ದಿನದ ಸುದ್ದಿ
ದಾವಣಗೆರೆ | ಕೊವಿಡ್ ಕೇರ್ ಸೆಂಟರ್ ನಿಂದ ಸೋಂಕಿತ ಯುವತಿಯರಿಬ್ಬರು ಪರಾರಿ..!
ಸುದ್ದಿದಿನ,ದಾವಣಗೆರೆ: ನಗರದ ಜೆ.ಎಚ್. ಪಟೇಲ್ ಬಡಾವಣೆಯ ಕೋವಿಡ್ ಕೇರ್ ಸೆಂಟರ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ, ಕೊರೋನಾ ಪಾಸಿಟಿವ್ ಬಂದಿದ್ದ ಯುವತಿಯರಿಬ್ಬರು ಬುಧವಾರ ಪರಾರಿಯಾಗಿದ್ದಾರೆ.
ಸೋಂಕಿತ ಯುವತಿಯರಿಬ್ಬರು ರಾಜ್ಯ ಮಹಿಳಾ ನಿಲಯ ನಿವಾಸಿಗಳಾಗಿದ್ದು,21 ಮತ್ತು 19 ವರ್ಷದವರಾಗಿದ್ದಾರೆ. ಇವರಲ್ಲಿ ಒಬ್ಬ ಯುವತಿ ನಾಲ್ಕು ವರ್ಷಗಳ ಹಿಂದೆ ಪ್ರೀತಿಸಿ ಅಂತರ್ ಧರ್ಮೀಯ ಯುವಕನನ್ನು ವಿವಾಹವಾಗಿದ್ದರು. ಆದರೆ, ಆಗ 18 ವರ್ಷ ತುಂಬದ ಕಾರಣ ಪ್ರಕರಣ ದಾಖಲಿಸಿ ಯುವಕನನ್ನು ಬಂಧಿಸಿ ಜೈಲಿಗೆ ಕಳುಹಿಸಲಾಗಿತ್ತು. ಯುವತಿಯು ಹೆತ್ತವರ ಮನೆಗೆ ಹೋಗಲು ಒಪ್ಪದ ಕಾರಣ ರಾಜ್ಯ ಮಹಿಳಾ ನಿಲಯದಲ್ಲಿ ಇರಿಸಲಾಗಿತ್ತು.
ಇನ್ನೊಬ್ಬ ಯುವತಿ 2020ರಲ್ಲಿ ತನ್ನ ಸಂಬಂಧಿ ಯುವಕನನ್ನು ಪ್ರೀತಿಸಿ ಮದುವೆಯಾಗಲು ಹೊರಟಿದ್ದರು. ಆದರೆ, ಅವರಿಗೂ ಕೂಡ 18 ತುಂಬಿರಲಿಲ್ಲ. ಹೆತ್ತವರ ಜತೆ ಹೋಗಲು ಒಪ್ಪದ ಹಿನ್ನೆಲೆ ಇಬ್ಬರೂ ಹೋಂ ಸ್ಟೇನಲ್ಲಿದ್ದರು. ಕೋವಿಡ್ ಬಂದರೂ ಲಕ್ಷಣ ಇಲ್ಲದ ಹಿನ್ನೆಲೆ ಕೋವಿಡ್ ಕೇರ್ ಸೆಂಟರ್ ನಲ್ಲಿ ಇರಿಸಲಾಗಿತ್ತು. ಸೆಕ್ಯೂರಿಟಿ ಗಾರ್ಡ್ ಊಟಕ್ಕೆ ಹೋಗಿದ್ದ ಸಮಯದಲ್ಲಿ ಈ ಇಬ್ಬರು ಯುವತಿಯರು ಪರಾರಿಯಾಗಿದ್ದಾರೆ. ಈ ಬಗ್ಗೆ ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243