ದಿನದ ಸುದ್ದಿ

ವಿಜಯಾ ಬ್ಯಾಂಕ್ ಜತೆ ದೇನಾ ಬ್ಯಾಂಕ್ ವಿಲೀನ

Published

on

ಸುದ್ದಿದಿನ ಡೆಸ್ಕ್: ಸರಕಾರಿ ಸ್ವಾಮ್ಯದ ವಿಜಯಾ ಬ್ಯಾಂಕ್, ದೇನಾ ಬ್ಯಾಂಕ್ ಹಾಗೂ ಬ್ಯಾಂಕ್ ಆಫ್ ಬರೋಡಾವನ್ನು ವಿಲೀನಗೊಳಿಸಿ ದೇಶದಲ್ಲಿ ಒಂದು ದೊಡ್ಡ ಬ್ಯಾಂಕ್ ವ್ಯವಸ್ಥೆ ಜಾರಿಗೆ ತರಲಾಗುವುದು ಎಂದು ವಿತ್ತ ಸಚಿವ ಅರುಣ್ ಜೇಟ್ಲಿ ತಿಳಿಸಿದ್ದಾರೆ.

ಕಳೆದ ವರ್ಷ ಎಸ್‍ಬಿಐಅನ್ನು ಅದರ ಸಹವರ್ತಿ ಬ್ಯಾಂಕ್‍ಗಳ ಜತೆ ವಿಲೀನಗೊಳಿಸದಂತೆ ಈ ಪ್ರಕ್ರಿಯೆಯನ್ನೂ ಪೂರ್ಣಗೊಳಿಸಲಾಗುವುದು ಎಂದು ಜೇಟ್ಲಿ ಹೇಳಿದ್ದು, ಈ ಎಲ್ ಬ್ಯಾಂಕ್‍ಗಳು ವಸೂಲಿಯಾಗದ ಸಾಲದ ಸುಳಿಯಲ್ಲಿ ಸಿಕ್ಕಿವೆ. ಇದಕ್ಕೆ ಈ ಹಿಂದೆ ಆಡಳಿತ ನಡೆಸಿದ ಯುಪಿಎ ಸರಕಾರವೇ ನೇರಹೊಣೆ ಎಂದು ಜೇಟ್ಲಿ ತಿಳಿಸಿದರು.

ಯುಪಿಎ ಅವಧಿಯಲ್ಲಿ 2014ರಲ್ಲಿ 2.5 ಲಕ್ಷ ಕೋಟಿ ರೂ ಇದ್ದ ವಸೂಲಿಯಾಗದ ಸಾಲ (ಎನ್‍ಪಿಎ) ಈಗ 8.5 ಲಕ್ಷ ಕೋಟಿ ರೂ. ತಲುಪಿದೆ ಹಾಗಾಗಿ ಬ್ಯಾಂಕ್‍ಗಳ ವಿಲೀನ ಪ್ರಕ್ರಿಯೆ ಮಾಡದೆ ಬೇರೆ ದಾರಿಯಿಲ್ಲ.
ಈ ವಿಲೀನದಿಂದಾಗಿ ಬ್ಯಾಂಕ್ ಉದ್ಯೋಗಿಗಳಿಗೆ ಕೆಲ ಸಮಯ ಸಮಸ್ಯೆಯಾಗಬಹುದು ಆದರೆ, ಬರುವ ದಿನಗಳಲ್ಲಿ ಎಲ್ಲ ಸರಿಹೋಗುತ್ತದೆ. ಕಾರ್ಪೊರೇಟ್‍ವಲಯದ ಮೇಲೂ ಸಲ್ಪ ದಿನಗಳ ಮಟ್ಟಿಗೆ ಪ್ರತಿಕೂಲ ಪರಿಣಾಮ ಬೀರಬಹುದು ಎಂದೂ ಅವರು ತಿಳಿಸಿದರು.

ಸುದ್ದಿದಿನ.ಕಾಂ|ವಾಟ್ಸಾಪ್|9986715401

Leave a Reply

Your email address will not be published. Required fields are marked *

Trending

Exit mobile version