ದಿನದ ಸುದ್ದಿ
ದಾವಣಗೆರೆ | ಅಕ್ರಮವಾಗಿ ಗಾಂಜಾ ಮಾರಾಟ; ಆರೋಪಿಗಳ ಬಂಧನ
ಸುದ್ದಿದಿನ,ದಾವಣಗೆರೆ : ದಾವಣಗೆರೆ ನಗರದ ಕರ್ನಾಟಕ ಗೃಹ ಮಂಡಳಿಯ ತುಂಗಭದ್ರಾ ಬಡಾವಣೆಯ ಕುಂದುವಾಡ-ದಾವಣಗೆರೆ ಅಂತ ಇರುವ ಮೊದಲನೇ ಕಮಾನ್ ಹತ್ತಿರ ಸರ್ವೀಸ್ ರಸ್ತೆಯಿಂದ ತುಂಗಭದ್ರಾ ಬಡಾವಣೆ ಕಡೆಗೆ ಹೋಗುವ ಸಾರ್ವಜನಿಕ ರಸ್ತೆಯಲ್ಲಿ ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.
ಬಸವರಾಜ್ ಬಿ.ಎಸ್, ಪೊಲೀಸ್ ಉಪಾಧೀಕ್ಷಕರು, ಡಿಸಿಆರ್‌ಬಿ ಘಟಕ, ದಾವಣಗೆರೆರವರ ಮಾರ್ಗದರ್ಶನದಲ್ಲಿ ದಾವಣಗೆರೆ ಸಿಇಎನ್ ಅಪರಾಧ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್ ಶ್ರೀ ಗಿರೀಶ ಬಿ.ಎ ಹಾಗೂ ಪೊಲೀಸ್ ಸಿಬ್ಬಂದಿಗಳನ್ನೊಳಗೊಂಡ ತಂಡ ದಾಳಿ ಮಾಡಿ ಅರೋಪಿಗಳನ್ನು ಬಂಧಿಸಲಾಗಿದೆ.
ಆರೋಪಿತರಾದ 1)ರವಿ ಶೆಟ್ಟಿ ತಂದೆ ಸಂಜೀವ ಶೆಟ್ಟಿ, 30 ವರ್ಷ, ಬಸ್ ಬುಕ್ಕಿಂಗ್ ಏಜೆಂಟ್ ಕೆಲಸ, ವಾಸ:5ನೇ ಕ್ರಾಸ್, ಜೈಲ್ ರಸ್ತೆ, ವೆಂಕಟೇಶ್ ನಗರ, ಶಿವಮೊಗ್ಗ, ಹಾಲಿ ವಾಸ:-ನ್ಯಾಷಿನಲ್ ಲಾಡ್, ಮೆಜೆಸ್ಟಿಕ್ ಬೆಂಗಳೂರು ನಗರ, 2)ಅಬ್ದುಲ್ ಹಾಫಿಕ್ ಎಸ್.ಎಂ ತಂದೆ ಮಹಮ್ಮದ್ ಬಿ.ಎಸ್, 30 ವರ್ಷ, ಬಸ್ ಬುಕ್ಕಿಂಗ್ ಕೆಲಸ, ವಾಸ:-# ಬಿ.ಎಸ್ ಮಂಜಿಲ್, ಪೈಚಾರ್ ಗ್ರಾಮ, ಸೋಣಂಗೇರಿ ಅಂಚೆ, ಸುಳ್ಯಾ ತಾಲ್ಲೂಕು, ದಕ್ಷಿಣ ಕನ್ನಡ ಜಿಲ್ಲೆ, ಹಾಲಿ ವಾಸ:- ನ್ಯಾಷಿನಲ್ ಲಾಡ್ಜ್ ಮೆಜೆಸ್ಟಿಕ್ ಬೆಂಗಳೂರು ಇವರುಗಳನ್ನು ವಶಕ್ಕೆ ಪಡೆದು ಆರೋಪಿತರಿಂದ ಸುಮಾರು 2,84,500/- ಬೆಲೆಯ 11 ಕೆ.ಜಿ 162 ಗ್ರಾಂ ಹಾಗೂ 800/- ರೂ ನಗದು ಹಣವನ್ನು ವಶಕ್ಕೆ ಪಡೆದುಕೊಂಡಿದ್ದು, ಈ ಬಗ್ಗೆ ಆರೋಪಿತ ವಿರುದ್ಧ ದಾವಣಗೆರೆ ಸಿಇಎನ್ ಅಪರಾಧ ಪೊಲೀಸ್ ಠಾಣೆಯಲ್ಲಿ 37/2021 ರಲ್ಲಿ ಪ್ರಕರಣ ದಾಖಲಾಗಿರುತ್ತದೆ.
ಸದರಿ ದಾಳಿಯಲ್ಲಿ ಮೇಲ್ಕಂಡ ಪೊಲೀಸ್ ಅಧಿಕಾರಿಗಳು ಸೇರಿದಂತೆ ಸಿಬ್ಬಂದಿಯವರಾದ ನಾಗರಾಜ ಪಿ, ನಾಗರಾಜ ಬಿ, ದ್ಯಾಮೇಶ್ ಹೆಚ್.ಜೆ, ಲೋಹಿತ್ ಎಸ್, ಮಲ್ಲಿಕಾರ್ಜುನ ಹಾದಿಮನಿ, ಗೋವಿಂದರಾಜ ಎಸ್ ಕೊಟ್ರೇಶ್ ಎಸ್.ಎಸ್ ಹಾಗೂ ಲಿಂಗರಾಜ್ ಬಿ.ಕೆ ಇವರುಗಳು ದಾಳಿಯಲ್ಲಿ ಭಾಗವಹಿಸಿರುತ್ತಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243