ದಿನದ ಸುದ್ದಿ
ಬಿಜೆಪಿಯವರ ಎಲ್ಲ ಮಸಲತ್ತು ಗೊತ್ತಿದೆ, ಎಲ್ಲಾ ಬಿಚ್ಚಿಡ್ತೀನಿ : ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಗರಂ
ಸುದ್ದಿದಿನ,ಶಿವಮೊಗ್ಗ: ರಾಜ್ಯದೆಲ್ಲೆಡೆ ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಬಿಜೆಪಿಯವರು ಕಿರುಕುಳ ನೀಡಲು ಯತ್ನಿಸುತ್ತಿದ್ದಾರೆ. ಇವರ ಷಡ್ಯಂತ್ರದ ವಿರುದ್ಧ ಎಲ್ಲಾಕಡೆ ಕೇಸು ದಾಖಲಿಸುತ್ತೇವೆ. ಬಿಜೆಪಿಯವರು ಮಾಡಬಾರದನ್ನ ಮಾಡಿಕೊಂಡು ನಮ್ಮನ್ನು ದೂರುತ್ತಿದ್ದು, ಕಾಲ ಇದಕ್ಕೆಲ್ಲ ಉತ್ತರ ಹೇಳುತ್ತದೆ. ಬಿಜೆಪಿಯವರು ಮಾಡುತ್ತಿರುವ ಎಲ್ಲ ಮಸಲತ್ತು ಗೊತ್ತಿದೆ. ಟೈಂ ಬಂದಾಗ ಎಲ್ಲಾ ಬಿಚ್ಚಿಡ್ತೀನಿ, ಈ ಬಗ್ಗೆ ಸಿದ್ದರಾಮಯ್ಯ ಮುಂದಿನ ದಿನಗಳಲ್ಲಿ ಮಾತನಾಡುತ್ತಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಬಿಜೆಪಿ ವಿರುದ್ಧ ಗುಡುಗಿದರು.
ಶಿವಮೊಗ್ಗದಲ್ಲಿ ಶನಿವಾರ ನಡೆದ ಜನಾಕ್ರೋಶ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಜಾರಕಿಹೊಳಿ ಅಶ್ಲಿಲ ಸಿಡಿ ವಿಚಾರದಲ್ಲಿ ಬಿಜೆಪಿಯವರು ನನ್ನನ್ನು ಸಿಲುಕಿಸಲು ನೋಡ್ತಿದಾರೆ. ಬಿಜೆಪಿಯವರು ಮಾಡಬಾರದ್ದನ್ನು ಮಾಡಿ, ಆರೋಪವನ್ಮ ನಮ್ಮ ಮೇಲೆ ಹೊರಿಸಲು ಪ್ರಯತ್ನ ಪಡಿತ್ತಿದ್ದಾರೆ. ಆದರೆ ನಾನು ಯಾರಿಗೂ ಹೆದರುವ ಮಗನಲ್ಲ ಎಂದು ಗರಂ ಆದರು.
ಇದನ್ನೂ ಓದಿ | ಹಲವು ತಡೆಗೋಡೆಗಳ ನಡುವೆಯೂ ಪ್ರಪಂಚದಾದ್ಯಂತ 69ಮಹಿಳೆಯರು ದೇಶದ ಚುಕ್ಕಾಣಿ ಹಿಡಿದಿದ್ದಾರೆ : ಸಾಮಜಿಕ ಕಾರ್ಯಕರ್ತೆ ಭವ್ಯಾ ನರಸಿಂಹಮೂರ್ತಿ
ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣದ ಕುರಿತು ನಡೆಯಲಿರುವ ಎಸ್.ಐ.ಟಿ. ತನಿಖೆ ಸರಿದಾರಿಯಲ್ಲಿ ನಡೆಯಬೇಕು. ಈ ಬಗ್ಗೆ ನಾವು ಕೂಡ ಗಮನ ಹರಿಸುತ್ತೇವೆ. ಬಿಜೆಪಿ ಸರ್ಕಾರ ಅಧಿಕಾರ ದುರುಪಯೋಗ ಮಾಡಿಕೊಂಡು ನಮ್ಮ ಶಾಸಕರ ಮೇಲೆ ಕೇಸು ಹಾಕಿದೆ ಎಂದು ವಾಗ್ದಾಳಿ ನಡೆಸಿದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243