ಅಂತರಂಗ
ಒಂದು ಸಮಾಜ ಯಾವ ಸ್ಥಿತಿಯಲ್ಲಿ ಬದುಕುತ್ತಿದೆ ಎಂಬುದು ತುಂಬಾ ಮುಖ್ಯ : ಡಾ. ಬಿ.ಆರ್. ಅಂಬೇಡ್ಕರ್ ರ ಬರಹ ಎಲ್ಲರೂ ಓದಲೇ ಬೇಕು
ಒಂದು ಸಮಾಜ ಬದುಕುವುದೋ ಇಲ್ಲವೋ ಎಂಬುದು ಪ್ರಶ್ನೆಯಲ್ಲ, ಯಾವ ಸ್ಥಿತಿಯಲ್ಲಿ ಅದು ಬದುಕುತ್ತಿದೆಯೆಂಬುದು ಪ್ರಶ್ನೆ, ಸಾಯದೆ ಉಳಿದುಕೊಳ್ಳುವ ರೀತಿಗಳು ಅನೇಕವಾಗಿವೆ. ಆದರೆ ಅದೆಲ್ಲವೂ ಗೌರವಾರ್ಹವಾಗಿಲ್ಲ .
ವ್ಯಕ್ತಿಗೇ ಆಗಲಿ, ಸಮಾಜಕ್ಕೇ ಆಗಲಿ ಬದುಕುವುದು ಮತ್ತು ಗೌರವದಿಂದ ಬದುಕುವುದು ಇವೆರಡರ ಮಧ್ಯೆ ದೊಡ್ಡ ಅಂತರವಿದೆ. ಯುದ್ಧದಲ್ಲಿ ಹೋರಾಡಿ ಗೆದ್ದು ಬದುಕುವುದು ಒಂದು ರೀತಿ. ಹಿಮ್ಮೆಟ್ಟಿ , ಸೋಲೊಪ್ಪಿ ಸೆರೆಯಾಳಾಗಿ ಬದುಕುವುದು ಇನ್ನೊಂದು ರೀತಿ ಎರಡೂ ಬದುಕಿ ಉಳಿಯುವ ರೀತಿಗಳೆ ‘ ನಾನೂ , ನಮ್ಮ ಜನರೂ ಈವರೆಗೆ ಉಳಿದುಕೊಂಡು ಬಂದಿದ್ದೇವೆ ‘ ಎಂದು ಹಿಂದೂವು ಸಮಾಧಾನಪಟ್ಟುಕೊಳ್ಳುವುದರಲ್ಲಿ ಅರ್ಥವಿಲ್ಲ.
ನಾವು ಬದುಕಿ ಉಳಿದಿದ್ದೇವೆ ಎನ್ನುವುದಕ್ಕಿಂತ ಮುಖ್ಯವಾಗಿ ಯಾವ ಸ್ಥಿತಿಯಲ್ಲಿ ಉಳಿದಿದ್ದೇವೆ ಎಂಬುದನ್ನು ಯೋಚಿಸಬೇಕು. ಹಿಂದೂವಿನ ಜೀವನ ಸತತ ಪರಾಜಯದ ಜೀವನವಾಗಿಯೇ ಬಂದಿದೆ. ಅವನು ಶಾಶ್ವತವೆಂದು ಭ್ರಮಿಸಿದ್ದು ಶಾಶ್ವತವಾಗಿ ಕ್ಷಯಿಸುತ್ತ ಬಂದಿದೆ. ಹೀಗೆ ಉಳಿದು ಬಂದಿರುವ ರೀತಿ ವಿವೇಕಶಾಲಿ ಹಿಂದೂವಿಗೆ ನಿಜವಾಗಿ ಲಜ್ಜಾಸದವೆಂದೇ ಅನ್ನಿಸುತ್ತದೆ.
–ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರ ಬರಹಗಳು – ಭಾಷಣಗಳು : ಸಂಪುಟ – 1
ಸುದ್ದಿದಿನ.ಕಾಂ|ವಾಟ್ಸಾಪ್|9986715401