ದಿನದ ಸುದ್ದಿ

ಕೋವಿಡ್-19 ಸೇವೆ | ಪಿಎಸ್ಐ ಶಿವರುದ್ರಪ್ಪ ಎಸ್ ಮೇಟಿ ಅವರಿಗೆ ಪ್ರಶಂಸನೀಯ ಪತ್ರ ನೀಡಿ ಗೌರವಿಸಿದ ಎಸ್ಪಿ ಹನುಮಂತರಾಯ

Published

on

  • ವರದಿ : ಕೋಗಲೂರು ಕುಮಾರ್

ಸುದ್ದಿದಿನ,ಚನ್ನಗಿರಿ‌ : ರಾಷ್ಟವ್ಯಾಪ್ತಿ ಹರಡಿ ಮನುಕುಲದ ಮೇಲೆ ಮರಣ ಮೃದಂಗ ಭಾರಿಸುತ್ತಾ ಈಡೀ ವಿಶ್ವವನ್ನೆ ಆಟದ ಮೈದಾನ ಮಾಡಿಕೊಂಡು ಮನು ಕುಲಕ್ಕೆ ಮಾರಕವಾಗಿರುವ ಮಹಾಮಾರಿ  ಕಿಲ್ಲರ್ ಕೊರೋನ ವಿರುದ್ದ ಸಮರ ಸಾರಿ ಪೋಲಿಸ್ ಇಲಾಖೆಯು ಮನುಕುಲದ ಉಳಿವಿಗಾಗಿ ಹಗಲು ರಾತ್ರಿ ಎನ್ನದೆ ಸ್ವಂತ ಕುಟುಂಬವನ್ನು.ಕುಟುಂದವರನ್ನು  ದೂರ ಇಟ್ಟು ನಿರಂತರವಾಗಿ ಮಹಾಮಾರಿ ವಿರುದ್ದ ಹೋರಾಟವನ್ನು ನಡೆಸುತ್ತಿರುವ ಪೋಲಿಸರ ಸಾದನೆಯು ಅತ್ಯಂತ ಶ್ಲಾಘನೀಯ.

ಇಂತಹ ದಕ್ಷ ಪೋಲಿಸ್ ಅಧಿಕಾರಿಗಳಲ್ಲಿ ಒಬ್ಬರಾದ ತಾಲೂಕಿನ ಸಂತೇಬೆನ್ನೂರು ಪೋಲಿಸ್ ಠಾಣೆಯ ಸಬ್ ಇನ್ಸ್ ಪೆಕ್ಟರ್ ಆದ ಶಿವರುದ್ರಪ್ಪ ಎಸ್ ಮೇಟಿ ರವರ ಕರ್ತವ್ಯೆವನ್ನು ಗುರುತಿಸಿ ಮಾನ್ಯ ಜಿಲ್ಲಾ ವರಿಷ್ಠಾದಿಕಾರಿಗಳಾದ ಹನುಮಂತ ರಾಯ ರವರು ಮಹಾಮಾರಿ ಕೊರೋನ ವಿರುದ್ದ ಹೋರಾಡಿದ ಸಾದನೆಯನ್ನು ಮೆಚ್ಚಿ ಇವರಿಗೆ ಪ್ರಶಂಸನೀಯ ಪತ್ರವನ್ನು ನೀಡಿ ಗೌರವಿಸಿದೆ.

ಶಿವರುದ್ರಪ್ಪ ಎಸ್ ಮೇಟಿ ರವರು ತಾಲೂಕಿನಲ್ಲೆ ದೊಡ್ಡ ಹೋಬಳಿಯಾದ  ಸಂತೇಬೆನ್ನೂರು ಗ್ರಾಮ. ಈ  ವ್ಯಾಪ್ತಿಯಲ್ಲಿ ಬರುವಂತಹ ಪ್ರತಿಯೊಂದು  ಗ್ರಾಮಗಳಿಗೆ ತೆರಳಿ ಪಿಎಸ್ಐ ಶಿವರುದ್ರಪ್ಪ ಎಸ್ ಮೇಟಿ ರವರು ಕೊರೋನ ವಿರುದ್ದ ಸಾರ್ವಜನಿಕರಿಗೆ ಯಾವುದೆ ರೀತಿಯಲ್ಲಿ ತೊಂದರೆಯನ್ನು ನೀಡದೆ ಮಹಾಮಾರಿ ಕೊರೋನ ವಿರುದ್ದ ಸಾರ್ವಜನಿಕರಲ್ಲಿ ಪ್ರಜ್ಞೆಯನ್ನು ಮೂಡಿಸಿ ಅತ್ಯಂತ ಅವಿಸ್ಮರಣೀಯ ಕಾರ್ಯಗಳನ್ನು ನೆರವೇರಿಸುತ್ತಾ  ಬಂದಿರುವ ಇವರು ಜನಸಾಮಾನ್ಯರಿಗೆ ಅತ್ಯಂತ ಪ್ರೀತಿಧಾಯಕರೆನಿಕೊಂಡಿದ್ದಾರೆ .ಇವರ ಕಾರ್ಯ ಹೀಗೆ ಮುಂದುವರೆದು ಜನಸಾಮನ್ಯರ ಮನಸ್ಸಲಿ ಅಚ್ಚಳಿಯದೆ ಉಳಿಯಲಿ ಎಂದು ಈ ಭಾಗದ ಜನರ ಆಶಯವಾಗಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243  

Trending

Exit mobile version