ಅಂತರಂಗ
ಭಾರತದಲ್ಲಿ ‘ಹಿಂದೂ ಸಮಾಜ’ ಎಂಬುದು ಅಸ್ತಿತ್ವದಲ್ಲಿಯೇ ಇಲ್ಲ..!
- ಹ.ರಾ.ಮಹಿಶ
ಹಿಂದೂರಾಷ್ಟ್ರ ಪರಿಕಲ್ಪನೆ ಎಂದರೆ ಬ್ರಾಹ್ಮಣರಾಷ್ಟ್ರವಲ್ಲದೆ ಮತ್ತೇನೂ ಅಲ್ಲ..!!
ಬಂಧುಗಳೇ, ಭಾರತವು ತನ್ನೊಡಲಿನಲ್ಲಿಯೇ ಜೈನ ಬೌದ್ಧ ಹಿಂದೂ ಸಿಖ್ ಮುಂತಾದ ಅನೇಕ ಧರ್ಮಗಳಿಗೆ ಜನ್ಮ ನೀಡಿದೆ. ಮತ್ತು ಹೊರಗಿನಿಂದ ಬಂದ ಧರ್ಮಗಳಿಗೂ ಆಶ್ರಯನೀಡಿದೆ. (ಇಸ್ಲಾಂ – ಕ್ರೈಸ್ತ ಹೊರಗಿನದವು ನಿಜ ಆದರೆ ಇಂದು ಭಾರತದಲ್ಲಿ ಇಸ್ಲಾಂ-ಕ್ರೈಸ್ತ ಧರ್ಮವನ್ನು ಅನುಸರಿಸುತ್ತಿರುವವರು ಹೊರಗಿನವರಲ್ಲ ಅವರು ಭಾರತದ ಅಪ್ಪಟ ಮೂಲನಿವಾಸಿಗಳು ಹಾಗು ನಮ್ಮ ಬಂಧು ಬಾಂಧವರೇ ಆಗಿದ್ದಾರೆ) ಹಾಗಾಗಿ ಭಾರತವು ಸರ್ವಧರ್ಮ ಭ್ರಾತೃತ್ವದ ಜಾತ್ಯಾತೀತ ಧರ್ಮಾತೀತವಾದ ರಾಷ್ಟ್ರವೆಂಬುದು ಇಡೀ ಜಗತ್ತಿಗೇ ಗೊತ್ತಿದೆ ಮತ್ತು ಅದು ಸಂವಿಧಾನಬದ್ಧವಾಗಿದೆ ಕೂಡ. ನಮ್ಮ ದೇಶವು ಯಾವುದೇ ಒಂದು ಧರ್ಮದ ದೇಶವಾಗುವುದು ಕನಸಿನ ಮಾತು..!
ಬಾಬಾಸಾಹೇಬರು ಹೇಳುತ್ತಾರೆ “ಹಿಂದೂ ಸಮಾಜ” ಎಂಬುದೇ ಒಂದು ಮಿಥ್ಯ ಪದ.ಇದು ಎಲ್ಲಕ್ಕಿಂತ ಮುಂಚೆ ಒಪ್ಪಿಕೊಳ್ಳಬೇಕಾದ ಮಾತು. “ಹಿಂದೂ” ಎಂಬ ಹೆಸರೇ ವಿದೇಶೀಯವಾಗಿದೆ. ಹೊರಗಿನಿಂದ ಬಂದ ಮಹಮ್ಮದೀಯರು ತಮ್ಮಿಂದ ಬೇರೆಯಾದ ಇಲ್ಲಿಯ ನಿವಾಸಿಗಳನ್ನು ಈ ಹೆಸರಿನಿಂದ ಗುರುತಿಸಿದರು. ಮಹಮ್ಮದೀಯ ದಾಳಿಗಳಿಗೆ ಮುಂಚಿನ ಯಾವ ಸಂಸ್ಕೃತ ಗ್ರಂಥದಲ್ಲಿಯೂ ‘ಹಿಂದೂ’ ಪದದ ಉಲ್ಲೇಖವಿಲ್ಲ.
ವಾಸ್ತವವಾಗಿ ಈಗಲೂ “ಹಿಂದೂ ಸಮಾಜ” ಎಂಬುದು ಅಸ್ತಿತ್ವದಲ್ಲಿಲ್ಲ..! ಅದು ಅನೇಕ ಜಾತಿಗಳ ಒಂದು ಸಮೂಹ ಅಷ್ಟೇ..! ಪ್ರತಿಯೊಂದು ಜಾತಿಗೂ ತನ್ನ ಜಾತಿಯ ಅಸ್ತಿತ್ವದ ಎಚ್ಚರವಿದೆ. ಈ ಜಾತಿಗಳಿಗೆ ಒಂದು ಸಂಯುಕ್ತ ಪದ್ಧತಿ ಇಲ್ಲ. ಹಿಂದೂ-ಮುಸ್ಲಿಂ ದಂಗೆಯಾದ ಪ್ರಸಂಗವನ್ನು ಬಿಟ್ಟರೆ ಉಳಿದ ಯಾವ ಕಾಲದಲ್ಲಿಯೂ ಒಂದು ಜಾತಿಗೂ ಇನ್ನೊಂದು ಜಾತಿಗೂ ಸಂಬಂಧ ಇದ್ದಂತೆ ತೋರುವುದಿಲ್ಲ..! ಇತರ ಜಾತಿಗಿಂತ ತಾನು ಬೇರೆಯೆಂದೂ ವಿಶಿಷ್ಠವೆಂದು ತೋರಿಸಿಕೊಳ್ಳಲು ಪ್ರತಿಯೊಂದು ಜಾತಿಯೂ ಸದಾ ಪ್ರಯತ್ನಿಸುತ್ತಿರುತ್ತದೆ..!
ಪ್ರತಿಯೊಬ್ಬ ಹಿಂದೂವಿನಲ್ಲಿ ಇರುವುದು ಇರುವ ಪ್ರಜ್ಞೆ ಒಂದೇ, ಅದು ತನ್ನ ಜಾತಿ ಪ್ರಜ್ಞೆ..! ಆದುದರಿಂದ ಹಿಂದೂಗಳದೇ ಒಂದು ಸಮಾಜವಾಗಲೀ ಒಂದು ರಾಷ್ಟ್ರವಾಗಲಿ ಸಾಧ್ಯವಾಗಿಲ್ಲ ಸಾಧ್ಯವಾಗುವುದೂ ಇಲ್ಲ..! ದೇಶವು ಸಮಭಾವನೆಯಿಂದ ಒಗ್ಗೂಡುವುದನ್ನು ಹಿಂದೂಧರ್ಮದೊಳಗಿನ ಜಾತಿಪದ್ಧತಿಯು ಪ್ರತಿಬಂಧಿಸುತ್ತದೆ. ಜಾತಿವಿನಾಶವಾಗದೇ ಅಥವಾ ಜಾತಿಗಳು ಇರುವವರೆಗೆ ಹಿಂದೂ ಸಮಾಜ ಅಥವಾ ಹಿಂದೂ ರಾಷ್ಟ್ರ ಕಲ್ಪನೆಯೇ ಒಂದು ಭ್ರಾಂತಿ..!
ಬ್ರಾಹ್ಮಣ ಸಮುದಾಯದ ಪೇಜಾವರರಂಥ ಇಂದೋನಾಳೆಯೋ ಎಂಬುವವರಿಂದ ಹಿಡಿದು ನೆನ್ನೆಮೊನ್ನೆಯ ಸೂಲಿಬೆಲೆಯಂಥ ಬ್ರಾಹ್ಮಣ ಹುಡುಗರೆಲ್ಲಾ ಹೇಳುತ್ತಿರುವುದು ಒಂದೇ “ಹಿಂದೂಗಳಿಗೆ ಒಂದು ಪ್ರತ್ಯೇಕ ರಾಷ್ಟ್ರ ಬೇಕು” ಈ ಜಾತೀವಾದಿ ಕೋಮುವಾದಿ ಪರಧರ್ಮ ಅಸಹಿಷ್ಣುತಾ ಜಾತೀವಾದಿ ಬ್ರಾಹ್ಮಣರಿಗೆ ಹೇಳಬೇಕಿರುವುದಿಷ್ಟೇ… ‘ಮೊದಲು ನೀವು ನಿಮ್ಮ ಅವಿವೇಕ ಅಹಂಕಾರ ಮತ್ತು ಸ್ವಾರ್ಥದಿಂದ ಸೃಷ್ಟಿಸಿರುವ ಜಾತಿಪದ್ಧತಿಯನ್ನು ನೀವೇ ನಿರ್ಮೂಲನೆ ಮಾಡಿ ನಂತರ ಹಿಂದೂರಾಷ್ಟ್ರದ ಕನಸು ಕಾಣಿ..! ಇಲ್ಲವೇ ನಿಮ್ಮ ಪೂರ್ವಜರು ದನ ಮೇಯಿಸಿಕೊಂಡು ಎಲ್ಲಿಂದ ಬಂದರೋ ಅದೇ ಮಧ್ಯ ಏಷ್ಯಾಕ್ಕೆ ಹೋಗಿಬಿಡಿ..! ಅಲ್ಲಿನ ನಿಮ್ಮ ಪೌರತ್ವವನ್ನು ಪಡಿಸಿ ಅದನ್ನು ಪಡೆಯಲು ಹೋರಾಡಿ..! ಇದಕ್ಕಾಗಿ ಸಮಾನತೆ ಭ್ರಾತೃತ್ವ ಮಾನವೀಯತೆಯನ್ನೇ ಉಸಿರಾಡುವ ಮೂಲನಿವಾಸಿ ಭಾರತೀಯರೆಲ್ಲರ ನೈತಿಕ ಬೆಂಬಲ ನಿಮಗಿದ್ದೇ ಇರುತ್ತದೆ..! ಅದೂ ಆಗಲಿಲ್ಲವೆಂದರೆ ಇಲ್ಲೇ ಒಂದು ಮೂಲೆಯಲ್ಲಿ ಮೂರುವರೆಯಷ್ಟು ಜಾಗದಲ್ಲಿ
“ಪ್ರತ್ಯೇಕ ಬ್ರಾಹ್ಮಣರಾಷ್ಟ್ರ” ಕಟ್ಟಿಕೊಳ್ಳಿ..! ಭಾರತವನ್ನು ಭಾರತೀಯರನ್ನು ನೆಮ್ಮದಿಯಾಗಿರಲು ಬಿಡಿ..!
ಸುದ್ದಿದಿನ.ಕಾಂ|ವಾಟ್ಸಾಪ್|9980346243