ದಿನದ ಸುದ್ದಿ

ದಿಶಾರವಿ ರೈತರ ಪ್ರತಿಭಟನೆಯ ಸೋಗಿನಲ್ಲಿ ದೇಶದಲ್ಲಿ ಅಶಾಂತಿ ಉಂಟುಮಾಡುವ ಜಾಗತಿಕ ಪಿತೂರಿಯ ಭಾಗವಾಗಿದ್ದಾರೆ : ದೆಹಲಿ ಪೊಲೀಸ್ ಆರೋಪ

Published

on

ಸುದ್ದಿದಿನ, ನವದೆಹಲಿ : ಟೂಲ್ ಕಿಟ್ ಪ್ರಕರಣದಲ್ಲಿ ಸಾಮಾಜಿ ಕಾರ್ಯಕರ್ತೆ ಹಾಗೂ ಪರಿಸರವಾದಿ ದಿಶಾ ರವಿ ಅವರ ಜಾಮೀನು ಅರ್ಜಿಯನ್ನು ವಿರೋಧಿಸಿ ದೆಹಲಿ ಪೊಲೀಸರು ಶನಿವಾರ ನ್ಯಾಯಾಲಯದಲ್ಲಿ ಆರೋಪಿಸಿದ್ದಾರೆ.

ದಿಶಾರವಿ ಖಲಿಸ್ತಾನವನ್ನು ಬೆಂಬಲಿಸುವವರೊಂದಿಗೆ ಟೂಲ್ ಕಿಟ್ ಸಿದ್ಧಪಡಿಸಿದ್ದಾರೆ ಮತ್ತು ದೇಶದಲ್ಲಿ ಅಶಾಂತಿಯನ್ನು ಉಂಟುಮಾಡುವ ಜಾಗತಿಕ ಪಿತೂರಿಯ ಭಾಗವಾಗಿ ರೈತರ ಪ್ರತಿಭಟನೆಯನ್ನು ಬಳಸಿಕೊಳ್ಳುಕುತ್ತಿದ್ದಾರೆ ಎಂದಿದ್ದಾರೆ.

“ಇದು ಕೇವಲ ಟೂಲ್ ಕಿಟ್ ಅಲ್ಲ. ದೇಶದಲ್ಲಿ ಅಶಾಂತಿ ಸೃಷ್ಟಿಸುವುದೇ ಇವರ ನಿಜವಾದ ಯೋಜನೆಯಾಗಿದೆ” ಎಂದು ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಧರ್ಮೇಂದರ್ ರಾಣಾ ಅವರ ಮುಂದೆ ಪೊಲೀಸರು ತಿಳಿಸಿದ್ದಾರೆ.

ದಿಶಾ ರವಿ ಅವರ ವಾಟ್ಸಾಪ್ ಚಾಟ್‌ಗಳು, ಇಮೇಲ್‌ಗಳು ಮತ್ತು ಇತರ ಪುರಾವೆಗಳನ್ನು ಹಾಗೂ ತನ್ನ ಹೋರಾಟದ ಕ್ರಮವನ್ನು ಮತ್ತು ಆಕೆ ತಪ್ಪು ಮಾಡದಿದ್ದರೆ ಸಾಕ್ಷ್ಯವನ್ನು ಏಕೆ ಡಿಲೀಟ್ ದಳು? ಇದು ಆಕೆಯ ತನ್ನ ತಪ್ಪಿತಸ್ಥ ಮನಸ್ಥಿತಿಯನ್ನು ತೋರಿಸುತ್ತದೆ ಎಂದು ಆರೋಪಿಸಿದರು.

ದಿಶಾ ರವಿ “ಭಾರತದಲ್ಲಿ ಅಶಾಂತಿ ಉಂಟುಮಾಡುವ ಮತ್ತು ರೈತರ ಪ್ರತಿಭಟನೆಯ ಸೋಗಿನಲ್ಲಿ ಅಶಾಂತಿಯನ್ನು ಉಂಟುಮಾಡುವ ಜಾಗತಿಕ ಪಿತೂರಿಯ ಭಾಗವಾಗಿದ್ದಾರೆ” ಹಾಗೂ ಖಲಿಸ್ತಾನವನ್ನು ಪ್ರತಿಪಾದಿಸುವವರೊಂದಿಗೆ ಟೂಲ್ ಕಿಟ್ ತಯಾರಿಸಿ ಹಂಚಿಕೊಂಡಿದ್ದಾಳೆ ಎಂದು ಅದು ಆರೋಪಿಸಿದ್ದಾರೆ. “ಈ ಟೂಲ್ ಕಿಟ್ ಹಿಂದೆ ಕೆಡುಕಿನ ಪಿತೂರಿ ಇದೆ ಎಂದು ಇದು ತೋರಿಸುತ್ತದೆ” ಎಂದು ಪೊಲೀಸರು ನ್ಯಾಯಾಲಯಕ್ಕೆ ತಿಳಿಸಿದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version