ದಿನದ ಸುದ್ದಿ

ದಾವಣಗೆರೆ | ಎ.ವಿ.ಕೆ ಕಾಲೇಜು ಉಪನ್ಯಾಸಕಿ ಗೀತಾ ಬಸವರಾಜ್‌ಗೆ ಪಿಹೆಚ್.ಡಿ ಪದವಿ

Published

on

ಸುದ್ದಿದಿನ,ದಾವಣಗೆರೆ : ನಗರದ ಎ.ವಿ.ಕೆ ಮಹಿಳಾ ಕಾಲೇಜಿನ ಕನ್ನಡ ಉಪನ್ಯಾಸಕರಾದ ಗೀತಾ ಬಸವರಾಜು ಅವರಿಗೆ ಹಂಪಿ ಕನ್ನಡ ವಿಶ್ವವಿದ್ಯಾಲಯದಿಂದ ಪಿ. ಹೆಚ್.ಡಿ. ಪದವಿ ಲಭಿಸಿದೆ. ಇವರು ಹೊಳಲ್ಕೆರೆ ತಾಲೂಕಿನ ಆರ್. ನುಲೇನೂರು ಗ್ರಾಮದವರು.

ಚಿತ್ರದುರ್ಗದ ಸರ್ಕಾರಿ ಕಲಾ ಕಾಲೇಜಿನ ಸಹ ಪ್ರಾಧ್ಯಾಪಕ ಡಾ. ಜೆ. ಕರಿಯಪ್ಪ ಮಾಳಿಗೆ ಅವರ ಮಾರ್ಗದರ್ಶನದಲ್ಲಿ ‘ಕನ್ನಡ ಮಹಿಳಾ ಕಥಾ ಸಾಹಿತ್ಯದಲ್ಲಿ ಸ್ತ್ರೀತ್ವದ ವಿವೇಚನೆ‘ ವಿಷಯ ಕುರಿತು ಗೀತಾ ಅವರು ಮಂಡಿಸಿದ ಮಹಾ ಪ್ರಬಂಧಕ್ಕೆ ಹಂಪಿ ಕನ್ನಡ ವಿವಿ ಈ ಪದವಿ ನೀಡಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version