ದಿನದ ಸುದ್ದಿ
ಡ್ರಗ್ಸ್ ಪೆಡ್ಲರ್ ರಾಹುಲ್ ಜತೆ ಕಂದಾಯ ಸಚಿವ ಆರ್.ಅಶೋಕ್ : ಫೋಟೋ ವಿವಾದ ಬಗ್ಗೆ ಸಚಿವರು ಹೇಳಿದ್ದೇನು ಗೊತ್ತಾ..!?
ಸುದ್ದಿದಿನ,ಬೆಂಗಳೂರು: ಸ್ಯಾಂಡಲ್ ವುಡ್ ನಿಂದ ಶುರುವಾದ ಡ್ರಗ್ಸ್ ವಿವಾದ ಈಗ ರಾಜಕಾರಣಿಗಳ ಸುತ್ತ ಸುತ್ತುತ್ತಿದೆ. ಡ್ರಗ್ ಪೆಡ್ಲರ್ ರಾಹುಲ್ ಹಲವು ಸಿನೆಮಾ ನಟರ ಹಾಗೂ ರಾಜಕಾರಣಿಗಳ, ಉದ್ಯಮಿಗಳ ಜತೆಗಿರುವ ಫೋಟೋ ಗಳು ಈಗ ಭಾರೀ ಸದ್ದು ಮಾಡುತ್ತಿವೆ.
ಅದರಂತೆಯೇ ಆರ್.ಅಶೋಕ್ ಜೊತೆಗೆ ಡ್ರಗ್ ಪೆಡ್ಲರ್ ರಾಹುಲ್ ಇರುವ ಫೋಟೋ ಈಗ ವಿವಾದಕ್ಕೆ ಎಡೆಮಾಡಿಕೊಟ್ಟಿದೆ. ಸಚಿವ ಆರ್. ಆಶೋಕ್ ಕೂಡಾ ಡ್ರಗ್ಸ್ ದಂಧೆಯಲ್ಲಿ ಪಾಲುದಾರರಾ ಎಂಬ ಅನುಮಾನವನ್ನು ಸೋಶಿಯಲ್ ಮೀಡಿಯಾದಲ್ಲಿ ನೆಟ್ಟಿಗರು ವ್ಯಕ್ತಪಡಿಸುತ್ತಿದ್ದಾರೆ.
ಆದರೆ ಈ ವಿಷಯಕ್ಕೆ ಸಂಬಂಧಿಸಿದಂತೆ ಕಂದಾಯ ಸಚಿವರಾದ ಆರ್.ಅಶೋಕ್ ಸ್ಪಷ್ಟನೆ ನೀಡಿದ್ದು, ಇದು ಸುಮಾರು 4-5ವರ್ಷದ ಹಿಂದಿನ ಫೋಟೋ, ನಾಮಕರಣ ಕಾರ್ಯಕ್ರಮವೊಂದರಲ್ಲಿ ತೆಗೆಸಿಕೊಂಡದ್ದು, ಎಲ್ಲರ ಫೋಟೋದಂತೆಯೆ ಇದೂ ಕೂಡ ಒಂದು, ಇದರಲ್ಲಿ ವಿವಾದವೇನಿಲ್ಲ ಎಂದಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243