ದಿನದ ಸುದ್ದಿ
ಅತ್ಯಾಚಾರ ಆರೋಪಿ ಸ್ವಾಮೀಜಿ ಶಿಷ್ಯಂದಿರ ವಿಚಾರಣೆ
ಸುದ್ದಿದಿನ ಡೆಸ್ಕ್: ಅತ್ಯಾಚಾರ ಆರೋಪದಲ್ಲಿ ಸಿಲುಕಿರುವ ಪಾಂಡವಪುರದ ಮಹಾಕಾಳಿ ಚಕ್ರೇಶ್ವರಿ ತ್ರಿಧಾಮ ಮಠದ ವಿದ್ಯಾಹಂಸ ಭಾರತಿ ಸ್ವಾಮೀಜಿ ಅವರ ಮೂವರು ಶಿಷ್ಯಂದಿರನ್ನು ವಶಕ್ಕೆ ಪಡೆದಿರುವ ಮೈಸೂರಿನ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
ಸ್ವಾಮೀಜಿ ಎಲ್ಲಿ ಹೋಗುತ್ತಿದ್ದರು. ಯಾರ್ಯಾರು ಆಶ್ರಮಕ್ಕೆ ಭೇಟಿ ನೀಡುತ್ತಿದ್ದರು. ಸ್ವಾಮೀಜಿ ಜತೆ ಯಾರ್ಯಾರ ಒಡನಾಟ ಇತ್ತು ಮೊದಲಾದ ಮಾಹಿತಿಗಳನ್ನು ಪೊಲೀಸರು ಕಲೆ ಹಾಕುತ್ತಿದ್ದು ತಲೆ ತಪ್ಪಿಸಿಕೊಂಡಿರುವ ಸ್ವಾಮೀಜಿ ಹಾಗೂ ಸಂತ್ರಸ್ತೆ ಪತಿ ರಾಜೇಶ್ ಬೋರೆ ಹುಡುಕಾಟವನ್ನು ತೀವ್ರಗೊಳಿಸಿದ್ದಾರೆ.
ಚಾತುರ್ಮಾಸ ಕಾರ್ಯಕ್ರಮಕ್ಕಾಗಿ ಮೈಸೂರಿಗೆ ಬಂದಿದ್ದ ಸ್ವಾಮೀಜಿ ಅವರನ್ನು ಮನೆಗೆ ಕರೆತಂದ ಪತ್ರಕರ್ತ ರಾಜೇಶ್ ಬೊರೆ ಪತ್ನಿ ಮೇಲೆ ಅತ್ಯಾಚಾರ ಎಸಗಲು ನೆರವಾಗಿದ್ದ ಎಂದು ಮಹಿಳೆ ತನ್ನ ದೂರಿನಲ್ಲಿ ತಿಳಿಸಿದ್ದಾರೆ. ಆಗಿನಿಂದಲೂ ಸ್ವಾಮೀಜಿ ಹಾಗೂ ಬೋರೆ ನಾಪತ್ತೆಯಾಗಿದ್ದು, ಪದೇ ಪದೆ ಸ್ಥಳ ಬದಲಾಯಿಸುತ್ತಿರುವುದರಿಂದ ಹುಡುಕಾಟ ಕಷ್ಟವಾಗಿದೆ ಎಂದು ಪೊಲೀಸರು ಹೇಳಿದ್ದಾರೆ.