ಬಹಿರಂಗ

ಜಮ್ಮು ಕಾಶ್ಮೀರ ಸಮಸ್ಯೆ ಬಗ್ಗೆ ಅಂಬೇಡ್ಕರರ ಅಭಿಪ್ರಾಯ : ಮಿಸ್ ಮಾಡ್ದೆ ಓದಿ

Published

on

ದರ್ಶದ ಬೆನ್ನೇರಿದ ನಾವು, ಔದ್ಯೋಗೀಕರಣಕ್ಕೆ ಹಣವನ್ನು ವೆಚ್ಚ ಮಾಡದೇ ರಕ್ಷಣಾ ಇಲಾಖೆ ಮತ್ತು ಮಿಲಿಟರಿಗೆ ಖರ್ಚು ಮಾಡುತ್ತಿದ್ದೇವೆ. ಇದು ಸರಿಯೇ?

ನಾವು ಸಂಗ್ರಹಿಸುವ 350 ಕೋಟಿ ರೂಪಾಯಿ ಆದಾಯದಲ್ಲಿ 180 ಕೋಟಿ ಹಣವನ್ನು ಕೇವಲ ಸೈನಿಕ ವೆಚ್ಚಕ್ಕೆ ವ್ಯಯವಾಗುತ್ತಿದೆ. ಇದು ಪ್ರಗತಿಗೆ ಆಡಚಣೆಯಾಗಲಾರದೇ? ಇಷ್ಟು ಹಣ ಮಿಲಿಟರಿಯ ಮೇಲೆ ಖರ್ಚು ಮಾಡಿ ನಾವು ಏನನ್ನು ಸಾಧಿಸಿರುವೆವು? ಹಣ ಹೋಯಿತು. ಹಣದೊಂದಿಗೆ ಮಿತ್ರರನ್ನೂ ಕಳೆದುಕೊಂಡಿದ್ದೇವೆ. ಇದು ಉತ್ತಮ ವಿದೇಶಾಂಗ ನೀತಿಯೇ?

ಪಾಕಿಸ್ತಾನದೊಂದಿಗೆ ನಮ್ಮ ಹೋರಾಟ ನಮ್ಮ ವಿದೇಶಾಂಗದ ಪ್ರಮುಖ ಅಂಶವಾಗಿರುವುದನ್ನು ನಾನು ಸಹಿಸಲಾರೆ. ಎರಡು ಕಾರಣಗಳಿಂದಾಗಿ ನಮ್ಮ ಬಾಂಧವ್ಯ ಪಾಕಿಸ್ತಾನದೊಂದಿಗೆ ವಿರಸವನ್ನುಂಟು ಮಾಡಿದೆ. 1. ಕಾಶ್ಮೀರ ಸಮಸ್ಯೆ 2. ಪೂರ್ವ ಬಂಗಾಳದಲ್ಲಿ ನಮ್ಮ ಜನರ ಪರಿಸ್ಥಿತಿ. ಪತ್ರಿಕಾ ವರದಿಗಳಂತೆ ನಮ್ಮ ಜನರ ಪರಿಸ್ಥಿತಿ ಪೂರ್ವ ಬಂಗಾಳದಲ್ಲಿ ಗಂಭೀರವಾಗಿದೆ. ಪರಿಸ್ಥಿತಿ ಹೀಗಿದ್ದಾಗಲೂ ನಾವು ಕಾಶ್ಮೀರ ಪ್ರಶ್ನೆಯನ್ನೆ ಮುಂದುವರೆಸಿಕೊಂಡು ಬರುತ್ತಿರುವುದು ಸರಿಯೇ? ನಾನು ಹೇಳಬಹುದಾದರೆ ಕಾಶ್ಮೀರದ ವಿಷಯದಲ್ಲಿ ನಿಜವಾಗಿರಬಹುದಾದ ಸಮಸ್ಯೆಗಾಗಿ ಹೋರಾಡದೆ, ಯಾರು ಆಕ್ರಮಣಕಾರರು ಹಾಗೂ ಯಾರು ಸರಿ, ಯಾರು ತಪ್ಪು ಎಂಬ ನಿರರ್ಥಕ ವಾದಕ್ಕಾಗಿಯೇ ಹೋರಾಟವನ್ನು ಮುಂದುವರೆಸಿಕೊಂಡೇ ಬಂದಿದ್ದೇವೆ.

ನನಗೆ ತೋರಿದಂತೆ ಯಾರು ಸರಿ, ಯಾರು ತಪ್ಪು ಎಂಬುದಲ್ಲ. ಅದು ಕಾಶ್ಮೀರದ ವಿಭಜನೆ. ನನಗೆ ತೋಚಿದಂತೆ ಹಿಂದೂ ಮತ್ತು ಬುದ್ಧ ಭಾಗದ ಕಾಶ್ಮೀರವನ್ನು ಭಾರತಕ್ಕೆ ಹಾಗೂ ಮುಸ್ಲೀಂ ಕಾಶ್ಮೀರವನ್ನು ವರ್ಗಾಯಿಸುವುದು ಸೂಕ್ತ. ನಾವು ಭಾರತವನ್ನೇ ಈ ಸೂತ್ರದಂತೆ ವಿಭಜಿಸಿರುವೆವು. ಅದನ್ನೆ ಕಾಶ್ಮೀರಕ್ಕೆ ಏಕೆ ಅನುಸರಿಸಬಾರದು? ಕಾಶ್ಮೀರ ಮುಸ್ಲಿಮರು ಮತ್ತು ಪಾಕಿಸ್ತಾನ ಏನಾದರೂ ನಿರ್ಣಯಿಸಿಕೊಳ್ಳಲಿ, ಅದರ ಬಗೆಗೆ ನಾವು ತಲೆ ಕೆಡಿಸಿಕೊಳ್ಳಬಾರದು ಅಥವಾ ಕಾಶ್ಮೀರವನ್ನು ಮೂರು ಭಾಗವಾಗಿ ವಿಂಗಡಿಸಲೂಬಹುದು. ಯುದ್ಧ ವಿರಾಮದ ಭಾಗ, ಕಾಶ್ಮೀರ ಕಣಿವೆ, ಜಮ್ಮು ಲಡಾಕದ ವಿಭಾಗ ಮಾಡಿ ಕಣಿವೆಯಲ್ಲಿ ಮಾತ್ರ ಜನಮತದ ಅಭಿಪ್ರಾಯವನ್ನು ಸಂಗ್ರಹಿಸುವುದು. ನನಗೆ ಭಯವಾಗುವ ವಿಷಯ ಎಂದರೆ, ಸಮಗ್ರ ಜನಮತ ಸಂಗ್ರಹ ಮಾಡಿದಲ್ಲಿ ಕಾಶ್ಮೀರಿ ಹಿಂದೂ ಮತ್ತು ಬೌದ್ಧರಿಗೆ ಅನ್ಯಾಯವಾಗುತ್ತದೆ. ಆಗ ಬೌದ್ಧರು ಮತ್ತು ಹಿಂದೂಗಳು, ಪಾಕಿಸ್ತಾನದಲ್ಲಿಯೂ ಪೂರ್ವ ಬಂಗಾಳದಲ್ಲಿ ನಮ್ಮ ಜನ ಅನುಭವಿಸುತ್ತಿರುವ ಸಂಕಷ್ಟಗಳನ್ನೆ ಎದುರಿಸಬೇಕಾಗುತ್ತದೆ.

-ಡಾ. ಬಿ.ಆರ್. ಅಂಬೇಡ್ಕರ್

(1951 ರಲ್ಲಿ ಅಂಬೇಡ್ಕರರು ನೀಡಿದ ರಾಜಿನಾಮೆ ಬಗ್ಗೆ ಪತ್ರಿಕೆಗಳಿಗೆ ನೀಡಿದ ಹೇಳಿಕೆ ಪತ್ರದಲ್ಲಿ ಇದ್ದಂತೆ. ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರ ಸಮಗ್ರ ಬರೆಹಗಳು ಮತ್ತು ಭಾಷಣಗಳು. ಸಂಪುಟ-14, ಭಾಗ 3 ಪುಟ ಸಂಖ್ಯೆ 503)

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version