ದಿನದ ಸುದ್ದಿ
ದಾವಣಗೆರೆ | ಕರ್ಫ್ಯೂ ನಡುವೆಯೂ ಹೋಮ್ ಕ್ವಾರಂಟೈನ್ ಗೆ ಸೂಚಿಸಿದ್ದ ಮಹಿಳೆಯಿಂದ ಮದ್ಯ ಮಾರಾಟ : ಮಹಿಳೆ ವಿರುದ್ಧ ಪೊಲೀಸ್ ಕ್ರಮ
ಸುದ್ದಿದಿನ, ದಾವಣಗೆರೆ : ಕೋವಿಡ್ -19 ಕರ್ಫ್ಯೂ ಜಾರಿಯಲ್ಲಿದ್ದರೂ ನಗರದ ನಿಟುವಳ್ಳಿಯಲ್ಲಿ ಮಹಿಳೆಯೊಬ್ಬರು ಮದ್ಯ ಮಾರಾಟ ಮಾಡಿ ಪೊಲೀಸರಿಗೆ ಸಿಕ್ಕಿ ಬಿದ್ದಿರುವ ಘಟನೆ ನಡೆದಿದೆ.
ಈ ಮಹಿಳೆಯನ್ನು ಹೋಮ್ ಕ್ವಾರಂಟೈನ್ ಗೆ ಸೂಚಿಸಿದ್ದು ಆದರೂ ಕೂಡ ಮಹಿಳೆ ಮದ್ಯ ಮಾರಾಟ ಮಾಡಿದ್ದಾರೆ.ನಿಟುವಳ್ಳಿಯ ಶಾಲೆಯೊಂದರ ಬಳಿ ಈ ಮಹಿಳೆಯು ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿರುವುದನ್ನು ಗಮನಿಸಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಸ್ಥಳಕ್ಕೆ ಧಾವಿಸಿದ ಪೊಲೀಸರು ಹಾಗೂ ಅಧಿಕಾರಿಗಳು ಈ ಮಹಿಳೆಯ ವಿರುದ್ಧ ಕ್ರಮ ಕೈಗೊಂಡಿದ್ದಾರೆ.
ಕೊರೊನಾ ಸೋಂಕು ತಡೆಗೆ ಭಾನುವಾರ ಸಂಪೂರ್ಣ ಲಾನ್ ಜಾರಿ ಮಾಡಲಾಗಿದ್ದರೂ, ನಿಷೇಧಾಜ್ಞೆ ನಡುವೆ ಮಹಿಳೆ ಅಕ್ರಮವಾಗಿ ಮದ್ಯ ಮಾರಾಟ ಮಾಡಿದ್ದು ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ ಎಂದು ಹೇಳಲಾಗಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243