ದಿನದ ಸುದ್ದಿ
ಡ್ರಗ್ಸ್ ಪ್ರಕರಣ | ಅರೆಸ್ಟ್ ಆಗ್ತಾರಾ ನಟ ದಿಗಂತ್..?
ಸುದ್ದಿದಿನ, ಬೆಂಗಳೂರು : ಸ್ಯಾಂಡಲ್ ವುಡ್ ಡ್ರಗ್ಸ್ ಮಾಫಿಯಾ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದಿಗಂತ್ ಗೆ ಮತ್ತೆ ಸಿಸಿಬಿಯಿಂದ ನೋಟಿದ್ ಜಾರಿಯಾಗಿದೆ.
ವಾಟ್ಸಾಪ್ ಮೂಲಕ ನಟ ದಿಗಂತ್ ಗೆ ಪೊಲೀಸ್ ನೋಟಿಸ್ ಜಾರಿಯಾಗಿದ್ದು ಬುಧವಾದ 11 ಗಂಟೆಗೆ ಕಚೇರಿಗೆ ಬಂದು ಸಿಸಿಬಿ ಪೊಲೀಸರ ಪರೀಕ್ಷೆಗೆ ಉತ್ತರಿಸಬೇಕಾಗಿದೆ ಎಂಬ ಮಾಹಿತಿ ತಿಳಿದು ಬಂದಿದೆ. ಕೇವಲ ಆರು ದಿನಗಳ ಹಿಂದೆ ನಟ ದಿಗಂತ್ ಹಾಗೂ ಅವರ ಪತ್ನಿ ನಟಿ ಐಂದ್ರಿತಾ ಅವರಿಗೆ ಸಿಸಿಬಿ ನೋಟಿಸ್ ನೀಡಿತ್ತು.
ಸಿಸಿಬಿ ಅವರ ಪ್ರಶ್ನೆಗೆ ಉತ್ತರವನ್ನು ಕೊಟ್ಟು ಬಂದಿದ್ದರು. ಮತ್ತೆ ಸಿಸಿಬಿ ಪೊಲೀಸರು ಕರೆದರೆ ಬಂದು ಉತ್ತರಿಸುವೆ ಎಂದು ಹೇಳಿದ್ದರು. ಆ ಸಮಯ ಈಗ ಮತ್ತೆ ನಟ ದಿಗಂತ್ ಗೆ ಬಂದಿದೆ. ಇಂದು ನಟ ದಿಗಂತ್ ಸಿಸಿಬಿ ಇನ್ಸ್ ಪೆಕ್ಟರ್ ಪುನೀತ್ ಅವರ ಎದುರು ದಿಗಂತ್ ವಿಚಾರಣೆಗೆ ಹಾಜರಾಗಿ ಅವರ ಪ್ರಶ್ನೆಗಳಿಗೆ ಉತ್ತರವೇನಿರುತ್ತದೆ ಎಂಬುದು ಕುತೂಹಲ ಮೂಡಿಸಿದೆ. ಈ ಹಿನ್ನೆಲೆಯಲ್ಲಿ ದಿಗಂತ್ ಅರೆಸ್ಟ್ ಆಗ್ತಾರಾ? ಎಂಬ ಪ್ರಶ್ನೆಯೂ ಮೂಡಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243