ದಿನದ ಸುದ್ದಿ
ದಾವಣಗೆರೆ | ಕೆ.ಬಿ.ಬಡಾವಣೆ ಬಿಸಿಎಂ ಹಾಸ್ಟೆಲ್ ನಲ್ಲಿ ಕ್ವಾರಂಟೈನ್ ವದಂತಿ : ಸ್ಥಳೀಯರಿಂದ ವಿರೋಧ
ಸುದ್ದಿದಿನ, ದಾವಣಗೆರೆ : ನಗರದ ಕೆ.ಬಿ.ಬಡಾವಣೆಯ ಒಂದನೇ ಕ್ರಾಸ್ ಬಳಿ ಬಿಸಿಎಂ ಹಾಸ್ಟೆಲ್ ಬಳಿ ಕ್ವಾರಂಟೈನ್ ಮಾಡುತ್ತಾರೆ ಎಂಬ ವದಂತಿ ಹಿನ್ನೆಲೆಯಲ್ಲಿ ಅಲ್ಲಿನ ಸ್ಥಳೀಯರು ಸೋಮವಾರ ವಿರೋಧ ವ್ಯಕ್ತಪಡಿಸಿದರು.
ಜಗಳೂರು ಶಾಸಕ ಎಸ್.ವಿ. ರಾಮಚಂದ್ರ ಅವರ ನಿವಾಸದ ಬಳಿ ಇರುವ ಹಾಸ್ಟೆಲ್ ಅನ್ನು ಸ್ವಚ್ಛಗೊಳಿಸಲಾಗಿತ್ತು. ಇದರಿಂದ ಅನುಮಾನಗೊಂಡ ಸ್ಥಳೀಯರು ಜಮಾವಣೆಗೊಂಡು ವಿರೋಧ ವ್ಯಕ್ತಪಡಿಸಿದರು. ಇದು ಜನಸವತಿ ಪ್ರದೇಶವಾಗಿದ್ದು, ವೃದ್ಧರು ಹಾಗೂ ಮಕ್ಕಳು ಸಂಚರಿಸುತ್ತಾರೆ. ಆದ್ದರಿಂದ ಇಲ್ಲಿ ಕ್ವಾರಂಟೈನ್ ಮಾಡಬಾರದು. ಹೊರಗಡೆ ಎಲ್ಲಿ ಬೇಕಾದರೂ ಕ್ವಾರಂಟೈನ್ ಮಾಡಲಿ’ ಎಂದು ಸ್ಥಳೀಯರು ಆಗ್ರಹಿಸಿದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243