ಬಹಿರಂಗ

‘ಉಪೇಕ್ಷಾ ಮನೋವೃತ್ತಿ’, ಹಿಂದೂಗಳಿಗಿರುವ ಮಹಾರೋಗ : ಡಾ.ಬಿ.ಆರ್. ಅಂಬೇಡ್ಕರ್ ಈ ಲೇಖನ ಓದಿ

Published

on

ಶುದ್ದಿ ಎನ್ನುವುದು ಹಿಂದೂ ಸಮಾಜದ ಸಂಘಟನೆಗೆ ವಿರುದ್ಧವಾಗಿ ಕೆಲಸ ಮಾಡುತ್ತದೆ. ಮಹಮ್ಮದೀಯರಿಂದ ಹಾಗೂ ಸಿಬ್ಬರಿಂದ ಒಂದೂವು ಭಿನ್ನವಾಗಿರುವುದು ತನ್ನ ಅಂಜುಗುಳಿತನ ಅಥವಾ ಹೇಡಿತನದಿಂದ, ಅವನ ಮನಸ್ಸಿನಿಂದ ಈ ಭಾವನೆಯನ್ನು ನಿವಾರಿಸುವುದೇ ಸಂಘಟನೆಯ ಮುಖ್ಯ ತತ್ತವಾಗಿದೆ. ಹಿಂದೂವು ಆತ್ಮರಕ್ಷಣೆಗಾಗಿ ಠಕ್ಕುತನವನ್ನೂ, ದ್ರೋಹವನ್ನೂ ಮಾಡುತ್ತಾನೆ. ಸಿಬ್ಬನಿಗಾಗಲಿ ಮಹಮ್ಮದೀಯನಿಗಾಗಲಿ ನಿರ್ಭಯತೆಯನ್ನು ತಂದುಕೊಟ್ಟ ಬಲ ಯಾವುದು ? ಶಾರೀರಕ ಬಲ, ಆಹಾರ , ವ್ಯಾಯಾಮ ಮುಂತಾದವುಗಳಿಂದ ಅವರಿಗೆ ಆ ಅಧಿಕ ಧೈರ್ಯ ಬಂದಿರಲಾರದೆಂಬುದು ನಿಶ್ಚಿತ .

ಈ ವಿಷಯಗಳಲ್ಲಿ ಹಿಂದೂವಿಗೂ ಅವರಿಗೂ ಭೇದವಿಲ್ಲ. ಈ ಬಲ ಬಂದಿರುವುದು ಅವರ ಸಹಧರ್ಮಿಗಳ ಬೆಂಬಲ ವಿಶ್ವಾಸದಿಂದ, ಒಬ್ಬ ಸಿಬ್ಬನು ಅಪಾಯಕ್ಕೆ ಸಿಲುಕಿದರೆ ಎಲ್ಲ ಸಿಬ್ಬರೂ ತನ್ನ ಬೆಂಬಲಕ್ಕೆ ಬರುವರೆಂಬ ನಂಬಿಕೆ ಅವನಿಗಿದೆ. ಒಬ್ಬ ಮಹಮ್ಮದೀಯನು ದಾಳಿಗೆ ಒಳಗಾದಾಗ ಎಲ್ಲ ಮಹಮ್ಮದೀಯರು, ಪಾರುಮಾಡಲು ಬರುವರೆಂಬ ವಿಶ್ವಾಸ ಅವನಿಗಿದೆ. ಹಿಂದೂವಿಗೆ ಇಂತಹ ಯಾವ ಬಲವೂ. ತನವರು ನೆರವಿಗೆ ಬಂದಾರೆಂಬ ನಂಬಿಕೆ ಹಿಂದೂವಿಗೆ ಎಲ್ಲಿದೆ ? ಹೀಗೆ ಹಿಂದೂವು ಏಕಾಕಿತನದಿಂದ ಅನನಾಗಿ ಅಂಜುಬುರುಕನಾಗುತ್ತಾನೆ. ಹೊಡೆದಾಟವಾದರೆ ಎದುರಾಳಿಗೆ ಶರಣಾಗುತ್ತಾನೆ, ಇಲ್ಲವೆ ಹೋಗುತ್ತಾನೆ.

ಸಿಖ್ಖಯನಾಗಲಿ, ಮಹಮ್ಮದೀಯನಾಗಲಿ ಇಂತಹ ಪ್ರಸಂಗ ಬಂದರೆ ನಿರ್ಭಯನಾಗಿ ಹೋರಾಡುತ್ತಾನೆ. ಯಾಕೆಂದರೆ ತನ್ನ ಹಿಂದೆ ಅನೇಕರ ಬಲವಿದೆಯೆಂದು ಅವನು ಅರಿತಿರುತ್ತಾನೆ. ಹಿಂದೂವಿಗೆ ತನ್ನವರು ಬೆಂಬಲವಾದಾರೆಂಬ ನಂಬಿಕೆಯೇ ಇಲ್ಲ. ಸಿಬ್ಬನಿಗೆ ಹಾಗೂ ಮಹಮ್ಮದೀಯನಿಗೆ ಆ ನಂಬಿಕೆ ಏಕೆ ಉಂಟು ? ಇದಕ್ಕೆ ಕಾರಣ ಅವರು ಇಟ್ಟುಕೊಂಡಿರುವ ಸಾಮಾಜಿಕ ಸಂಬಂಧದ ರೀತಿಗಳು, ಸಿಖ್ಖರಾಗಲಿ , ಮಹಮ್ಮದೀಯರಾಗಲಿ ತಮ್ಮ ತಮ್ಮಲ್ಲಿ ಭ್ರಾತೃತ್ವಭಾವನೆಯಿಂದ ನಡೆದುಕೊಳ್ಳುತ್ತಾರೆ. ಹಿಂದೂಗಳು ಪರಸ್ಪರವಾಗಿ ಆ ಭಾವನೆಯಿಟ್ಟುಕೊಂಡು ಬಾಳುವುದಿಲ್ಲ . ಒಬ್ಬ ಹಿಂದೂ ಇನ್ನೊಬ್ಬ ಹಿಂದೂವನ್ನು ಭಾಯಿ ಎಂದು ಪರಿಗಣಿಸುವುದಿಲ್ಲ. ಸಿಖ್ಖರು ಭಾವಿಸುವುದು ತಮ್ಮಲ್ಲಿರುವ ಸೋದರತೆಯ ವಿಶ್ವಾಸದಿಂದ ಹಿಂದೂಗಳಲ್ಲಿ ಈ ಭಾವನೆ ಬಾರದೆ ಇರುವುದಕ್ಕೆ ಅವರ ಜಾತಿ ಕಾರಣವಾಗಿದೆ . ಜಾತಿ ಇರುವವರೆಗೆ ಸಂಘಟನೆ ಸಾಧ್ಯವಿಲ್ಲ . ಸಂಘಟನೆಯಾಗುವವರೆಗೆ ಹಿಂದೂ ಕೈಸಾಗದವನಾಗಿ ಕುಗ್ಗಿಯೇ ನಡೆಯಬೇಕಾಗುವುದು. ಹಿಂದೂಗಳು ತಾವು ತುಂಬ ತಾಳ್ಮೆಯುಳ್ಳವರೆಂದು ಹೇಳಿಕೊಳ್ಳುತ್ತಾರೆ. ಇದು ನಿಜವಲ್ಲವೆಂದು ನಾನು ತಿಳಿಯುತ್ತೇನೆ. ಅನೇಕ ಪ್ರಸಂಗಗಲ್ಲಿ ಅವರು ತಾಳ್ಮೆಗೆಡಬಲ್ಲರು. ಕೆಲ ಪ್ರಸಂಗಗಳಲ್ಲಿ ಅವರು ತಾಳೆ ತೋರಿದರೆ ಆಗ ವಿರೋಧಿಸುವ ಬಲ ಅವರಲ್ಲಿ ಇರುವುದಿಲ್ಲ. ಅಥವಾ ವಿರೋಧಿಸುವುದಾದರೂ ಏನೆಂದು ಉಪೇಕ್ಷೆಯಿರಬೇಕು.

ಈ ಉಪೇಕ್ಷೆ ಹಿಂದೂಗಳ ಸ್ವಭಾವದಲ್ಲಿ ಒಂದಂಶವಾಗಿಹೋಗಿದೆ. ಎಷ್ಟರ ಮಟ್ಟಿಗೆ ಎಂದರೆ ಅಪಮಾನವಾಗಲಿ, ಅನ್ಯಾಯವೇ ಆಗಲಿ ಅದನ್ನು ಕೂಡ ಅವರು ತೆಪ್ಪಗೆ ನುಂಗಿಕೊಳ್ಳುತ್ತಾರೆ. ಹಿಂದೂಗಳು, ಮಾರಿಸ್ ಕವಿಯ ಕಾವ್ಯದ ಭಾವದಂತೆ, ದೊಡ್ಡವರು ಚಿಕ್ಕವರನ್ನು ಕೆಳಗಟ್ಟುವರು. ಬಲಿಷ್ಟರು ಬಲಹೀನರನ್ನು ಸದೆಬಡಿಯುವರು, ಕ್ರೂರರಿಗೆ ನಿರ್ಭೀತಿ, ದಯಾವಂತರಿಗೆ ಧೈರ್ಯಹೀನತೆ , ಬುದ್ದಿವಂತರಿಗೆ ಇದೆಲ್ಲದರ ಉಪೇಕ್ಷೆ . ಯಾರಿಗೆ ಏನಾದರೇನು, ನಮಗೇಕೆ ಅದರ ಗೋಜು ಎಂಬ ಉಪೇಕ್ಷಾ ಮನೋವೃತ್ತಿ ಒಂದು ಮಹಾರೋಗ, ಹಿಂದೂಗಳಿಗೆ ಈ ರೋಗ ಏಕೆ ಬಡಿದುಕೊಂಡಿತು ? ಸಂಘಟನೆಗೂ ಸಹಕಾರಕ್ಕೂ ಬಾಧಕವಾಗಿ ನಿಂತ ಜಾತೀಯತೆಯೇ ಈ ರೋಗದ ಮೂಲ.

-ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರ ಬರಹಗಳು – ಭಾಷಣಗಳು : ಸಂಪುಟ – 1

ಸುದ್ದಿದಿನ.ಕಾಂ|ವಾಟ್ಸಾಪ್|9986715401

Trending

Exit mobile version