ದಿನದ ಸುದ್ದಿ

ಪಾಕ್ ಪ್ರಧಾನಿ ಜೊತೆ ಮೋದಿಯ ‘ಕುಚಿಕು ಕುಚಿಕು’ ಪ್ರೀತಿಯ ಗುಟ್ಟೇನು..? : ಸಿದ್ದರಾಮಯ್ಯ

Published

on

ಸುದ್ದಿದಿನ, ಹಾಸನ : ಬಹಿರಂಗವಾಗಿ ಪಾಕಿಸ್ತಾನದ ಹೆಸರೆತ್ತಿದರೆ ನಖಶಿಖಾಂತ ಉರಿಯುವ ಬಿಜೆಪಿ ನಾಯಕ ಪ್ರಧಾನಿ ನರೇಂದ್ರಮೋದಿಯವರಿಗೆ ಪಾಕ್ ಪ್ರಧಾನಿ ಜತೆ ಅಂತರಂಗದ ‘ಕುಚುಕು ಕುಚುಕು’ ಪ್ರೀತಿಯ ಗುಟ್ಟೇನು? ನಮ್ಮ ಹಳ್ಳಿ ಕಡೆ ಕಳ್ಳರಿಗೆ ಕಳ್ಳರೇ ದೋಸ್ತಿ ಅನ್ತಾರೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವ್ಯಂಗವಾಡಿದರು.

ಗುರುವಾರ ಹಾಸನ ಲೋಕಸಭೆ ಕ್ಷೇತ್ರದ ಕಡೂರಿನಲ್ಲಿ ಆಯೋಜಿಸಿದ್ದ ಚುನಾವಣಾ ಪ್ರಚಾರ ಸಭೆಯಲ್ಲಿ ಭಾಗವಹಿಸಿದ ಅವರು, ಜೆಡಿಎಸ್ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಜನಪರ ಕಾಳಜಿಯ ನಾಯಕ. ಯುವಕರ ಕೈಗೆ ಅಧಿಕಾರ ಸಿಗಬೇಕು ಆಗ ದೇಶದ ಭವಿಷ್ಯ ಉಜ್ವಲಗೊಳ್ಳುತ್ತದೆ. ಈ ಕಾರಣಕ್ಕಾಗಿ ಕ್ಷೇತ್ರದ ಜನ ಇವರಿಗೆ ಮತ ನೀಡಿ ಗೆಲ್ಲಿಸಿಕೊಡಬೇಕು ಎಂದು ಮನವಿ ಮಾಡುತ್ತೇನೆ‌ ಎಂದರು.

Trending

Exit mobile version