ದಿನದ ಸುದ್ದಿ

ದಾವಣಗೆರೆಯಲ್ಲಿ ಮೈಸೂರ್ ಸಿಲ್ಕ್ ಮಾರಾಟ ಮಳಿಗೆಯನ್ನು ಮುಚ್ಚಲು ಅಧಿಕಾರಿಗಳ ಹುನ್ನಾರ : ಶಶಿಕಲಾ ಮೂರ್ತಿ ಆರೋಪ

Published

on

ಸುದ್ದಿದಿನ, ದಾವಣಗೆರೆ: ಪ್ರತಿಷ್ಠಿತ ವಾಣಿಜ್ಯ ನಗರಿ ಎಂದು ಹೆಸರಾಗಿರುವ ದಾವಣಗೆರೆ ನಗರದಲ್ಲಿ ಮೈಸೂರ್ ಸಿಲ್ಕ್ ಮಾರಾಟ ಮಳಿಗೆಯನ್ನು ಮುಚ್ಚಲು ಅಧಿಕಾರಿಗಳು ಹುನ್ನಾರ ನಡೆಸುತ್ತಿದ್ದಾರೆ ಎಂದು ಶಶಿಕಲಾ ಮೂರ್ತಿ ಎಂ.ಜಿ.ನಲ್ಕುದುರೆ ಅ ಭಾ ವೀ ಮ ಸದಸ್ಯೆ ತಿಳಿಸಿದ್ದಾರೆ.

ಆ 31ಕ್ಕೆ ಮಳಿಗೆ ಮುಚ್ಚುವ ಮಾತು ಜಿಲ್ಲೆಯ ನಾಗರಿಕರಲ್ಲಿ ಕೇಳಿ ಬರುತ್ತಿದೆ ಮತ್ತು ಮಹಿಳೆಯಲ್ಲಿ ಆತಂಕ ಸೃಷ್ಟಿಯಾಗಿದೆ. ಜಿಲ್ಲೆಯ ನಾಗರಿಕ ಬಂಧುಗಳು ಹೋರಾಟ ಮಾಡಿ ಮಳಿಗೆಯನ್ನು ಉಳಿಸಿಕೊಳ್ಳಬೇಕು ಎಂದು ಈ ಮೂಲಕ ಮನವಿಮಾಡಿಕೊಳ್ಳುತ್ತಿದ್ದೇನೆ ಎಂದಿದ್ದಾರೆ.

ಕೇವಲ ಮೈಸೂರ್ ಬೆಂಗಳೂರಿಗೆ ಸೀಮಿತವಾಗಿದ್ದ ಮಳಿಗೆ ಎಸ್ ಎಸ್ ಮಲ್ಲಿಕಾರ್ಜುನ್ ಅವರು ಅಧಿಕಾರ ಅವಧಿಯಲ್ಲಿ ಮತ್ತು ಡಿ.ಬಸವರಾಜ್ ಅವರು ನಿಗಮದ ಅಧ್ಯಕ್ಷರಾಗಿದ್ದಾಗ ನಗರದಲ್ಲಿ ಮೈಸೂರ್ ಸಿಲ್ಕ್ ಮಾರಾಟ ಮಳಿಗೆಯನ್ನು ಪ್ರಾರಂಭಿಸಲಾಗಿತ್ತು.ಪ್ರತಿ ವರ್ಷ ಉತ್ತಮ ವ್ಯಾಪಾರ ವಹಿವಾಟು ನಡೆಯುತ್ತಿತ್ತು ಅಲ್ಲದೆ ಸಾಕಷ್ಟು ಮಹಿಳೆಯರು ತಮಗೆ ಇಷ್ಟವಾದ ಸೀರೆಯನ್ನು ದೂರದ ಜಿಲ್ಲೆಗೆ ಹೋಗಿ ಖರೀದಿ ಮಾಡುವ ಗೋಜಲು ತಪ್ಪಿತು.

ದಾವಣಗೆರೆಯ ವನಿತೆಯರು ತಮಗೆ ಬೇಕಾದ ಬಣ್ಣ ವಿನ್ಯಾಸ ಮತ್ತು ದರಗಳ ಆಯ್ಕೆ ಯ ಜೊತೆಗೆ ಮಧ್ಯಮ ವರ್ಗದ ಮಹಿಳೆಯರಿಗೆ ಮೈಸೂರು ಸಿಲ್ಕ್ ದೂರದ ಮಾತಾಗಿತ್ತು ಆದರೆ ಸ್ಕೀಮ್ ಮೂಲಕ ಪ್ರತಿ ತಿಂಗಳು ಕಂತಿನ ಮೂಲಕ ಹಣ ಕಟ್ಟಿ ತಮ್ಮ ಬೇಕಾದ ದರಗಳಲ್ಲಿ ಸೀರೆ ಕೊಳ್ಳುತ್ತಿದ್ದರು ಆದರೆ ಇಂದು ಅಧಿಕಾರಿಗಳ ಹುನ್ನಾರದಿಂದ ಮಳಿಗೆ ಮುಚ್ಚುವ ಅವೈಜ್ಞಾನಿಕ ತೀರ್ಮಾನ ಕೈಗೊಂಡಿದೆ ಎಂದು ಆರೋಪಿಸಿದ್ದಾರೆ.

ಸಾರ್ವಜನಿಕರ ಮತ್ತು ಸಿಬ್ಬಂದಿಯವರಿಗೆ ಅನಾನುಕೂಲ ಆಗದಂತೆ ಯಾವುದೇ ಕಾರಣಕ್ಕೂ ಮಳಿಗೆಯನ್ನು ಮುಚ್ಚದಂತೆ ನಿಗಮದವರು ಎಲ್ಲಾರೂ ಹಿತಾಸಕ್ತಿಯಿಂದ ತಿರ್ಮಾನ ಕೈ ಬಿಡುವಂತೆ ಈ ಮೂಲಕ ಮನವಿಮಾಡಿಕೊಳ್ಳುತ್ತಿದ್ದೇನೆ ಎಂದಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version