ದಿನದ ಸುದ್ದಿ
ಡಾ. ಎಚ್ ಕೆ ನಾಗರಾಜ ಅವರಿಗೆ ‘ರಾಷ್ಟ್ರೀಯ ವೈದ್ಯ ರತ್ನ’ ಪ್ರಶಸ್ತಿ ಪ್ರದಾನ
ಸುದ್ದಿದಿನ, ಬೆಂಗಳೂರು : ಎಂ ಎಸ್ ರಾಮಯ್ಯ ಹಾಸ್ಟೆಲ್ ಯೂರೋ ಡಿಪಾರ್ಟಮೆಂಟ ಎಚ್ ಓ ಡಿ ಪ್ರೋಫೇಸರ್ ಡಾ. ಎಚ್ ಕೆ ನಾಗರಾಜ ಅವರನ್ನು ರಾಷ್ಟ್ರೀಯ ವೈದ್ಯ ರತ್ನ ಪ್ರಶಸ್ತಿಯನ್ನು ಸರ್ ಎಂ ವಿಶ್ವೇಶ್ವರಯ್ಯ ಪ್ರತಿಷ್ಠಿತ ಸಂಸ್ಥೆಯು ನೀಡಿ ಗೌರವಿಸಿತು.
ಬೆಂಗಳೂರಿನ ಸಾಂಸ್ಕೃತಿಕ ಸಾಹಿತ್ಯಕ್ಕೆ ಹೆಸರಾದ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆದ ಸರ್ ಎಂ ವಿಶ್ವೇಶ್ವರಯ್ಯ ಪ್ರತಿಷ್ಠಿತ ಸಂಸ್ಥೆ ಬೆಳ್ಳಿಮಹೋತ್ಸವದಲ್ಲಿ ಹಲವಾರು ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರಿಗೆ ಸನ್ಮಾನ ಮಾಡಲಾಯಿತು.
ಹಾಗೂ ಪ್ರೋಫೇಸರೆ ದೊಡ್ಡರಂಗೇಗೌಡರು ಹಾಗು ಐ ಎ ಎಸ್ ಅಧಿಕಾರಿ ತಿಮ್ಮೇಗೌಡರು ಉಪಸ್ಥಿತರಿದ್ದು,
ಸರ್ಕಾರ ಮಾಡುವಂತಹ ಕೆಲಸವನ್ನು ಸರ್ ಎಂ ವಿಶ್ವೇಶ್ವರಯ್ಯ ರಮೇಶ್ ಸರ್ವೇ ಅವರು ನಿರಂತರ ಇಪ್ಪತ್ತೈದು ವರ್ಷಗಳ ಲ್ಲಿ ಸಾರ್ಥಕ ಸೇವೆ ಸಲ್ಲುತ್ತಿದೆ ಎಂದು ಅಭಪ್ರಾಯಪಟ್ಟರು.
ಹಾಗೆ ಈ ಕಾರ್ಯಕ್ರಮದಲ್ಲಿ ಗಣ್ಯರು, ಸ್ವಾಮೀಜಿಗಳು ಕಾರ್ಯಕ್ರಮ ದಲ್ಲಿ ಭಾಗಿಯಾಗಿದ್ದಾರು ಎಂದು ಶ್ರೀಮತಿ ವೀಣಾ ಮಹಾಂತೇಶ ಸಂತಸವನ್ನು ಹಂಚಿಕೊಂಡಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243