ದಿನದ ಸುದ್ದಿ

ದಾವಣಗೆರೆ | ಯುಜಿಡಿ ಪಂಪ್‍ಲೈನ್ ತೆರವುಗೊಳಿಸಲು ಮನೆ ಮಾಲೀಕರಿಗೆ ಎಚ್ಚರಿಕೆ

Published

on

ಸುದ್ದಿದಿನ,ದಾವಣಗೆರೆ : ದಾವಣಗೆರೆ ನಗರ ವ್ಯಾಪ್ತಿಯಲ್ಲಿ ಯುಜಿಡಿಗೆ ಸಂಬಂಧಿಸಿದಂತೆ ಬಹಳಷ್ಟು ದೂರುಗಳು ಮಹಾನಗರಪಾಲಿಕೆಯಲ್ಲಿ ಸ್ವೀಕೃತವಾಗುತ್ತಿದ್ದು, ಕೆಲವೊಂದು ಕಡೆ ಮನೆಗಳಿಗೆ ಯುಜಿಡಿಗೆ ನೀರು ನುಗ್ಗಿರುವ ಬಗ್ಗೆ ವರದಿಯಾಗಿದೆ.

ಇದಕ್ಕೆ ಕಾರಣ ಬಹಳಷ್ಟು ಕಟ್ಟಡಗಳ ಮಾಲೀಕರು ಮಳೆ ನೀರನ್ನು ಯುಜಿಡಿ ಪೈಪ್‍ಲೈನ್‍ಗೆ ಸಂಪರ್ಕ ಮಾಡಿ ಬಿಟ್ಟಿರುವುದು. ಆದ್ದರಿಂದ 15 ದಿನಗಳ ಒಳಗಾಗಿ ಕಟ್ಟಡದ ಮಾಲೀಕರು ಮಳೆ ನೀರನ್ನು ಯುಜಿಡಿ ಸಂಪರ್ಕ ಕೊಟ್ಟಿರುವುದನ್ನು ತೆರವುಗೊಳಿಸಿ ಮಳೆ ನೀರು ಚರಂಡಿಗೆ ಬಿಡುವ ವ್ಯವಸ್ಥೆ ಮಾಡಬೇಕು.

15 ದಿನಗಳ ಒಳಗಾಗಿ ತೆರವು ಮಾಡದೇ ಇದ್ದಲ್ಲಿ ಮಹಾನಗರಪಾಲಿಕೆ ವತಿಯಿಂದಲೇ ತೆರವುಗೊಳಿಸಿ ಅದಕ್ಕೆ ತಗಲುವ ವೆಚ್ಚವನ್ನು ಸಂಬಂಧಿಸಿದ ಕಟ್ಟಡದ ಮನೆ ಕಂದಾಯಕ್ಕೆ ಸೇರಿಸಿ ವಸೂಲಿ ಮಾಡಲಾಗುವುದು ಎಂದು ಮಹಾನಗರಪಾಲಿಕೆ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version