ದಿನದ ಸುದ್ದಿ
ಚನ್ನಗಿರಿ | ಕದ್ದ ಮಾಲು ಮಾರಲು ಬಂದು ಸಿಕ್ಕಿ ಬಿದ್ದ ಕಳ್ಳರು : ಪೋಲಿಸರಿಗೆ ಎಸ್ಪಿ ಹನುಮಂತರಾಯ ಶ್ಲಾಘನೆ
ಸುದ್ದಿದಿನ,ಚನ್ನಗಿರಿ: ಪಟ್ಟಣದ ಮನೆಯೊಂದರಲ್ಲಿ ಕಳ್ಳತನ ಮಾಡಿ ಪರಾರಿಯಾಗಿದ್ದ ಕಳ್ಳರನ್ನು ವೃತ್ತ ನಿರೀಕ್ಷಕ ಆರ್,ಆರ್, ಪಾಟೀಲ್ ನೇತೃತ್ವದದ ತಂಡವು ಬಂಧಿಸಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾದಿಕಾರಿಗಳಾದ ಹನುಮಂತರಾಯ ತಿಳಿಸಿದರು.
ಸಂತೇಬೆನ್ನೂರು ಪೋಲೀಸ್ ಠಾಣೆಯಲ್ಲಿ ನಡೆಸಿದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಆರೋಪಿಗಳು ಏಪ್ರಿಲ್ 16 ರಂದು ಕಳುವು ಮಾಡಿ ಪರಾರಿಯಾಗಿದ್ದರು. ಆರೋಪಿಗಳನ್ನು ಅಮ್ಜಾದ್ ಖಾನ್ ಮತ್ತು ಸುಹೀಲ್ ಖಾನ್ ಎಂದು ಗುರುತಿಸಿದ ನಮ್ಮ ಪೋಲೀಸರ ತಂಡವು ಅವರು ಕದ್ದ ಆಭರಣಗಳನ್ನು ಮಾರಟ ಮಾಡಲು ಯತ್ನಿಸಿದ ಸಂದರ್ಭದಲ್ಲಿ ಬಂಧಿಸಿದೆ ಎಂದರು.
ಕಳ್ಳರು ಮನೆಯಲ್ಲಿಟ್ಟಿದ 92 ಗ್ರಾಂ ತೂಕದ ಬಂಗಾರದ, 380 ಗ್ರಾಂ ತೂಕದ ಬೆಳ್ಳಿ ಆಭರಣಳನ್ನು ಕಳ್ಳತನ ಮಾಡಿದ್ದರು. ದ್ವಿಚಕ್ರ ವಾಹನವನ್ನು ಕದ್ದಿದ್ದರು. ಒಟ್ಟು ಸುಮಾರು 4 ಲಕ್ಷ ಮೌಲ್ಯದ ಈ ವಸ್ತುಗಳನ್ನು ಪೋಲೀಸರು ಆರೋಪಿಗಳಿಂದ ತಮ್ಮ ವಶಕ್ಕೆ ಪಡೆದಿದ್ದಾರೆ ಎಂದು ತಿಳಿಸಿದರು.
ವೃತ್ತನಿರೀಕ್ಷ ಆರ್ ಆರ್ ಪಾಟೀಲ್ ನೇತೃತ್ವದ ತಂಡ
ಚನ್ನಗಿರಿ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಅರೋಪಿಗಳ ಪತ್ತೆಗಾಗಿ ಚನ್ನಗಿರಿ ವಿಭಾಗದ ಉಪಾದೀಕ್ಷರಾದ ಪ್ರಶಾಂತ್ ಮುನ್ನೊಳಿ ರವರ ಮಾರ್ಗದರ್ಶನದಲ್ಲಿ ಸಂತೇಬೆನ್ನೂರು ಪೋಲೀಸ್ ಠಾಣೆಯ ಪಿಎಸ್ಐ ಶಿವರುದ್ರಪ್ಪ ಎಸ್ ಎಸ್ ಮೇಟಿ ರವರನ್ನೊಳಗೊಂಡ ಕ್ರೈಂ ವಿಭಾಗದ ಪಿಎಸ್ಐ ಶ್ರೀಮತಿ ರೂಪ್ಲಿಬಾಯಿ ಹಾಗೂ ಸಿಬ್ಬಂದಿಗಳಾದ ಧರ್ಮಪ್ಪ . ರುದ್ರೇಶ್ ಹೆಚ್ ಸಿ . ರುದ್ರೇಶ್ ಎಸ್ಆರ್ . ಮಂಜುನಾಥ್ ಪ್ರಸಾದ್ . ಕೊಟ್ರೇಶ್ . ಮಹಮದ್ ರಫೀಕ್ . ಪರಶುರಾಮ್ ಸೇರಿದಂತೆ ತಂಡವನ್ನು ರಚಿಸಿದ ವೃತ್ತನಿರೀಕ್ಷರಾದ ಆರ್ ಆರ್ ಪಾಟೀಲ್ ನೇತೃತ್ವದದ ತಂಡ ಆರೋಪಿಗಳನ್ನು ಬಂಧಿಸಿದೆ ಎಂದು ಹೇಳಿದರು.
ಇದುವರೆಗೆ ಜಿಲ್ಲೆಯಲ್ಲಿ ಕಳ್ಳತನ ಪ್ರಕರಣಗಳು
- 2018 ರಲ್ಲಿ 254 ಪ್ರಕರಣಗಳು
- 2019 ರಲ್ಲಿ 218 ಪ್ರಕರಣಗಳು
- 2020 ರಲ್ಲಿ 251 ಎಪ್ರಿಲ್ ವರೆಗೆ ಪ್ರಕರಣಗಳು ದಾಖಲಾಗಿವೆ.
|ಎಸ್ಪಿ ಹನುಮಂತರಾಯ
ವರದಿ :ಕೋಗಲೂರು ಕುಮಾರ್
ಸುದ್ದಿದಿನ.ಕಾಂ|ವಾಟ್ಸಾಪ್|9980346243