ದಿನದ ಸುದ್ದಿ

‘ಅಪರೇಷನ್ ಕಮಲ’ದ ಕೆಸರಲ್ಲಿ ಬಿಜೆಪಿ ಈಗಲೂ ಉರುಳಾಡುತ್ತಿದೆ : ಸಿದ್ದರಾಮಯ್ಯ ಕಿಡಿ

Published

on

ಸುದ್ದಿದಿನ ಡೆಸ್ಕ್ : ಭಾರತದ ಸಂವಿಧಾನವನ್ನು ಎಂದೂ ಒಪ್ಪದ ಆರ್ ಎಸ್ಎಸ್ ನ ಕೈಗೂಸಾಗಿರುವ ಬಿಜೆಪಿಗೆ ಕೂಡಾ ಸಂವಿಧಾನ ಮತ್ತು ಸಂಸದೀಯ ಪ್ರಜಾಪ್ರಭುತ್ವದ ಮೇಲೆ ನಂಬಿಕೆ ಇಲ್ಲ. ಈ ದುಷ್ಟ ಚಿಂತನೆಯ ಫಲವೇ ‘ಅಪರೇಷನ್ ಕಮಲ’ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಟ್ವೀಟ್ ನಲ್ಲಿ ಕಿಡಿಕಾರಿದ್ದಾರೆ.

2008ರಲ್ಲಿ ಬಳ್ಳಾರಿಯ ಗಣಿಲೂಟಿಕೋರರಾದ ರೆಡ್ಡಿಗಳ ಅಕ್ರಮ ಹಣದ ಕೆಸರಲ್ಲಿ ಹುಟ್ಟಿಕೊಂಡದ್ದೇ ‘ಅಪರೇಷನ್ ಕಮಲ’. ಬಿಜೆಪಿ ಈಗಲೂ ಅದೇ ಕೆಸರಲ್ಲಿ ಉರುಳಾಡುತ್ತಿದೆ. ಇದು ‘ಸ್ಚಚ್ಛ ಭಾರತ’ದ ಮಾದರಿ‌ ಎಂದಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9986715401

Trending

Exit mobile version