ಯೇಕವಾಗಿ ಇರಿಸಲ್ಪಟ್ಟಿದೆ. ಪ್ರಸ್ತುತ 51 ಜನ ಆಸ್ಪತ್ರೆಯಲ್ಲಿ ದಾಖಲಾಗಿದ್ದು, 148 ಸಕ್ರಿಯ ಪ್ರಕರಣಗಳಿವೆ. ಜಗಳೂರು ತಾಲ್ಲೂಕಿನಲ್ಲಿ ಒಟ್ಟು 60763 ಕೋವಿಡ್ ಪರೀಕ್ಷೆ ಮಾಡಲಾಗಿದೆ. 1273 ಜನರಿಗೆ ಪಾಸಿಟಿವ್ ಬಂದಿದ್ದು, 1181 ಜನರು ಗುಣಮುಖರಾಗಿದ್ದಾರೆ.

11 ಜನ ಮೃತಪಟ್ಟಿದ್ದು 35 ಜನರನ್ನು ಹೋಮ್ ಐಸೋಲೆಶನ್ ಮಾಡಲಾಗಿದೆ. ಪ್ರಸ್ತುತ 39 ಜನ ಆಸ್ಪತ್ರೆಯಲ್ಲಿ ದಾಖಲಾಗಿದ್ದು, 74 ಜನರು ಚಿಕಿತ್ಸೆ ಪಡೆಯುತ್ತಿದ್ದಾರೆ. ಚನ್ನಗಿರಿ ತಾಲ್ಲೂಕಿನಲ್ಲಿ ಒಟ್ಟು 81057 ಕೋವಿಡ್ ಪರೀಕ್ಷೆ ಮಾಡಲಾಗಿದೆ. 2462 ಜನರಿಗೆ ಪಾಸಿಟಿವ್ ಬಂದಿದ್ದು, 2347 ಜನರು ಗುಣಮುಖರಾಗಿದ್ದಾರೆ. 10 ಜನ ಮೃತಪಟ್ಟಿದ್ದು 96 ಜನರನ್ನು ಹೋಮ್ ಐಸೊಲೇಷನಲ್ಲಿದ್ದಾರೆ. ಪ್ರಸ್ತುತ 03 ಜನ ಆಸ್ಪತ್ರೆಯಲ್ಲಿದ್ದಾರೆ. 99 ಸಕ್ರಿಯ ಪ್ರಕರಣ.

ಹೊನ್ನಾಳಿ ತಾಲ್ಲೂಕಿನಲ್ಲಿ ಒಟ್ಟು 70928 ಕೋವಿಡ್ ಪರೀಕ್ಷೆ ಮಾಡಲಾಗಿದೆ. 2905 ಜನರಿಗೆ ಪಾಸಿಟಿವ್ ಬಂದಿದ್ದು, 2797 ಜನರು ಗುಣಮುಖರಾಗಿದ್ದಾರೆ. ಇಲ್ಲಿವರೆಗೂ 09 ಜನ ಕೊರೊನಾ ಸೋಂಕಿನಿಂದ ಮೃತಪಟ್ಟಿದ್ದು, 73 ಜನರನ್ನು ಹೋಮ್ ಐಸೊಲೇಷನಲ್ಲಿದ್ದಾರೆ. ಪ್ರಸ್ತುತ 12 ಜನ ಆಸ್ಪತ್ರೆಯಲ್ಲಿ ದಾಖಲಾಗಿದ್ದು, 85 ಜನರು ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಮಾಹಿತಿ ನೀಡಿದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version