ರಾಜಕೀಯ

ದೇವರಾಜ್ ಅರಸು ‘ಕನಸು ನನಸು ಮಾಡಿದರು ಸಿದ್ದರಾಮಯ್ಯ’ : ದಿನೇಶ್ ಗುಂಡೂರಾವ್

Published

on

ಸುದ್ದಿದಿನ ಡೆಸ್ಕ್ : ಅರಸು ಅವರ ಅನೇಕ ಕನಸುಗಳನ್ನು ನನಸು ಮಾಡಿದವರು ಮಾಜಿ ಸಿಎಂ‌ ಸಿದ್ದರಾಮಯ್ಯ. ಇಂತಹ ಸಂದರ್ಭದಲ್ಲಿ‌ ನಾವು ಸುಳ್ಳು ವದಂತಿ, ಪ್ರಚಾರಕ್ಕೆ ಓಳಗಾಗಬಾರದು ಎಂದು ದಿನೇಶ್ ಗುಂಡೂರಾವ್ ಹೇಳಿದರು.

ಬಿಜೆಪಿಯವರು ಇತಿಹಾಸವನ್ನು ತಿರುಚುವ ಕೆಲಸ ಮಾಡುತ್ತಿದ್ದಾರೆ.‌ಬೋಪೋರ್ಸ್ ಹಗರಣದ ಬಗ್ಗೆ ಮಾತಾಡ್ತಿದ್ರು ಆದ್ರೆ ಈಗ ತಮ್ಮ ರೆಫೆಲ್ ಹಗರಣದ ಬಗ್ಗೆ ಏನು ಮಾತಾಡಲ್ಲ.ಸುಪ್ರೀಂ ಕೋರ್ಟ್ ಇದೆಲ್ಲವನ್ನೂ ಗಮನಿಸುತ್ತಿದೆ. ಮೋದಿ ಪ್ರಧಾನಿ ಆದಮೇಲೆ ಏನೋ ಕೆಲಸ ಮಾಡ್ತಾರೆ ಅಂತಾ ನಾವು ಅಂದುಕೊಂಡಿದ್ವಿ, ಆದ್ರೆ ಆಡಳಿತ ನೋಡಿದ್ರೆ ಏನು ಮಾಡಲಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು.

ಸಿಬಿಐ ಅಧಿಕಾರಿಗಳನ್ನು ರಾತ್ರೋರಾತ್ರಿ ಟ್ರಾನ್ಸ್ ಫರ್ ಮಾಡ್ತಾರೆ ಅಂದ್ರೆ ಏನು ಅರ್ಥ?
ಸ್ವಾಯತ್ತ ಸಂಸ್ಥೆಗಳನ್ನು ತಮಗೆ ಇಷ್ಟ ಬಂದಂತೆ ಬಳಸಿಕೊಳ್ಳುತ್ತಾರೆ.ಮೋದಿ ಪ್ರಜಾಪ್ರಭುತ್ವ ವಿರೋಧಿ ಕೆಲಸ ಮಾಡುತ್ತಿರುವ ಮೋದಿ ಫ್ಯಾಸಿಸ್ಟ್ ರೀತಿಯಲ್ಲಿ ವರ್ತಿಸುತ್ತಿದ್ದಾರೆ. ಯಾವೊಂದು ಜನಪರ ಕೆಲಸ ಮಾಡಲಿಲ್ಲ, ಆದರೆ ಬರೀ ಹೆಡ್ ಲೈನ್ ಮಾತ್ರ ಇದೆ. ಮೋದಿ ಅವರನ್ನು ನಾವು ಮುಂದಿನ ದಿನಗಳಲ್ಲಿ ತಗಿಯದೇ ಹೋದ್ರೆ ಈ ದೇಶ ಉಳಿಯಲ್ಲ.ಈ ದೇಶ ಉಳಿಸಲು ನಾವೆಲ್ಲ ಒಂದಾಗಬೇಕು. ಕೇಂದ್ರ ಸರ್ಕಾರವು ಮಾಧ್ಯಮ, ಕೋರ್ಟ್, ಅಧಿಕಾರಿಗಳನ್ನು ಕಂಟ್ರೋಲ್ ಮಾಡ್ತಿದ್ದಾರೆ ಎಂದು ದೂರಿದರು.

ಸುದ್ದಿದಿನ.ಕಾಂ|ವಾಟ್ಸಾಪ್|9986715401

Trending

Exit mobile version