ದಿನದ ಸುದ್ದಿ
ಉಕ್ರೇನ್‌ನಲ್ಲಿ ಸಂಘರ್ಷ ಅಂತ್ಯಕ್ಕೆ ರಾಜತಾಂತ್ರಿಕ ಮಾತುಕತೆಗೆ ಭಾರತ ಬೆಂಬಲ : ಕೇಂದ್ರ ಸಚಿವ ಡಾ.ಎಸ್. ಜೈಶಂಕರ್
ಸುದ್ದಿದಿನ,ದೆಹಲಿ : ಉಕ್ರೇನ್‌ನಲ್ಲಿನ ಸಂಘರ್ಷದ ಬಗ್ಗೆ ಭಾರತ ಅತ್ಯಂತ ಸ್ಪಷ್ಟವಾದ ನಿಲುವನ್ನು ಹೊಂದಿದೆ, ಇದು ಯುದ್ಧವನ್ನು ಅಂತ್ಯಗೊಳಿಸುವ, ತುರ್ತು ಕದನ ವಿರಾಮ ಘೋಷಣೆ ಮತ್ತು ರಾಜತಾಂತ್ರಿಕ ಮಾತುಕತೆಗೆ ಮುಂದಾಗುವಂತೆ ಪ್ರತಿಪಾದಿಸುತ್ತದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಡಾ. ಎಸ್. ಜೈಶಂಕರ್ ಹೇಳಿದ್ದಾರೆ.
ದೆಹಲಿಯಲ್ಲಿ ಟೌನ್‌ಹಾಲ್ ರೈಸಿನಾ ಮಾತುಕತೆಯಲ್ಲಿ ಪಾಲ್ಗೊಂಡಿದ್ದ ಅವರು, ಉಕ್ರೇನ್ ಸಂಘರ್ಷ ಪ್ರತಿಯೊಬ್ಬರಿಗೂ ಕಳವಳಕಾರಿಯಾಗಿದೆ. ಏಷ್ಯಾ ತನ್ನದೇ ಆದ ಸವಾಲುಗಳನ್ನು ಎದುರಿಸುತ್ತಿದೆ, ಇದು ನಿಯಮಾಧಾರಿತ ಆದೇಶದ ಮೇಲೆ ಪರಿಣಾಮ ಬೀರುತ್ತದೆ ಎಂದರು.
ಅಫ್ಘಾನಿಸ್ತಾನದ ಇಡೀ ನಾಗರಿಕ ಸಮಾಜವನ್ನು, ಒಂದು ವರ್ಷದ ಹಿಂದೆ ಜಗತ್ತು ನಿರ್ಲಕ್ಷಿಸಿದೆ ಎಂದು ಗಮನಸೆಳೆದ ಅವರು, ಇದು ನಂಬಿಕೆಗಳು ಮತ್ತು ಆಸಕ್ತಿಗಳ ಸಮತೋಲನದ ಪರಿಣಾಮ ಎಂದು ಒತ್ತಿ ಹೇಳಿದ ಅವರು, ಅಫ್ಘಾನಿಸ್ತಾನ, ಉಕ್ರೇನ್ ಸವಾಲುಗಳು ಮತ್ತು ಕೋವಿಡ್‌ನಿಂದಾಗಿ ಉಂಟಾಗುತ್ತಿರುವ ಜಾಗತಿಕ ಪರಿಣಾಮಗಳು, ಜನಸಾಮಾನ್ಯರ ಮೇಲೆ ಪರಿಣಾಮ ಬೀರುತ್ತಿವೆ ಎಂದು ಅವರು ಹೇಳಿದರು.
Verheugd Minister van Buitenlandse Zaken van Nederland @WBHoekstra te ontmoeten.
Een goede discussie over wederzijdse samenwerking, onder meer over water en landbouw.
We spraken ook over de uitdagingen in de Indo-Pacific en het Oekraine conflict. https://t.co/zpvlvVBdQg
— Dr. S. Jaishankar (@DrSJaishankar) April 26, 2022
ಸುದ್ದಿದಿನ.ಕಾಂ|ವಾಟ್ಸಾಪ್|9980346243