ದಿನದ ಸುದ್ದಿ
ವರದಕ್ಷಿಣೆ ಕಿರುಕುಳ : ಪತ್ನಿಗೆ ಹುಚ್ಚಿ ಪಟ್ಟ ಕಟ್ಟಿ ಹಿಂಸೆ ನೀಡಿದ ಪತಿರಾಯ
ಸುದ್ದಿದಿನ, ಬೆಂಗಳೂರು : ವರದಕ್ಷಿಣೆ ಆಸೆಗೆ ಪತ್ನಿಯನ್ನೇ ಮಾನಸಿಕ ರೋಗಿ ಎಂದು ನಗರದ ಪತಿ ಚೇತನ್ ಎಂಬಾತ ಆಕೆಗೆ ಕಿರುಕುಳ ನೀಡುತ್ತಿರುವ ಪ್ರಕರಣ ಬೆಳಕಿಗೆ ಬಂದಿದೆ.
ಆಕೆ ಮೆಂಟಲ್ ಎಂದು ಹೇಳಿ ಕೋರ್ಟ್ ನಲ್ಲಿ ಮದ್ವೆ ಸಿಂಧುತ್ವದ ದಾವೆ ಹೂಡಿದ್ದ ಪತಿರಾಯ ಚೇತನ್ ಆದರೆ ಪತ್ನಿ ಆರೋಗ್ಯವಾಗಿದ್ದಾಳೆ ಎಂದು ವೈದ್ಯರಿಂದ ದೃಡೀಕರಣ ಪತ್ರದೊರೆತಿದೆ. ಈ ಆಧಾರದ ಮೇಲೆ ದಾವೆ ವಜಾಗೊಳಿಸಿದೆ ನ್ಯಾಯಾಲಯ. ಆದರೂ ತನ್ನ ತಂದೆ ತಾಯಿಯ ಜೊತೆ ಸೇರಿ ಪತ್ನಿಯ ಮೆಲೆ ಹಲ್ಲೆ ನಡೆಸಿದ್ದಾನೆ ಪತಿ ಚೇತನ್. ವರದಕ್ಷಿಣೆಗಾಗಿ ಹಲ್ಲೆ ನಡೆಸಿರುವ ಪತಿ ಚೇತನ್ ಮೇಲೆ ಹೆಣ್ಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9986715401