ಅಂತರಂಗ

‘ದೇವನಗರಿಯ ಸಿರಿ’ಜಿ.ಎಂ.ಆರ್.ಆರಾಧ್ಯ ಅವರಿಗೆ ಅಭಿನಂದನೆಗಳು

Published

on

ಗುರುವಾಗಿ ನಿಲ್ಲಬಲ್ಲ ಶಕ್ತಿ ಎಲ್ಲರಿಗೂ ಎಲ್ಲಿದೆ ಈ ಜಗದಲ್ಲಿ..!? ಉದ್ಯಮಿಯಾದರೆ ಸಾಕಷ್ಟೇ ಎಂದು ಹೆಣಗಾಡುತಿಹರು ಬಹುತೇಕರು ಅವರವರ ಕ್ಷೇತ್ರದಲಿ.ಪತ್ರಿಕಾರಂಗವೆಂಬುದು ಬಲು ದೊಡ್ಡ ಜವಬ್ದಾರಿಯ ಕ್ಷೇತ್ರ, ಸಾಮಾಜಿಕ ಉನ್ನತಿಗೆ ಆ ಕ್ಷೇತ್ರದ್ದಿದೆ ಹಿರಿದಾದ ಪಾತ್ರ.ಅದರ ಒಳ – ಹೊರಹುಗಳ ಆಳವನರಿತು ಸಲ್ಲಿಸುತಿಹ ಅವರ ಪತ್ರಿಕಾ ಸೇವೆಗೆ ಅವರೇ ಸಾಟಿ.

ಒಳಿತಿನ ಗುರಿಯ ಬೆನ್ನು ಹತ್ತಿ, ಕೆಡುಕಿಗೆ ಎದೆಯಗೊಟ್ಟು – ಎದುರು ನಿಂತವರಿಗೆ ಪಟ್ಟು ಬಿಡದೆ ಪಾಠವ ಕಲಿಸಿ, ಕಟು ನುಡಿಗಳಲಿ ಎಚ್ಚರ ಮೂಡಿಸಿ, ಮೃದು ಮಾತಲಿ ತಿದ್ದಿ – ತೀಡಿ, ನಯವಂಚಕರಿಗೆ ಚಾಟಿಯ ಬೀಸಿ- ಜಾಗೃತಗೊಳಿಸುವ ಅವರ ಆ ಪರಿಯ,, ನೇರ, ನಿಷ್ಠುರ ನಡೆ – ನುಡಿಯ ಅವರ ಅಂತರಂಗದ ಆ ಮರ್ಮವನು ಬಲ್ಲವರು ಮಾತ್ರವೇ ಬಲ್ಲರು .

ಅವರ ಮೊನಚಾದ ಆ ಬರವಣಿಗೆಯ ಕೌಶಲ್ಯ – ಅದರ ಗತ್ತು – ಗಾಂಭೀರ್ಯ,, ಆ ದಿಟ್ಟತನ, ಅದರೊಳಗಿನ ಅವರ ಹೃದಯದ ಆರ್ದ್ರತೆಯ ಆ ಆಳವನು ಕೂಡ ಬಲ್ಲವರು ಬಹಳಿಲ್ಲ… ಕೆಡುಕು ಬಗೆವವರಿಗೆ ಶನಿಯಂತೆ ಬೆನ್ನತ್ತಿ – ಬಿಡದಂತೆ ಕಾಡಿ ಅವರ ಗ್ರಹಚಾರ ಬಿಡಿಸುವ ಅವರ ಕಲಾ – ಕೌಶಲ್ಯ – ಚಾಕಚಕ್ಯತೆಗಳು ನಿಜಕ್ಕೂ ಕೇಳುಗರ ಮೈನವಿರೇಳಿಸುವ ರೋಚಕ – ಅದ್ಭುತ – ಸಾಹಸಮಯ ಕಥೆ – ಕವಿತೆಗಳಾಗಬಲ್ಲವು.ಹೃದಯವಂತರಿಗೆ, ಸೌಮ್ಯವಾದಿಗಳಿಗೆ; ಸೃಜನಶೀಲರಿಗೆ ಅವರು ತೋರುವ ಹೃದಯವಂತಿಕೆ – ಔದಾರ್ಯ, ಮಾಡುವ ಸಹಾಯ – ಸಹಕಾರ, ಆ ಸಹಾಯ ಹಸ್ತ, ಒಳ ಹೊರಹುಗಳ ಅರಿವ ಮೂಡಿಸಿ, ಸಾಧಕ – ಬಾಧಕಗಳ ತಿಳಿಸಿ ಹಿತ ನುಡಿಗಳಲಿ ತೋರುವ ಆ ಮಾರ್ಗದರ್ಶನ … ಪ್ರೀತಿಯ ಶುಭ ಹಾರೈಕೆಗಳ ನೀಡಿ ಹರಸಿ ಆಶೀರ್ವದಿಸುವ ಅವರ ಆ ನಿರ್ಮಲ ಮನಸ್ಸಿನ ಸಂಕಲ್ಪ ಶಕ್ತಿಯು ಹತ್ತಿರದಿಂದ ಬಲ್ಲ ಒಡನಾಡಿಗಳಿಗೆ ಮಾತ್ರವೇ ಗೊತ್ತು.

ಇಂತಹ ಅನೇಕಾನೇಕ ವಿಶೇಷ ಗುಣ – ಸ್ವಭಾವ – ಶಕ್ತಿ – ಸಾಮರ್ಥ್ಯಗಳ ಹೊಂದಿರುವ ಅವರು ಎಂಥವರಿಗೂ ಗುರುವಾಗಬಲ್ಲ ವಿಶಿಷ್ಠ ವ್ಯಕ್ತಿ .ಇಂತಹ ವಿಶೇಷ ವ್ಯಕ್ತಿತ್ವ ಉಳ್ಳ ದಾವಣಗೆರೆಯ ಹಿರಿಯ ಪತ್ರಕರ್ತರು & ” ಜನಮಿಡಿತ ” ದಿನಪತ್ರಿಕೆಯ ಸಂಪಾದಕರಾದ “ಜಿ.ಎಂ.ಆರ್ ಆರಾಧ್ಯ ” ಸರ್ ಅವರನ್ನು ನಾನು ನನ್ನ ಗುರುವೆಂದೇ ಕರೆಯಲು ಹೆಮ್ಮೆ ಪಡುತ್ತೇನೆ.

ಈ ನಮ್ಮ ಹೆಮ್ಮೆಯ ಗುರುವಿಗೆ ಪ್ರತಿಷ್ಠಿತ ಅಂತರ್ ರಾಷ್ಟ್ರೀಯ ಸಂಸ್ಥೆಯಾದ ದಾವಣಗೆರೆ “ಲಯನ್ಸ್ ಕ್ಲಬ್” ಸಂಸ್ಥೆಯು ಜೂನ್ 23 ರಂದು ನಗರದ ಹದಡಿ ರಸ್ತೆಯ ಶಾಮನೂರು ಶಿವಶಂಕರಪ್ಪ ಕಲ್ಯಾಣ ಮಂಟಪದಲ್ಲಿ ಆಯೋಜಿಸಿರುವ ಸಂಸ್ಥೆಯ ಶತಮಾನೋತ್ಸವ ಕಾರ್ಯಕ್ರಮದಲ್ಲಿ “ದೇವನಗರಿಯ ಸಿರಿ” ಪುರಸ್ಕಾರ ನೀಡಿ ಗೌರವಿಸುತ್ತಿದೆ .

ಈ ಪುರಸ್ಕಾರಕ್ಕೆ ಅವರನ್ನು ಆಯ್ಕೆ ಮಾಡಿದ ಲಯನ್ಸ್ ಕ್ಲಬ್ ಸಂಸ್ಥೆಗೂ ಹಾಗೂ ಗೌರವ ಸನ್ಮಾನ ಸ್ವೀಕರಿಸಲಿರುವ ಆರಾಧ್ಯ ಸರ್ ಅವರಿಗೂ ಈ ಮೂಲಕ ಅಭಿನಂದನೆಗಳು.

Leave a Reply

Your email address will not be published. Required fields are marked *

Trending

Exit mobile version