ದಿನದ ಸುದ್ದಿ
ದಾವಣಗೆರೆ | ನಗರ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ
ಸುದ್ದಿದಿನ,ದಾವಣಗೆರೆ : ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ದಾವಣಗೆರೆ ಸ್ಮಾರ್ಟ್‍ಸಿಟಿ ಲಿಮಿಟೆಡ್, ಯೋಜನೆಯಡಿ ವಿದ್ಯುತ್ ಕಂಬಗಳ ಸ್ಥಳಾಂತರ ಕಾಮಗಾರಿ ನಿರ್ವಹಿಸುತ್ತಿರುವುದರಿಂದ ಹಾಗೂ ಕರ್ನಾಟಕ ಸಮಗ್ರ ನೀರು ನಿರ್ವಹಣೆ ಮತ್ತು ಬಂಡವಾಳ ಹೂಡಿಕೆ ಕಾರ್ಯಕ್ರಮಯೋಜನೆಯಡಿಯಲ್ಲಿ ನಿರಂತರ (24*7) ಶುದ್ದಕುಡಿಯುವ ನೀರು ಸರಬರಾಜು ಯೋಜನೆ ಕಾಮಗಾರಿ ನಿರ್ವಹಿಸಬೇಕಾಗಿರುವುದರಿಂದ ಏ.03 ರಂದು ಬೆಳಗ್ಗೆ 10 ರಿಂದ ಸಂಜೆ 4.30 ವರೆಗೆ 66/11ಕೆವಿಯರಗುಂಟಾ ವಿದ್ಯುತ್ ವಿತರಣಾಕೇಂದ್ರದಿಂದ ಹೊರಡುವ ಎಫ್6-ಶಿವಾಲಿ, ಎಫ್8-ವಿಜಯನಗರ, ಎಫ್16-ಎಸ್‍ಜೆಎಮ್ ಮತ್ತು ಎಫ್19-ಎಸ್‍ಟಿಪಿ 11ಕೆವಿ ಮಾರ್ಗಗಳ ವ್ಯಾಪ್ತಿಯಲ್ಲಿ ಈ ಕೆಳಕಂಡ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.
ಎಫ್6-ಶಿವಾಲಿ ಫೀಡರ್ ವ್ಯಾಪ್ತಿಯ 11ಕೆವಿ ವ್ಯಾಪ್ತಿಯ :ಭಾಷನಗರ 1 ರಿಂದ 17ನೇ ಕ್ರಾಸ್, ರಿಂಗ್‍ರಸ್ತೆ, ಶಿವನಗರ ಸ್ವಲ್ಪ ಭಾಗ, ಮಿಲ್ಲತ್ ಕಾಲೋನಿ, ಬೀಡಿ ಲೇಔಟ್, ರಜಾವುಲ್ಲಾ ಮುಸ್ತಾಫ ನಗರ, ರಜಾಕ್ ಸರ್ಕಲ್, ಭಾಷನಗರ ಮುಖ್ಯರಸ್ತೆ, ಸುತ್ತಮುತ್ತ ಬೀಡಿ ಲೇಔಟ್, ಶಿವನಗರ, ರಜಾವುಲ್ಲಾ ಮುಸ್ತಾಫ್ ನಗರ, ಇಎಸ್‍ಐಆಸ್ಪತ್ರೆ ಹಿಂಭಾಗ ಹಾಗೂ ಮುಂಭಾಗ, ಭಾಷನಗರ ಮುಖ್ಯರಸ್ತೆ ಸುತ್ತಮುತ್ತ ಹಾಗೂ ಇತರೆ ಪ್ರದೇಶಗಳು.
ಇದನ್ನೂ ಓದಿ | ಸಭೆ-ಸಮಾರಂಭಗಳಿಗೆ ಸಕ್ಷಮ ಪ್ರಾಧಿಕಾರದಿಂದ ಅನುಮತಿ ಪಡೆಯುವುದು ಕಡ್ಡಾಯ
ಎಫ್8-ವಿಜಯನಗರ ಫೀಡರ್ ವ್ಯಾಪ್ತಿಯ ದೇವರಾಜ್‍ಅರಸ್ ಬಡಾವಣೆ ‘ಬಿ’ ಬ್ಲಾಕ್ ಮತ್ತು ‘ಸಿ’ ಬ್ಲಾಕ್, ಎಸ್‍ಪಿ ಆಫೀಸ್, ಆರ್‍ಟಿಓಆಫೀಸ್, ವಿಜಯನಗರ ಬಡಾವಣೆ, ರಾಜೀವಗಾಂಧಿ ಬಡಾವಣೆ, ಎಸ್‍ಪಿಎಸ್ ನಗರ 2ನೇ ಹಂತ, ಎಸ್‍ಎಮ್‍ಕೆ ನಗರ, ವಾಲ್ಮೀಕಿ ಸರ್ಕಲ್ ಸುತ್ತಮುತ್ತ ಹಾಗೂ ಇತರೆ ಪ್ರದೇಶಗಳು.
ಎಫ್16-ಎಸ್‍ಜೆಎಮ್ ಫೀಡರ್ ವ್ಯಾಪ್ತಿಯ ಕೊಂಡಜ್ಜಿರಸ್ತೆ, ಎಸ್‍ಜೆಎಮ್ ನಗರ, ಸೇವಾದಳ ಕಾಲೋನಿ, ಹೊಸಕ್ಯಾಂಪ್, ಎಸ್‍ಎಮ್‍ಕೆ ನಗರ 2ನೇ ಹಂತ, ವೀರಾಂಜನೇಯ ಪೆಟ್ರೋಲ್ ಬಂಕ್ ಹತ್ತಿರ, ಬಿ.ಜೆ.ಎಮ್ ಸ್ಕೂಲ್, ಆರ್‍ಟಿಓಆಫೀಸ್, ಬೂದಿಹಾಳ್ ರಸ್ತೆ, ಬಾಬು ಜಗಜೀವನ್‍ರಾಮ್ ನಗರ, ಗೌರಸಂದ್ರ ಮಾರಮ್ಮದೇವಸ್ಥಾನದ ಸುತ್ತಮುತ್ತ ಹಾಗೂ ಇತರೆ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243