ದಿನದ ಸುದ್ದಿ

ದಾವಣಗೆರೆ : ರೈಲ್ವೆ ನಿಲ್ದಾಣದಲ್ಲಿ 250 ಅಡಿ ಆಳದ 100 ವರ್ಷದ ಪುರಾತನ ಬಾವಿ ಪತ್ತೆ..!

Published

on

ಸುದ್ದಿದಿನ. ದಾವಣಗೆರೆ : ಜಿಲ್ಲೆಯ ರೈಲ್ವೆ ನಿಲ್ದಾಣದಲ್ಲಿ‌ ಸುಮಾರು 250 ಅಡಿಯ ಪುರಾತನ ಬಾವಿ ಪತ್ತೆಯಾಗಿದೆ. ಎರಡು ತಿಂಗಳಿನಿಂದ ರೈಲ್ವೆ ನಿಲ್ದಾಣದಲ್ಲಿ ಕಾಮಗಾರಿಯು ನಡೆಯುತ್ತಿದ್ದು, ಗುರುವಾರ 2ನೇ ರೈಲ್ವೇ ಫ್ಲಾಟ್ ಫಾರ್ಮ್ ಬಳಿ ಮದ್ಯಾಹ್ನ ಈ ಬಾವಿ‌ ಪತ್ತೆಯಾಗಿದೆ.

ತಕ್ಷಣ ಅಲ್ಲಿನ ಸಿಬ್ಬಂದಿ ಮೇಲಾಧಿಕಾರಿಗಳಿಗೆ ತಿಳಿಸಿದ್ದಾರೆ. ಮಾಹಿತಿ ತಿಳಿದ ಅವರು ಬಂದು ಬಾವಿಯನ್ನು ನೋಡಿದ್ದಾರೆ. ಇದು ನೂರು ವರ್ಷಕ್ಕೂ ಹಳೆಯ ಬಾವಿ ಎಂದು ಅಧಿಕಾರಿಗಳು ಗುರುತಿಸಿದ್ದಾರೆ. ನಂತರ ಅದರ ಪರಿಶೀಲನೆ ಮಾಡಲು ಪುರಾತತ್ವ ಇಲಾಖೆಗೆ ಫೋನ್ ಮಾಡಿ ತಿಳಿಸಿದ್ದಾರೆ.

ಬಾವಿ ನೋಡಲು ತುಂಬ ಆಳವಾಗಿದ್ದು, ನಾಲ್ಕು ಕಡೆಯೂ ಸಣ್ಣ ಕಲ್ಲುಗಳು ಮೆಟ್ಟಿಲು ರೀತಿ ಇದೆ. ಜೊತೆಗೆ ಬಾವಿ ತಳಭಾಗದಲ್ಲಿ ಕಬ್ಬಿಣದ ಸರಳುಗಳನ್ನು ಅಳವಡಿಸಿರುವುದನ್ನು ಕಾಣಬಹುದಾಗಿದೆ. ಸದ್ಯಕ್ಕೆ ಬಾವಿ ಹತ್ತಿರ ಜನರನ್ನು ಬಿಡದೆ ರೈಲ್ವೆ ಸಿಬ್ಬಂದಿ ಎಚ್ಚರ ವಹಿಸುತ್ತಿದ್ದಾರೆ. ಈ ಬಾವಿಯನ್ನು ಮುಚ್ಚಿ ಕಾಮಗಾರಿಯನ್ನು ಮುಂದುವರಿಸುತ್ತಾರೆ ಎಂಬ ಮಾಹಿತಿ ತಿಳಿದು ಬಂದಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version