ದಿನದ ಸುದ್ದಿ
ದಾವಣಗೆರೆ | ಗೌರಮ್ಮ ಎಂ.ಎಸ್ ಅವರಿಗೆ ಪಿ ಎಚ್ ಡಿ ಪದವಿ
ಸುದ್ದಿದಿನ,ದಾವಣಗೆರೆ: ಜಿಲ್ಲೆಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಗೌರಮ್ಮ ಎಂ.ಎಸ್ ಅವರಿಗೆ, ಮಂಗಳವಾರ ಕರ್ನಾಟಕ ವಿಶ್ವವಿದ್ಯಾಲಯವು, ಗಾಂಧಿ ಭವನದಲ್ಲಿ ಜರುಗಿದ ಕವಿವಿ 72 ನೇಯ ವಾರ್ಷಿಕ ಘಟಿಕೋತ್ಸವದಲ್ಲಿ ಪಿ ಎಚ್ ಡಿ ಪದವಿ ನೀಡಿದೆ.
ಕರ್ನಾಟಕ ವಿಶ್ವವಿದ್ಯಾಲಯದ,ಡಾ.ಆರ್.ಸಿ.ಹಿರೇಮಠ ಕನ್ನಡ ಅಧ್ಯಯನ ಪೀಠ,ಪ್ರಾಧ್ಯಾಪಕ (ನಿವೃತ್ತ) ಡಾ.ವೀರಣ್ಣ ರಾಜೂರ ಮಾರ್ಗದರ್ಶನ ದಲ್ಲಿ ‘ಕನ್ನಡದ ಕೈಫಿಯತ್ತುಗಳು – ಒಂದು ಸಾಂಸ್ಕೃತಿಕ ಅಧ್ಯಯನ‘ ಎಂಬ ಮಹಾ ಪ್ರಬಂಧವನ್ನು ವಿಶ್ವವಿದ್ಯಾಲಯಕ್ಕೆ ಸಲ್ಲಿಸಿ ಪಿ ಎಚ್ ಡಿ ಪದವಿ ಪಡೆದಿದ್ದಾರೆ.
ಗೌರಮ್ಮ ಎಂ.ಎಸ್ ಅವರು ವಿಜಯನಗರ ಜಿಲ್ಲೆ, ಹರಪನಹಳ್ಳಿ ತಾಲೂಕಿನ ಯಡಿಹಳ್ಳಿ ಗ್ರಾಮದವರು. ತಂದೆ ನಿವೃತ್ತ ಮುಖ್ಯಶಿಕ್ಷಕ ಕೊಟ್ರಯ್ಯ ಎಸ್.ಎಂ., ತಾಯಿ ರತ್ನಮ್ಮ ಎಸ್.ಎಂ ಅವರ ಪುತ್ರಿ.
ಸುದ್ದಿದಿನ.ಕಾಂ|ವಾಟ್ಸಾಪ್|9980346243