ಬಹಿರಂಗ

ವಿಶ್ವಗುರು ‘ಬಸವಣ್ಣ’ನ ಬಗ್ಗೆ ಡಾ.ಬಿ.ಆರ್.ಅಂಬೇಡ್ಕರ್‌ ಹೇಳಿರೋದ್ದಿಷ್ಟು..! : ಮಿಸ್ ಮಾಡ್ದೆ ಈ ಲೇಖನ ಓದಿ

Published

on

  • ಡಾ.ಬಿ.ಆರ್, ಅಂಬೇಡ್ಕರ್

ಬಸವೇಶ್ವರರು

ನ್ನೆರಡನೆಯ ಶತಮಾನದಲ್ಲಿ ಬಿಜ್ಜಳ ಆಗಿ ಹೋದನು. ಅವನು ಕರ್ನಾಟಕದ ರಾಜನಾಗಿದ್ದನು. ಬಸವನು ಅವನ ಪ್ರಧಾನಿಯಾಗಿದ್ದನು. ಬಸವನು ಜಾತಿಯಿಂದ ಬ್ರಾಹ್ಮಣನು. ಆ ಕಾಲಕ್ಕೆ ಹಿಂದು ಹಾಗೂ ಜೈನ ಧರ್ಮಗಳ ಪ್ರಾಬಲ್ಯವಿತ್ತು. ಬಿಜ್ಜಳ ಜೈನ ಧರ್ಮದವನು. ಬಸವನು ಶೂರನು, ಧೋರಣೆಯವನು, ಆದರೆ ಭಕ್ತಿಪ್ರಧಾನನು. ಅವನು ಆ ಕಾಲದ ಹಿಂದು ಧರ್ಮ ಹಾಗೂ ಜೈನ ಧರ್ಮಗಳ ಕಂದಾಚಾರಗಳನ್ನು ಕಂಡು ದುಃಖಿತನಾದನು. ಅವನಿಗೆ ಇವೆರಡೂ ಧರ್ಮಗಳಲ್ಲಿ ಬಹುಜನ ಸಮಾಜದ ದೈನ್ಯಾವಸ್ಥೆ ಹಾಗೂ ಪುರೋಹಿತ ವರ್ಗದ ಸಂಪನ್ನತೆಗಳೇ ಕಂಡವು !

ಶ್ರೀ ಬಸವರು ವೇದ, ವೇದಾಂಗ, ಶ್ರುತಿ, ಸ್ಮೃತಿ ಪುರಾಣಗಳ ಮೇಲೆ ಪ್ರಚಂಡವಾದ ದಾಳಿಯನ್ನು ಮಾಡಿದರು. ಇದೇ ರೀತಿಯಾಗಿ ಅವರು ಬ್ರಾಹ್ಮಣರ ವರ್ಚಸ್ವ, ಜಾತಿಭೇದ ಮತ್ತು ಪೂಜೆ-ಅರ್ಚೆ ಹಾಗೂ ಇತರ ಧಾರ್ಮಿಕ ವಿಧಿಗಳ ವಿರುದ್ಧವಾಗಿ ಬಂಡು ಹೂಡಿದರು. ಅವರು ಹೊಸ *ಲಿಂಗಾಯತ ಧರ್ಮವನ್ನು* ಸ್ಥಾಪಿಸಿದರು. ಬಹುಜನ ಸಮಾಜದವರು ಹಾಗೂ ಬ್ರಾಹ್ಮಣ ಸಮಾಜದವರು ಕೂಡ ಶ್ರೀ ಬಸವರ ಲಿಂಗಾಯತ ಧರ್ಮಕ್ಕೆ ಬಂದರು. (The Lingayat Movement, p.20).

ಅವರು ಧಾರ್ಮಿಕ ಹಾಗೂ ಸಾಮಾಜಿಕ ಕ್ರಾಂತಿಯ ಮೂಲಕ ಮಾನವ ಕ್ಷೇತ್ರದ ಶುದ್ಧೀಕರಣವನ್ನು ಮಾಡಲು ಯತ್ನಿಸಿದರು. ಅದಕ್ಕಾಗಿ ಕರ್ಮಕಾಂಡ, ಯಜ್ಞಯಾಗ, ಮೂಢ ನಂಬಿಕೆ, ಚಾತುರ್ವರ್ಣ್ಯಗಳನ್ನು ಕಠೋರವಾಗಿ ವಿರೋಧಿಸಿದರು. ಪುರೋಹಿತವಾದ, ತೀರ್ಥಯಾತ್ರೆ, ಗ್ರಂಥಪೂಜೆ, ಪ್ರಾರಬ್ಧ, ಪರಲೋಕ, ಪರದೇವ, ಪರತತ್ವಗಳನ್ನು ನಂಬಿ ನಿಷ್ಕ್ರಿಯಗೊಂಡ ಸಮಾಜವನ್ನು ಸಕ್ರಿಯಗೊಳಿಸಲು ಕಂಕಣಬದ್ಧರಾದರು. ಕಾಯಕವೇ ಕೈಲಾಸ. ಪ್ರತಿಯೊಂದು ಕಾಯಕವು ಕೈಲಾಸದಷ್ಟೇ ಪವಿತ್ರ. ಅದರಲ್ಲಿ ಉಚ್ಚ ನೀಚತೆಯ ಭೇದವಿಲ್ಲ, ಎಂದು ಹೇಳಿದರು ……… ‘ಸದಾಚಾರವೇ ಸ್ವರ್ಗ, ದುರಾಚಾರವೇ ನರಕ’ ಎಂದು ಹೇಳಿ ವಾಸ್ತವವಾದವನ್ನು ಪ್ರಕಟಪಡಿಸಿದರು.” 1

“ಬಸವರಿಗೆ ಚಿಕ್ಕಂದಿನಿಂದಲೂ ಜಾತಿಭೇದವೆಂದರೆ ಜಿಗುಪ್ಸೆ. ಚಿಕ್ಕಂದಿನಿಂದಲೇ ಅವರು ಜಾತಿಭೇದವನ್ನು ಕಿತ್ತೆಸೆಯುವ ಕೆಲಸಕ್ಕೆ ಕೈಹಾಕಿದರು. ‘ಬಸವೇಶ್ವರರ ಚರಿತ್ರೆಯನ್ನು ಇ. ಸ. 1369 ರ ಸುಮಾರಿಗೆ ರಚಿಸಲಾದ ‘ಬಸವ ಪುರಾಣ’, ಎಂಬ ಗ್ರಂಥದಲ್ಲಿ ಹೆಣೆಯಲಾಗಿದ್ದು ಅದರ ಮೂರನೆಯ ಭಾಗದಲ್ಲಿ, “ಬಸವನು ಬ್ರಾಹ್ಮಣ ಪುತ್ರನಾದ ಕಾರಣ ಅವನ ಮುಂಜಿವೆಯನ್ನು ಗೊತ್ತುಪಡಿಸಲಾಯಿತು. ಆಗ ಅವನು ‘ನಾನು ಬ್ರಾಹ್ಮಣನಲ್ಲ’ ಎಂದು ಹೇಳಿ ಮುಂಜಿವೆಯನ್ನು ನಿರಾಕರಿಸಿದನು!” ಎಂಬ ಸಂಗತಿಯನ್ನು ನಮೂದಿಸಲಾಗಿದೆ (ವಿಚಾರ ಸಮೀಕ್ಷೆ, ಪು. 53).

ಬಸವೇಶ್ವರರು ಜಾತಿಭೇದದ ಆಡಂಬರವನ್ನು ನಾಶಪಡಿಸಲೆಂದು ಆಮರಣವಾಗಿ ಚಳುವಳಿಯನ್ನು ಹೂಡಿದರು, ಅದಕ್ಕಾಗಿ ದುಡಿದುಕೊಂಡರು. ಆದರೆ ಅವರಿಗೆ ಸಮಾಜದಿಂದ ಜಾತಿಭೇದವನ್ನು ಕಿತ್ತೆಸೆಯುವಲ್ಲಿ ಯಶಸ್ಸು ಲಭಿಸಲಿಲ್ಲ. ಅದಕೆ ಕಾರಣವೆಂದರೆ, ಹಿಂದೂ ಧರ್ಮದಲ್ಲಿರುವ ಅವತಾರ, ಪುನರ್ಜನ್ಮ, ಕರ್ಮವಾದ, ಮೋಕ್ಷ, ನರಕಯಾತನೆ, ಮಾಯಾವಾದ, ಮೊದಲಾದ ಉಪದೇಶಗಳು ಜನರ ಮನಸ್ಸಿನ ಮೇಲೆ ಕಾಯಮ್ಮಾಗಿ ಮುದ್ರೆಯೊತ್ತಿರುವುದು ! ಬಸವೇಶ್ವರರ ಅನುಯಾಯಿಗಳು ಕಾಲಾಂತರದಲ್ಲಿ ಲಿಂಗಾಯತ ಧರ್ಮದಲ್ಲೂ ಜಾತಿಭೇದದ ಸಸಿಯನ್ನು ಬೆಳೆಯಗೊಟ್ಟರು. ಹೀಗಾಗಿ ಜಾತಿಭೇದದ ಜಾಲವು ಲಿಂಗಾಯತರಲ್ಲಿ ಕಾಯಮ್ಮಾಗಿ ಹರಡಿತು. “ 2

ಅಡಿಟಿಪ್ಪಣಿ

  • ಮೋಗಲೇಕರ, ಡಾ. ಪು. 43.
  • ಖೈರಮೋಡೆ, ಸಂ. 1, ಪು. 116-117.
  • (ಮೂಲ: ಅಂಬೇಡ್ಕರ್ ಸಮಗ್ರ ಸಂಪುಟ: 22, ಪುಟ: 540-541)

ಕೃಪೆ : ಅಜೋ

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version