ದಿನದ ಸುದ್ದಿ

ಆನೆ ಗಣತಿ ಆರಂಭ

Published

on

ಸುದ್ದಿದಿನ ಡೆಸ್ಕ್ : ರಾಜ್ಯದ ಜೊತೆ ಗಡಿ ಹಂಚಿಕೊಂಡಿರುವ, 5 ರಾಜ್ಯಗಳಲ್ಲಿ ಆನೆಗಳ ವಿಶೇಷ ಗಣತಿ ಕಾರ್ಯ ಅರಣ್ಯ ಇಲಾಖೆ ಆರಂಭಿಸಿದೆ.

ಪ್ರತಿ ಐದು ವರ್ಷಗಳಿಗೊಮ್ಮೆ ಆನೆಗಳ ಗಣತಿ ನಡೆಯುತ್ತದೆ. ಆದರೆ ಇದೇ ಮೊದಲ ಬಾರಿಗೆ, ಕರ್ನಾಟಕ, ತಮಿಳುನಾಡು, ಕೇರಳ, ತೆಲಂಗಾಣ ಮತ್ತು ಆಂಧ್ರಪ್ರದೇಶ ರಾಜ್ಯಗಳ ಗಡಿಗಳಲ್ಲಿ, ಮೂರು ದಿನ ಆನೆಗಳ ಗಣತಿ ನಡೆಯುತ್ತಿದೆ.

ಎರಡನೇ ದಿನವಾದ ಇಂದು, ಟ್ರಾನ್ಸಿಟ್ ಮಾದರಿಯಲ್ಲಿ ಆನೆ ಗಣತಿ ಮುಂದುವರೆಯಲಿದೆ. ಮೂರನೇ ದಿನವಾದ ನಾಳೆ, 25ರಂದು, ನೀರ್ಗುಂಡಿಗಳ ಬಳಿ, ವಾಟರ್ ಹೋಲ್ ಕೌಂಟ್ ಮೂಲಕ ಗಣತಿ ನಡೆಯಲಿದೆ. ಕಾಡಾನೆಗಳನ್ನು ಮಾತ್ರ ಸಮೀಕ್ಷಿಸಲಾಗುತ್ತಿದೆ ಎಂದು, ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version