ದಿನದ ಸುದ್ದಿ
ಕೊಡಗಿನಲ್ಲಿ ಪ್ರವಾಹ: ನಟ ಶಿವಣ್ಣ ನೀಡಿದ ದೇಣಿಗೆ ಎಷ್ಟು ಗೊತ್ತಾ ?
ಸುದ್ದಿದಿನ ಡೆಸ್ಕ್: ಮಹಾ ಮಳೆಗೆ ಇಡೀ ಕೊಡಗು ತತ್ತರಿಸಿದ್ದು, ಪರಿಹಾರಕ್ಕೆ ಇಡೀ ಕರುನಾಡು ಒಂದಾಗಿದೆ. ರಾಜ್ಯದ ಮೂಲೆ ಮೂಲೆಗಳಿಂದ ಪರಿಹಾರ ಸಂಗ್ರಹಿಸಿ ನೀಡಲಾಗುತ್ತಿದೆ. ಇದಕ್ಕೆ ಸ್ಯಾಂಡಲ್ ವುಡ್ ಮಂದಿ ಕೂಡ ಸಾಥ್ ನೀಡಿದ್ದಾರೆ.
ಕನ್ನಡ ಚಿತ್ರರಂಗದ ಖ್ಯಾತ ನಟ, ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರು ಇಂದು ಸಂಜೆ 5 ಗಂಟೆಗೆ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ 10 ಲಕ್ಷ ರೂ.ಗಳ ಚೆಕ್ ಹಸ್ತಾಂತರ ಮಾಡಿದ್ದಾರೆ. ನೆರೆ ಸಂತ್ರಸ್ತರ ಸಂಕಷ್ಟವನ್ನು ಕಂಡ ಚಿತ್ರರಂಗದ ಹಿರಿಯ ಕಲಾವಿದೆ ಲೀಲಾವತಿ, ವಿನೋದ್ ರಾಜ್ ಕುಮಾರ್ ಮತ್ತು ಜಗ್ಗೇಶ್ ಅವರು ನಿನ್ನೆ ತಮ್ಮ ಕೈಲಾದ ಸಹಾಯ ಮಾಡಿ ಮಾನವೀಯತೆ ಮೆರೆದಿದ್ದರು.