ದಿನದ ಸುದ್ದಿ

ಶಾಕಿಂಗ್ ನ್ಯೂಸ್; ಉಗ್ರರಿಗಿಂತ ರಸ್ತೆಯಲ್ಲಿ ಸತ್ತವರೆ ಹೆಚ್ಚು

Published

on

Representative image

ಸುದ್ದಿದಿನ ಡೆಸ್ಕ್: ದೇಶದಲ್ಲಿ ಉಗ್ರರಿಂದ ಸಾವನ್ನಪ್ಪಿದವರಿಗಿಂತ ರಸ್ತೆಯಲ್ಲಿ ಮೃತಪಟ್ಟವರೇ ಹೆಚ್ಚು ಎಂಬ ಶಾಕಿಂಗ್ ನ್ಯೂಸ್ ಹೊರಬಿದ್ದಿದ್ದು, ಯಮಸ್ವರೂಪಿ ಗುಂಡಿಗಳು, ತಗ್ಗುಗಳು ಸವಾರರನ್ನು ಯಮಲೋಕಕ್ಕೆ ಕರೆದೊಯ್ದಿವೆ. ಈ ಕಾರಣದಿಂದ ಕಳೆದ ವರ್ಷ ರಸ್ತೆಯಲ್ಲಿ ಮೃತಪಟ್ಟವರ ಸಂಖ್ಯೆ 3,600ಕ್ಕೂ ಅಧಿಕ. ಈ ಬಗ್ಗೆ ಸುಪ್ರೀಂ ಕೋರ್ಟ್ ಆತಂಕ ವ್ಯಕ್ತಪಡಿಸಿದೆ.

ರಸ್ತೆ ಗುಂಡಿಗಳ ಕಾರಣದಿಂದಾಗಿ ಮೃತಪಟ್ಟವರ ಬಗ್ಗೆ ವರದಿ ಸಿದ್ಧ ಪಡಿಸಿರುವ ಕೇಂದ್ರ ಸರ್ಕಾರ, ಉಗ್ರರಿಂದ ದೇಶದಲ್ಲಿ ಕಳೆದ ವರ್ಷ 803 ಮಂದಿ ಸಾವನ್ನಪ್ಪಿದ್ದಾರೆ. ಆದರೆ, ಈ ಉಗ್ರರಿಗಿಂತ ರಸ್ತೆಗಳ ಗುಂಡಿ ಭಯಾನಕ, ಯಮಸ್ವರೂಪಿಗಳಾಗಿವೆ. ಈ ಬಗ್ಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಡುವೆ ಕಿತ್ತಾಟ ಶುರುವಾಗಿದೆ. ಆದರೆ, ಸುಪ್ರೀಂ ಕೋರ್ಟ್ ರಾಜ್ಯಗಳ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿ, ರಸ್ತೆಗಳ ನಿರ್ವಹಣೆ ರಾಜ್ಯಗಳ ಹೊಣೆ ಎಂದು ತರಾಟೆ ತೆಗೆದುಕೊಂಡಿದೆ.

Leave a Reply

Your email address will not be published. Required fields are marked *

Trending

Exit mobile version