/home/u584543641/domains/suddidina.com/public_html/wp-content/themes/zox-news/amp-single.php on line 77

Warning: Trying to access array offset on value of type bool in /home/u584543641/domains/suddidina.com/public_html/wp-content/themes/zox-news/amp-single.php on line 77
" width="36" height="36">

ದಿನದ ಸುದ್ದಿ

ಅ.24 ರಿಂದ ಬಿ.ಆರ್.ಟಿ.ಎಸ್. ಬಸ್ ಸೇವೆ ಧಾರವಾಡದ ವರೆಗೆ ವಿಸ್ತರಣೆ

Published

on

ಸುದ್ದಿದಿನ,ಧಾರವಾಡ : ಅಕ್ಟೊಬರ್ 2 ರಂದು ಹುಬ್ಬಳ್ಳಿಯಲ್ಲಿ ಪ್ರಾಯೋಗಿಕವಾಗಿ ಆರಂಭವಾಗಿರುವ ಬಿ.ಆರ್.ಟಿ.ಎಸ್ ಬಸ್ ಸಂಚಾರವನ್ನು ಬರುವ 24 ರಿಂದ ಧಾರವಾಡದವರೆಗೆ ವಿಸ್ತರಿಸಲಾಗುವುದು ಎಂದು ಧಾರವಾಡ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳಾದ ದರ್ಪಣ ಜೈನ್ ಅವರು ತಿಳಿಸಿದರು.

ಅವರು ಇತ್ತೀಚೆಗೆ ಧಾರವಾಡ ನಗರದ ಮಿತ್ರ ಸಮಾಜ ಆವರಣದಲ್ಲಿರುವ ಬಿ.ಆರ್.ಟಿ.ಎಸ್ ಬಸ್ ನಿಲ್ದಾಣದಲ್ಲಿ ಕಾಮಗಾರಿ ಪರಿಶೀಲನೆ ನಂತರ ಸುದ್ಧಿಗಾರರನ್ನು ಉದ್ದೇಶಿಸಿ, ಮಾತನಾಡಿ, ಬಿ.ಆರ್.ಟಿ.ಎಸ್ ಯೋಜನೆಯಡಿ ಕೈಗೊಂಡ ಕಾಮಗಾರಿಗಳು ಬಹುತೇಕ ಪೂರ್ಣಗೊಂಡಿವೆ. ಹುಬ್ಬಳ್ಳಿಯ ಬಿ.ಎಸ್.ಎನ್.ಎಲ್.ಬಸ್ ನಿಲ್ದಾಣದಿಂದ ಈಗ ನಿತ್ಯ ಐದು ಬಿಆರ್‌ಟಿಎಸ್ ಬಸ್‌ಗಳು ಉಣಕಲ್‌ವರೆಗೆ ಸಂಚರಿಸುತ್ತಿವೆ. ಅಕ್ಟೊಬರ್  10 ರಿಂದ ರಾಯಾಪೂರ ವರೆಗೆ ಮತ್ತು ನಂತರದ ದಿನಗಳಲ್ಲಿ ಧಾರವಾಡದ ಟೊಲ್‌ನಾಕಾವರೆಗೆ ಬಸ್ ಸಂಚಾರವನ್ನು ಆರಂಭಿಸಲಾಗುವುದು ಅಕ್ಟೊಬರ್ 24 ರಿಂದ ಪ್ರಾಯೋಗಿಕವಾಗಿ ಹುಬ್ಬಳ್ಳಿ ಧಾರವಾಡ ಅವಳಿನಗರದಲ್ಲಿ ಬಿಆರ್‌ಟಿಎಸ್ ಬಸ್‌ಗಳು ಸಂಚರಿಸಲಿವೆ‌ ಎಂದರು.

ಪ್ರಯಾಣಿಕರ ಅನುಕೂಲಕ್ಕಾಗಿ ಬಿಆರ್‌ಟಿಎಸ್ ಬಸ್ ನಿಲ್ದಾಣಗಳ ಹತ್ತಿರ ಅಗತ್ಯವಿರುವಲ್ಲಿ ವಾಹನ ನಿಲುಗಡೆಗೆ ವ್ಯವಸ್ಥೆ ಕಲ್ಪಿಸಲಾಗಿದೆ. ಮತ್ತೆ ಸಮೀಕ್ಷೆ ಮಾಡಿದ್ದು, ಇನ್ನು ಬೇಕಿರುವ ಸ್ಥಳಗಳಲ್ಲಿ ಪಾರ್ಕಿಂಗ್ ಕಲ್ಪಿಸಲು ಯೋಜನೆ ರೂಪಿಸಲಾಗುತ್ತಿದೆ. ಅವಳಿ ನಗರದಲ್ಲಿ ಸಂಚರಿಸುತ್ತಿರುವ ಬೇಂದ್ರೆ ಖಾಸಗಿ ಬಸ್ ಸೇವೆಯ ಪರಿಮಿಟ್ ಅವಧಿ ಜೂನ್ 2019ಕ್ಕೆ ಮುಗಿಯಲಿದೆ. ಅವಳಿ ನಗರದ ನಾಗರಿಕರೂ ಸೇರಿದಂತೆ ನಗರಕ್ಕೆ ಆಗಮಿಸುವ ಬೇರೆ ಊರುಗಳ ಪ್ರಯಾಣಿಕರಿಗೆ ಉತ್ತಮ ಸೇವೆಯನ್ನು ನೀಡಲು ಬಿಆರ್‌ಟಿಎಸ್ ಬದ್ಧವಾಗಿರುವುದರಿಂದ ಖಾಸಗಿ ಬಸ್ ಸೇವೆಯನ್ನು ಪರಿಮಿಟ್ ಅವಧಿ ಮುಗಿದ ನಂತರ ನವೀಕರಣ ಮಾಡದಂತೆ ಸರ್ಕಾರಕ್ಕೆ ಕೋರಲಾಗಿದೆ ಎಂದು ಅವರು ತಿಳಿಸಿದರು.

ಬಿಆರ್‌ಟಿಎಸ್ ಬಸ್ ಸೇವೆಯೊಂದಿಗೆ ನಗರ ಸಾರಿಗೆಯನ್ನು ಸಮನ್ವಯಗೊಳಿಸಿ ನಗರದ ತುಂಬಾ ಸಂಚರಿಸಲು ಪ್ರಯಾಣಿಕರಿಗೆ ಅನುಕೂಲವಾಗುವಂತೆ ಒಂದೇ ಟಿಕೆಟ್ ಅನ್ವಯವಾಗುವಂತೆ ಸ್ಮಾರ್ಟ ಕಾರ್ಡ್ ನೀಡಲು ಯೋಚಿಸಲಾಗಿದೆ. ಇದು ರಾಜ್ಯದಲ್ಲಿಯೇ ಪ್ರಥಮ ಪ್ರಯೋಗವಾಗಲಿದೆ. ಪ್ರಾಯೋಗಿಕ ಬಿಆರ್‌ಟಿಎಸ್ ಸಂಚಾರ ಸೇವೆಗೆ ಅವಳಿನಗರದ ನಾಗರಿಕರಿಂದ ಉತ್ತಮ ಸ್ಪಂದನೆ ದೊರಕಿದೆ. ಸ್ವಚ್ಚತೆ, ಶಿಸ್ತು ಮತ್ತು ಸಂಯಮದಿಂದ ಸಾರ್ವಜನಿಕರು ಬಿಆರ್‌ಟಿಎಸ್ ಸೇವೆಗೆ ಉತ್ತಮ ಪ್ರತಿಕ್ರಿಯೆ ನೀಡಿದ್ದಾರೆ. ಅವಳಿನಗರದ ನಾಗರಿಕರ ಮತ್ತು ನಿತ್ಯ ಪ್ರಯಾಣಿಸುವ ಪ್ರಯಾಣಿಕರ ಸಹಕಾದಿಂದ ಬಿಆರ್‌ಟಿಎಸ್ ಬಸ್ ಸೇವೆ ರಾಷ್ಟ್ರಕ್ಕೆ ಮಾದರಿಯಾಗಲಿದೆ. ಈ ಉತ್ತಮ ಸಂಚಾರ ವ್ಯವಸ್ಥೆಯಿಂದ ಅಭಿವೃದ್ಧಿಗೆ ಇನ್ನಷ್ಟು ಅವಕಾಶವಾಗಲಿದೆ ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ದರ್ಪಣ ಜೈನ್ ತಿಳಿಸಿದರು.

ಈ ಸಂದರ್ಭದಲ್ಲಿ ಎನ್.ಡಬ್ಲು.ಕೆ.ಆರ್.ಟಿ.ಸಿ ಹಾಗೂ ಬಿಆರ್‌ಟಿಎಸ್ ವ್ಯವಸ್ಥಾಪಕ ನಿರ್ದೇಶಕರಾದ ರಾಜೇಂದ್ರ ಚೋಳನ್ ಮತ್ತು ಬಿಆರ್‌ಟಿಎಸ್ ಅಧಿಕಾರಿಗಳು ಉಪಸ್ಥಿತರಿದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9986715401

Trending

Exit mobile version