ದಿನದ ಸುದ್ದಿ
‘ಅಪರೇಷನ್ ಕಮಲ’ದ ಕೆಸರಲ್ಲಿ ಬಿಜೆಪಿ ಈಗಲೂ ಉರುಳಾಡುತ್ತಿದೆ : ಸಿದ್ದರಾಮಯ್ಯ ಕಿಡಿ
ಸುದ್ದಿದಿನ ಡೆಸ್ಕ್ : ಭಾರತದ ಸಂವಿಧಾನವನ್ನು ಎಂದೂ ಒಪ್ಪದ ಆರ್ ಎಸ್ಎಸ್ ನ ಕೈಗೂಸಾಗಿರುವ ಬಿಜೆಪಿಗೆ ಕೂಡಾ ಸಂವಿಧಾನ ಮತ್ತು ಸಂಸದೀಯ ಪ್ರಜಾಪ್ರಭುತ್ವದ ಮೇಲೆ ನಂಬಿಕೆ ಇಲ್ಲ. ಈ ದುಷ್ಟ ಚಿಂತನೆಯ ಫಲವೇ ‘ಅಪರೇಷನ್ ಕಮಲ’ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಟ್ವೀಟ್ ನಲ್ಲಿ ಕಿಡಿಕಾರಿದ್ದಾರೆ.
2008ರಲ್ಲಿ ಬಳ್ಳಾರಿಯ ಗಣಿಲೂಟಿಕೋರರಾದ ರೆಡ್ಡಿಗಳ ಅಕ್ರಮ ಹಣದ ಕೆಸರಲ್ಲಿ ಹುಟ್ಟಿಕೊಂಡದ್ದೇ ‘ಅಪರೇಷನ್ ಕಮಲ’. ಬಿಜೆಪಿ ಈಗಲೂ ಅದೇ ಕೆಸರಲ್ಲಿ ಉರುಳಾಡುತ್ತಿದೆ. ಇದು ‘ಸ್ಚಚ್ಛ ಭಾರತ’ದ ಮಾದರಿ ಎಂದಿದ್ದಾರೆ.
2008ರಲ್ಲಿ ಬಳ್ಳಾರಿಯ ಗಣಿಲೂಟಿಕೋರರಾದ ರೆಡ್ಡಿಗಳ ಅಕ್ರಮ ಹಣದ ಕೆಸರಲ್ಲಿ ಹುಟ್ಟಿಕೊಂಡದ್ದೇ 'ಅಪರೇಷನ್ ಕಮಲ'. ಬಿಜೆಪಿ ಈಗಲೂ ಅದೇ ಕೆಸರಲ್ಲಿ ಉರುಳಾಡುತ್ತಿದೆ. ಇದು 'ಸ್ಚಚ್ಛ ಭಾರತ'ದ @BJP4India ಮಾದರಿ.#OperationKamala @INCKarnataka
— Siddaramaiah (@siddaramaiah) February 7, 2019
ನಾಳೆ ಶಾಸಕಾಂಗ ಪಕ್ಷದ ಸಭೆ ಕರೆದಿದ್ದೇನೆ. ಪಕ್ಷದ ಎಲ್ಲ ಶಾಸಕರು ಹಾಜರಾಗುತ್ತಾರೆ ಎಂಬ ಆತ್ಮ ವಿಶ್ವಾಸ ನನಗಿದೆ. ಸಭೆಗೆ ಹಾಜರಾಗದವರ ವಿರುದ್ಧ ಕ್ರಮಕೈಗೊಳ್ತೇವೆ.@INCKarnataka
— Siddaramaiah (@siddaramaiah) February 7, 2019
ಸುದ್ದಿದಿನ.ಕಾಂ|ವಾಟ್ಸಾಪ್|9986715401

ದಿನದ ಸುದ್ದಿ
ಹೆಬ್ಬಾಳ–ಮೇಖ್ರಿ ಸುರಂಗ ಮಾರ್ಗ: ಸಂಚಾರ ಪರಿಹಾರವೇ, ಹೊಸ ಸಮಸ್ಯೆಯೇ?
ಸುದ್ದಿದಿನ,ಬೆಂಗಳೂರು: ಬೆಂಗಳೂರು ನಗರದ ಪ್ರಮುಖ ಸಂಚಾರ ಕಿರಿಕಿರಿ ಕೇಂದ್ರವಾಗಿರುವ ಹೆಬ್ಬಾಳ ಜಂಕ್ಷನ್‌ನಿಂದ ಮೇಖ್ರಿ ವೃತ್ತದವರೆಗೆ ಉದ್ದೇಶಿಸಿರುವ ಸುರಂಗ ಮಾರ್ಗ ಯೋಜನೆ ಇದೀಗ ತಜ್ಞರ ವರದಿಯಿಂದ ಚರ್ಚೆಗೆ ಬಂದಿದೆ. ಸಂಚಾರ ದಟ್ಟಣೆ ಕಡಿಮೆ ಮಾಡುವ ಉದ್ದೇಶದ ಈ ಯೋಜನೆಯೇ ಹೊಸ ಟ್ರಾಫಿಕ್ ಸಮಸ್ಯೆಗೆ ಕಾರಣವಾಗಬಹುದು ಎಂದು IISc ಅಧ್ಯಯನ ಎಚ್ಚರಿಸಿದೆ.
ಹೆಬ್ಬಾಳ ಸುರಂಗ ಯೋಜನೆಗೆ IISc ಆಕ್ಷೇಪ
ಕರ್ನಾಟಕ ಸರ್ಕಾರ ಮತ್ತು ಗ್ರೇಟರ್ ಬೆಂಗಳೂರು ಅಥಾರಿಟಿ (GBA) ಮಹತ್ವಾಕಾಂಕ್ಷೆಯ ಯೋಜನೆಯಾಗಿ ಪರಿಗಣಿಸಿರುವ ಹೆಬ್ಬಾಳ ಸುರಂಗ ಮಾರ್ಗಕ್ಕೆ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ (IISc) ಅಧ್ಯಯನ ವರದಿ ಹಲವು ಪ್ರಶ್ನೆಗಳನ್ನು ಎತ್ತಿದೆ. IIScಯ Sustainable Transportation (IST) Lab ನಡೆಸಿರುವ ಅಧ್ಯಯನದ ಪ್ರಕಾರ, ಕಿರು ಸುರಂಗ ಮಾರ್ಗ ನಿರ್ಮಾಣದಿಂದ ಹೆಬ್ಬಾಳದ ಒಟ್ಟಾರೆ ಸಂಚಾರ ಸಮಸ್ಯೆ ಪರಿಹಾರವಾಗುವ ಸಾಧ್ಯತೆ ಕಡಿಮೆ.
ಸುರಂಗದಿಂದ ಹೊರಬರುವ ವಾಹನಗಳ ದಟ್ಟಣೆ ಪಶುವೈದ್ಯಕೀಯ ಆಸ್ಪತ್ರೆ ಮತ್ತು ಎಸ್ಟೀಮ್ ಮಾಲ್ ಭಾಗದ ರಸ್ತೆಗಳತ್ತ ವರ್ಗಾವಣೆಯಾಗುವ ಸಾಧ್ಯತೆ ಇದೆ. ಇದರಿಂದ ಮೇಖ್ರಿ ವೃತ್ತದವರೆಗೆ ವಾಹನಗಳ ಸಾಲು ಹೆಚ್ಚಾಗಿ, ಒಂದು ಪ್ರದೇಶದ ಟ್ರಾಫಿಕ್ ಸಮಸ್ಯೆಯನ್ನು ಮತ್ತೊಂದು ಪ್ರದೇಶಕ್ಕೆ ಸ್ಥಳಾಂತರಿಸಿದಂತಾಗಬಹುದು ಎಂದು ವರದಿ ಎಚ್ಚರಿಸಿದೆ.
http://Visit : www.suddidina.com
ಸುರಂಗಕ್ಕಿಂತ ಮೆಟ್ರೋವೇ ಆರ್ಥಿಕ?
IISc ಸಿವಿಲ್ ಎಂಜಿನಿಯರಿಂಗ್ ವಿಭಾಗದ ಪ್ರೊಫೆಸರ್ ಆಶಿಶ್ ವರ್ಮಾ ಸಿದ್ಧಪಡಿಸಿರುವ ಅಧ್ಯಯನದಲ್ಲಿ ಸುರಂಗ ಯೋಜನೆಯ ವೆಚ್ಚ ಮತ್ತು ಅದರ ಪ್ರಯೋಜನವನ್ನು ಹೋಲಿಸಲಾಗಿದೆ. ವರದಿ ಪ್ರಕಾರ, ಸುರಂಗ ಮಾರ್ಗದಲ್ಲಿ ಪ್ರತಿ ಪ್ರಯಾಣಿಕನಿಗೆ ಅಂದಾಜು ₹5.23 ವೆಚ್ಚವಾಗಲಿದ್ದು, ಮೆಟ್ರೋದಲ್ಲಿ ಇದೇ ಪ್ರಮಾಣದ ಪ್ರಯಾಣಿಕರಿಗೆ ಸುಮಾರು ₹0.86 ವೆಚ್ಚವಾಗಲಿದೆ.
ಪ್ರತಿ ಗಂಟೆಗೆ ಪ್ರತಿ ದಿಕ್ಕಿನ ಪ್ರಯಾಣಿಕರ ಸಾಮರ್ಥ್ಯದ ಆಧಾರದಲ್ಲಿಯೂ ವ್ಯತ್ಯಾಸ ದೊಡ್ಡದಾಗಿದೆ. ಸುರಂಗದ ಪ್ರತಿ ಯೂನಿಟ್ ಸಾಮರ್ಥ್ಯಕ್ಕೆ ಸುಮಾರು ₹13.74 ಲಕ್ಷ ವೆಚ್ಚವಾಗಬಹುದಾದರೆ, ಮೆಟ್ರೋಗೆ ₹2.26 ಲಕ್ಷ ಮಾತ್ರ ಬೇಕಾಗಬಹುದು. ಅಂದರೆ, ಸಾಮರ್ಥ್ಯದ ದೃಷ್ಟಿಯಿಂದ ಸುರಂಗ ಮಾರ್ಗವು ಮೆಟ್ರೋಗಿಂತ ಹಲವು ಪಟ್ಟು ದುಬಾರಿಯಾಗಲಿದೆ ಎಂಬುದು ಅಧ್ಯಯನದ ಪ್ರಮುಖ ಅಂಶ.
DPRನಲ್ಲೂ ಹಲವು ಲೋಪಗಳ ಆರೋಪ
ಯೋಜನೆಯ ವಿಸ್ತೃತ ಯೋಜನಾ ವರದಿ (DPR)ಯಲ್ಲೂ ಗಂಭೀರ ಲೋಪಗಳಿವೆ ಎಂದು IST Lab ಉಲ್ಲೇಖಿಸಿದೆ. ಹೆಬ್ಬಾಳ ಮೇಲ್ಸೇತುವೆಯ ಪಥಗಳ ಸಾಮರ್ಥ್ಯ ಅಂದಾಜಿನಲ್ಲಿ ಶಿಫಾರಸು ಮಾಡಬಹುದಾದ ಸಾಮರ್ಥ್ಯಕ್ಕಿಂತ ಕಡಿಮೆ ಅಂಕಿಅಂಶಗಳನ್ನು ಬಳಸಲಾಗಿದೆ ಎಂಬ ಆಕ್ಷೇಪವಿದೆ.
ಇದಲ್ಲದೆ, ಸುರಂಗದ ಅಗತ್ಯತೆಯನ್ನು ಸಮರ್ಥಿಸಲು ಮೂಲ ಸಂಚಾರ ದಟ್ಟಣಿಯ ಅಂಕಿಅಂಶಗಳಲ್ಲಿ ಬದಲಾವಣೆ ಮಾಡಲಾಗಿದೆ ಎಂಬ ಆರೋಪವೂ ವರದಿಯಲ್ಲಿದೆ.
ತಿರುವು, ಪ್ರವಾಹದ ಅಪಾಯವೂ ಪ್ರಶ್ನೆ
ಎಸ್ಟೀಮ್ ಮಾಲ್ ನಿರ್ಗಮನದ ಬಳಿ ಸುಮಾರು 60 ಮೀಟರ್ ತಿರುವು ಇರಲಿದ್ದು, ವಾಹನಗಳ ವೇಗವನ್ನು 60 ಕಿ.ಮೀ.ನಿಂದ 40 ಕಿ.ಮೀ.ಗೆ ಇಳಿಸುವ ಸಾಧ್ಯತೆಯಿದೆ. ಇದರಿಂದ ವಾಹನಗಳ ಸಾಲು ಹೆಚ್ಚಾಗುವ ಅಪಾಯವಿದ್ದರೂ DPRನಲ್ಲಿ ಈ ಅಂಶವನ್ನು ಸಮರ್ಪಕವಾಗಿ ಪರಿಗಣಿಸಿಲ್ಲ ಎಂದು ವರದಿ ಹೇಳಿದೆ.
ಹೆಬ್ಬಾಳ ಕೆರೆಯ ಸಮೀಪ ಸುರಂಗದ ಪ್ರವೇಶ ದ್ವಾರ ತಗ್ಗು ಪ್ರದೇಶದಲ್ಲಿರುವುದರಿಂದ ಮಳೆಗಾಲದಲ್ಲಿ ಪ್ರವಾಹದ ಅಪಾಯವೂ ಎದುರಾಗಬಹುದು ಎಂಬ ಆತಂಕ ವ್ಯಕ್ತವಾಗಿದೆ.
ಮೆಟ್ರೋ ಸಂಪರ್ಕಕ್ಕೆ ಒತ್ತು
ಒಟ್ಟಾರೆ, ಹೆಬ್ಬಾಳ ಸುರಂಗ ಯೋಜನೆಯ ಬದಲಿಗೆ ಸಮರ್ಥ ಸಾರ್ವಜನಿಕ ಸಾರಿಗೆ ವ್ಯವಸ್ಥೆ, ವಿಶೇಷವಾಗಿ ಮೆಟ್ರೋ ಸಂಪರ್ಕವನ್ನು ಬಲಪಡಿಸುವುದು ದೀರ್ಘಕಾಲೀನ ಪರಿಹಾರವಾಗಬಹುದು ಎಂಬ ಅಭಿಪ್ರಾಯವನ್ನು IISc ಅಧ್ಯಯನ ಮುಂದಿಟ್ಟಿದೆ. ಹೀಗಾಗಿ, ಯೋಜನೆಗೆ ಮುಂದುವರಿಯುವ ಮುನ್ನ ಅದರ ವೆಚ್ಚ, ಸಂಚಾರ ಪರಿಣಾಮ, ಸುರಕ್ಷತೆ ಮತ್ತು DPR ಅಂಕಿಅಂಶಗಳನ್ನು ಮರುಪರಿಶೀಲಿಸುವ ಅಗತ್ಯ ಎದುರಾಗಿದೆ.

ದಿನದ ಸುದ್ದಿ
ಶಿವರಾಮ ಕಾರಂತ ಬಡಾವಣೆಗೆ ಮುಹೂರ್ತ: ಆ.31ಕ್ಕೆ 18 ಸಾವಿರ ನಿವೇಶನ ಹಂಚಿಕೆ?
ಸುದ್ದಿದಿನ,ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಮಹತ್ವಾಕಾಂಕ್ಷೆಯ ಡಾ. ಕೆ. ಶಿವರಾಮ ಕಾರಂತ ಬಡಾವಣೆಯ ನಿವೇಶನ ಹಂಚಿಕೆಗೆ ಕೊನೆಗೂ ಕಾಲ ಕೂಡಿ ಬಂದಿದೆ. ದೀರ್ಘಕಾಲದ ಕಾನೂನು ವಿವಾದಗಳ ಬಳಿಕ ಹೈಕೋರ್ಟ್ ಅನುಮತಿ ದೊರೆತಿರುವ ಹಿನ್ನೆಲೆಯಲ್ಲಿ, ಆ.31ರಂದು ಭೂಮಿ ನೀಡಿದ ರೈತರು ಹಾಗೂ ಭೂಮಾಲೀಕರಿಗೆ 18 ಸಾವಿರ ನಿವೇಶನ ಹಂಚಿಕೆ ಮಾಡುವ ಮೂಲಕ ಪ್ರಕ್ರಿಯೆಗೆ ಸಾಂಕೇತಿಕ ಚಾಲನೆ ನೀಡುವ ಸಾಧ್ಯತೆ ಇದೆ.
ಹೈಲೈಟ್ಸ್: |
|
ಕಾನೂನು ತೊಡಕು ನಿವಾರಣೆ
ಉತ್ತರ ಬೆಂಗಳೂರಿನಲ್ಲಿ ರೂಪುಗೊಂಡಿರುವ ಡಾ. ಕೆ. ಶಿವರಾಮ ಕಾರಂತ ಬಡಾವಣೆ ಹಲವು ವರ್ಷಗಳಿಂದ ಕಾನೂನು ವಿವಾದಗಳಿಂದಾಗಿ ಸ್ಥಗಿತಗೊಂಡಿತ್ತು. ಇದೀಗ ಹೈಕೋರ್ಟ್ ನಿವೇಶನ ಹಂಚಿಕೆ ಹಾಗೂ ಸಾರ್ವಜನಿಕರಿಂದ ಅರ್ಜಿ ಸ್ವೀಕರಿಸುವ ಪ್ರಕ್ರಿಯೆಗೆ ಹಸಿರು ನಿಶಾನೆ ತೋರಿಸಿರುವ ಹಿನ್ನೆಲೆಯಲ್ಲಿ ಬಡಾವಣೆಗೆ ಹೊಸ ಚೈತನ್ಯ ಬಂದಿದೆ.
ಸುಮಾರು 3,069 ಎಕರೆ ಪ್ರದೇಶದಲ್ಲಿ, ಆವಲಹಳ್ಳಿ, ರಾಮಗೊಂಡನಹಳ್ಳಿ, ಜಾರಕಬಂಡೆ ಕಾವಲ್ ಸೇರಿದಂತೆ 17 ಹಳ್ಳಿಗಳನ್ನು ಒಳಗೊಂಡಿರುವ ಈ ಬಡಾವಣೆ ದಶಕಕ್ಕೂ ಹೆಚ್ಚು ಕಾಲ ವಿವಿಧ ಕಾನೂನು ತೊಡಕುಗಳನ್ನು ಎದುರಿಸಿತ್ತು. ಸಮಸ್ಯೆ ಪರಿಹಾರಕ್ಕಾಗಿ ಸುಪ್ರೀಂ ಕೋರ್ಟ್ ವಿಶೇಷ ಮೂವರು ಸದಸ್ಯರ ಸಮಿತಿಯನ್ನೂ ರಚಿಸಿತ್ತು.
http://Visit : www.suddidina.com
3,200 ಭೂಮಾಲೀಕರಿಗೆ 18 ಸಾವಿರ ಸೈಟ್
ಬಡಾವಣೆ ನಿರ್ಮಾಣಕ್ಕಾಗಿ ಸುಮಾರು 3,200 ರೈತರು ಮತ್ತು ಭೂಮಾಲೀಕರು ತಮ್ಮ ಜಮೀನು ನೀಡಿದ್ದಾರೆ. ಅವರ ತ್ಯಾಗಕ್ಕೆ ಪ್ರತಿಫಲವಾಗಿ ಸುಮಾರು 18 ಸಾವಿರ ನಿವೇಶನಗಳನ್ನು ಮೀಸಲಿಡಲಾಗಿದೆ. ಒಟ್ಟಾರೆ ಬಡಾವಣೆಯಲ್ಲಿ ವಿವಿಧ ಅಳತೆಯ 34,992 ನಿವೇಶನಗಳನ್ನು ರಚಿಸಲಾಗಿದೆ ಎಂದು ಬಿಡಿಎ ಮೂಲಗಳು ತಿಳಿಸಿವೆ.
ಆ.31ರಂದು ನಡೆಯುವ ಸಾಧ್ಯತೆಯಿರುವ ಕಾರ್ಯಕ್ರಮದಲ್ಲಿ 600ರಿಂದ 1,000 ಮಂದಿ ಭೂಮಾಲೀಕರಿಗೆ ಮುಖ್ಯಮಂತ್ರಿಗಳಿಂದ ಸಾಂಕೇತಿಕವಾಗಿ ನಿವೇಶನ ಹಂಚಿಕೆ ಮಾಡುವ ನಿರೀಕ್ಷೆಯಿದೆ. ಉಳಿದ ಫಲಾನುಭವಿಗಳಿಗೆ ಪ್ರತ್ಯೇಕ ಕೌಂಟರ್‌ಗಳ ಮೂಲಕ ಹಂಚಿಕೆ ಮಾಡುವ ವ್ಯವಸ್ಥೆ ಕಲ್ಪಿಸುವ ಉದ್ದೇಶವಿದೆ.
ಸಾರ್ವಜನಿಕರಿಗೂ ಅರ್ಜಿ ಸಲ್ಲಿಕೆಗೆ ಅವಕಾಶ
ಭೂಮಾಲೀಕರಿಗೆ ನಿವೇಶನ ಹಂಚಿಕೆಯ ಜೊತೆಗೆ ಸಾರ್ವಜನಿಕರಿಂದ ಅರ್ಜಿ ಆಹ್ವಾನಿಸುವ ಪ್ರಕ್ರಿಯೆಗೂ ಚಾಲನೆ ನೀಡಲು ಬಿಡಿಎ ಮುಂದಾಗಿದೆ. ಇದರಿಂದ ಹಲವು ವರ್ಷಗಳಿಂದ ಕಾರಂತ ಬಡಾವಣೆಯಲ್ಲಿ ನಿವೇಶನ ಪಡೆಯುವ ನಿರೀಕ್ಷೆಯಲ್ಲಿದ್ದ ಸಾರ್ವಜನಿಕರಿಗೂ ಅವಕಾಶ ದೊರೆಯಲಿದೆ.
ಚದರ ಅಡಿಗೆ ₹6,000 ದರ
ಕಾರಂತ ಬಡಾವಣೆಯ ವಸತಿ ನಿವೇಶನಗಳ ಬೆಲೆಯನ್ನು ಚದರ ಅಡಿಗೆ ₹6,000 ಎಂದು ನಿಗದಿಪಡಿಸಲಾಗಿದೆ. ಮೂರು ವರ್ಷಗಳ ಹಿಂದೆ ಚದರ ಅಡಿಗೆ ₹5,000 ದರ ಪ್ರಸ್ತಾಪಿಸಲಾಗಿತ್ತು. ಇದೀಗ ₹1,000 ಹೆಚ್ಚಳ ಮಾಡಲಾಗಿದೆ.
ಪರಿಷ್ಕೃತ ದರದಂತೆ 30×40 ಅಡಿ, ಅಂದರೆ 1,200 ಚದರ ಅಡಿ ನಿವೇಶನಕ್ಕೆ ಸುಮಾರು ₹72 ಲಕ್ಷ ವೆಚ್ಚವಾಗಲಿದೆ.
ಹಲವು ವರ್ಷಗಳ ನಿರೀಕ್ಷೆಗೆ ತೆರೆ?
ನ್ಯಾಯಾಲಯದ ತೀರ್ಪು ಹಾಗೂ ಆಡಳಿತಾತ್ಮಕ ಪ್ರಕ್ರಿಯೆಗಳು ವೇಗ ಪಡೆದಿರುವ ಹಿನ್ನೆಲೆಯಲ್ಲಿ ಕಾರಂತ ಬಡಾವಣೆಯ ನಿವೇಶನ ಹಂಚಿಕೆ ಇದೀಗ ನಿರ್ಣಾಯಕ ಹಂತ ತಲುಪಿದೆ. ಆ.31ರ ಕಾರ್ಯಕ್ರಮ ಯಶಸ್ವಿಯಾಗಿ ನಡೆದರೆ, ಭೂಮಿ ನೀಡಿದ ಸಾವಿರಾರು ಕುಟುಂಬಗಳ ಹಲವು ವರ್ಷಗಳ ನಿರೀಕ್ಷೆಗೆ ತೆರೆ ಬೀಳುವುದರ ಜೊತೆಗೆ ಸಾರ್ವಜನಿಕರಿಗೂ ನಿವೇಶನ ಪಡೆಯುವ ದಾರಿ ಮತ್ತಷ್ಟು ಸ್ಪಷ್ಟವಾಗಲಿದೆ.

ದಿನದ ಸುದ್ದಿ
ಗೃಹಜ್ಯೋತಿ ಮರುಸಮೀಕ್ಷೆಗೆ ಕೌಂಟ್‌ಡೌನ್: 1.17 ಲಕ್ಷ ಫಲಾನುಭವಿಗಳಿಗೆ ಇನ್ನೂ 5 ದಿನ ಮಾತ್ರ!
ಸುದ್ದಿದಿನ, ಮೈಸೂರು: ನೈಜ ಫಲಾನುಭವಿಗಳಿಗೆ ಮಾತ್ರ ಗೃಹಜ್ಯೋತಿ ಯೋಜನೆಯ ಸಬ್ಸಿಡಿ ತಲುಪಿಸುವ ಉದ್ದೇಶದಿಂದ ರಾಜ್ಯಾದ್ಯಂತ ನಡೆಯುತ್ತಿರುವ ಮರುಸಮೀಕ್ಷೆ ಅಂತಿಮ ಹಂತಕ್ಕೆ ಬಂದಿದೆ. ಮೈಸೂರು ಜಿಲ್ಲೆಯಲ್ಲಿ ಶೇ.84ರಷ್ಟು ಪರಿಶೀಲನೆ ಪೂರ್ಣಗೊಂಡಿದ್ದು, ಇನ್ನೂ 1.17 ಲಕ್ಷ ಫಲಾನುಭವಿಗಳು ದಾಖಲೆಗಳೊಂದಿಗೆ ಪರಿಶೀಲನೆಗೆ ಒಳಪಡಬೇಕಿದೆ.
ಗೃಹಜ್ಯೋತಿ ಮರುಸಮೀಕ್ಷೆಗೆ ಅಂತಿಮ ಗಡುವು ಸಮೀಪ
200 ಯೂನಿಟ್‌ಗಿಂತ ಕಡಿಮೆ ವಿದ್ಯುತ್ ಬಳಸುವ ಅರ್ಹ ಗೃಹ ಬಳಕೆದಾರರಿಗೆ ವಿದ್ಯುತ್ ಬಿಲ್ ಭಾರ ಕಡಿಮೆ ಮಾಡುವ ಉದ್ದೇಶದಿಂದ ರಾಜ್ಯ ಸರ್ಕಾರ ಗೃಹಜ್ಯೋತಿ ಯೋಜನೆ ಜಾರಿಗೊಳಿಸಿದೆ. ಆದರೆ, ಯೋಜನೆಗೆ ಅನರ್ಹರಾಗಿದ್ದರೂ ಸೌಲಭ್ಯ ಪಡೆಯುತ್ತಿರುವವರು ಅಥವಾ ತಪ್ಪಾಗಿ ನೋಂದಣಿಯಾಗಿರುವ ಸಂಪರ್ಕಗಳನ್ನು ಪತ್ತೆಹಚ್ಚಲು ಸರ್ಕಾರ ಮರುಸಮೀಕ್ಷೆ ಕೈಗೊಂಡಿದೆ.
2026ರ ಜುಲೈ 1ರಿಂದ ಮನೆ-ಮನೆಗೆ ತೆರಳಿ ಪರಿಶೀಲನೆ ಆರಂಭಿಸಲಾಗಿದ್ದು, ಎರಡು ತಿಂಗಳಲ್ಲಿ ಪ್ರಕ್ರಿಯೆ ಪೂರ್ಣಗೊಳಿಸುವಂತೆ ಸೂಚಿಸಲಾಗಿದೆ. ಅದರಂತೆ ಆಗಸ್ಟ್ 31ಕ್ಕೆ ಮರುಸಮೀಕ್ಷೆಯ ಗಡುವು ಮುಕ್ತಾಯಗೊಳ್ಳಲಿದೆ.
ಮೈಸೂರಿನಲ್ಲಿ ಶೇ.84ರಷ್ಟು ಪರಿಶೀಲನೆ ಪೂರ್ಣ
ಮೈಸೂರು ಜಿಲ್ಲೆಯಲ್ಲಿ ಒಟ್ಟು 7.65 ಲಕ್ಷ ಗೃಹಜ್ಯೋತಿ ಫಲಾನುಭವಿಗಳಿದ್ದು, ಆಗಸ್ಟ್ 24ರ ಅಂತ್ಯದ ವೇಳೆಗೆ 6.48 ಲಕ್ಷ ಮಂದಿಯ ಮರುಪರಿಶೀಲನೆ ಪೂರ್ಣಗೊಂಡಿದೆ. ಅಂದರೆ ಶೇ.84ರಷ್ಟು ಪ್ರಕ್ರಿಯೆ ಮುಗಿದಿದೆ.
ಆದರೆ ಇನ್ನೂ 1.17 ಲಕ್ಷ ಫಲಾನುಭವಿಗಳು ತಮ್ಮ ದಾಖಲೆಗಳನ್ನು ಸಲ್ಲಿಸಿ ಪರಿಶೀಲನೆಗೆ ಒಳಪಡಬೇಕಿದೆ. ನಿಗದಿತ ಅವಧಿಯಲ್ಲಿ ಪರಿಶೀಲನೆ ಮಾಡಿಸಿಕೊಳ್ಳದಿದ್ದರೆ, ಇಂತಹ ಫಲಾನುಭವಿಗಳು ಯೋಜನೆಯ ಸೌಲಭ್ಯದಿಂದ ಹೊರಗುಳಿಯುವ ಸಾಧ್ಯತೆ ಇದೆ.
ಮನೆಗೆ ನೋಟಿಸ್ ಅಂಟಿಸುವ ಕಾರ್ಯ
ಕೆಲ ವಾರಗಳಿಂದ ಪರಿಶೀಲನೆಗೆ ಲಭ್ಯವಾಗದ ಬಳಕೆದಾರರ ಮನೆಗಳಿಗೆ ಸೆಸ್ಕ್ ಸಿಬ್ಬಂದಿ ನೋಟಿಸ್ ಅಂಟಿಸುತ್ತಿದ್ದಾರೆ. ನೋಟಿಸ್ ಪಡೆದವರು ತಮ್ಮ ವ್ಯಾಪ್ತಿಯ ಸೆಸ್ಕ್ ಕಚೇರಿಗೆ ತೆರಳಿ ಅಗತ್ಯ ದಾಖಲೆಗಳನ್ನು ನೀಡಿ ಪರಿಶೀಲನೆ ಮಾಡಿಸಿಕೊಳ್ಳಬೇಕಾಗಿದೆ.
ಉಳಿದ 1.17 ಲಕ್ಷ ಫಲಾನುಭವಿಗಳ ಪರಿಶೀಲನೆ ಕೆಲವೇ ದಿನಗಳಲ್ಲಿ ಪೂರ್ಣಗೊಳಿಸುವುದು ಅಧಿಕಾರಿಗಳಿಗೆ ದೊಡ್ಡ ಸವಾಲಾಗಿದೆ. ಈ ಅವಧಿಯಲ್ಲಿ ಸಾಧ್ಯವಾಗದಿದ್ದರೆ ಸರ್ಕಾರ ಗಡುವು ವಿಸ್ತರಿಸುವ ಸಾಧ್ಯತೆಯೂ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಏಕೆ ನಡೆಯುತ್ತಿದೆ ಮರುಸಮೀಕ್ಷೆ?
ಮರುಪರಿಶೀಲನೆಯ ಪ್ರಮುಖ ಉದ್ದೇಶಗಳು:
- ತಪ್ಪಾದ ನೋಂದಣಿಗಳನ್ನು ಪತ್ತೆಹಚ್ಚುವುದು
- ಅನರ್ಹ ವಿದ್ಯುತ್ ಸಂಪರ್ಕಗಳನ್ನು ಗುರುತಿಸುವುದು
- ದಾಖಲೆಗಳ ಹೊಂದಾಣಿಕೆ ಪರಿಶೀಲಿಸುವುದು
- ಸಬ್ಸಿಡಿಯ ದುರ್ಬಳಕೆ ತಡೆಯುವುದು
- ಅರ್ಹ ಕುಟುಂಬಗಳಿಗೆ ಮಾತ್ರ ಯೋಜನೆಯ ಲಾಭ ಖಚಿತಪಡಿಸುವುದು
ಫಲಾನುಭವಿಗಳು ಯಾವ ದಾಖಲೆ ನೀಡಬೇಕು?
ಪರಿಶೀಲನೆ ವೇಳೆ ಫಲಾನುಭವಿಗಳು ವಿದ್ಯುತ್ ಬಿಲ್, ಖಾತೆ ಸಂಖ್ಯೆ, ಆಧಾರ್ ಸಂಬಂಧಿತ ವಿವರ, ಗುರುತಿನ ದಾಖಲೆ ಹಾಗೂ ವಿಳಾಸದ ದಾಖಲೆಗಳನ್ನು ಒದಗಿಸಬೇಕಾಗುತ್ತದೆ. ಅಗತ್ಯವಿದ್ದರೆ ಇತರೆ ದಾಖಲೆಗಳನ್ನೂ ಅಧಿಕಾರಿಗಳು ಕೇಳಬಹುದು.
ಯಾರಿಗೆ ಗೃಹಜ್ಯೋತಿ ಸೌಲಭ್ಯ?
ವಸತಿ ಉದ್ದೇಶದ ವಿದ್ಯುತ್ ಸಂಪರ್ಕ ಹೊಂದಿರುವ, ನಿಗದಿತ ಬಳಕೆ ಮಿತಿಯೊಳಗಿರುವ ಮತ್ತು ವಿದ್ಯುತ್ ಖಾತೆಗೆ ಆಧಾರ್ ಲಿಂಕ್ ಮಾಡಿರುವ ರಾಜ್ಯದ ಕುಟುಂಬಗಳಿಗೆ ಯೋಜನೆ ಅನ್ವಯಿಸುತ್ತದೆ. 2022-23ರ ಸರಾಸರಿ ಮಾಸಿಕ ವಿದ್ಯುತ್ ಬಳಕೆಯನ್ನು ಆಧಾರವಾಗಿಟ್ಟುಕೊಂಡು ಶೇ.10ರಷ್ಟು ಹೆಚ್ಚುವರಿ ಬಳಕೆಗೆ ಅವಕಾಶ ನೀಡಲಾಗಿದೆ. ಈ ಲೆಕ್ಕಾಚಾರದಲ್ಲಿ ಬಳಕೆ ಮಿತಿ 200 ಯೂನಿಟ್‌ಗಿಂತ ಕಡಿಮೆ ಇರಬೇಕು.
ಉದಾಹರಣೆಗೆ, ಒಂದು ಮನೆಯ ಸರಾಸರಿ ಬಳಕೆ 100 ಯೂನಿಟ್ ಆಗಿದ್ದರೆ, ಶೇ.10 ಹೆಚ್ಚುವರಿ ಅವಕಾಶದೊಂದಿಗೆ ಸುಮಾರು 110 ಯೂನಿಟ್‌ವರೆಗೆ ಸಬ್ಸಿಡಿ ಮಿತಿ ಅನ್ವಯಿಸಬಹುದು. 200 ಯೂನಿಟ್ ಮೀರಿದ ಬಳಕೆಗೆ ಸಂಪೂರ್ಣ ಬಿಲ್ ಉಚಿತವಾಗುವುದಿಲ್ಲ.
ಅರ್ಹ ಫಲಾನುಭವಿಗಳಿಗೆ ಹಿಂದಿನ ನಿಯಮದಂತೆ ಸಬ್ಸಿಡಿ ಮುಂದುವರಿಯಲಿದೆ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಹೀಗಾಗಿ ಪರಿಶೀಲನೆ ಬಾಕಿ ಇರುವ ಫಲಾನುಭವಿಗಳು ಕೊನೆಯ ದಿನದವರೆಗೆ ಕಾಯದೆ, ಅಗತ್ಯ ದಾಖಲೆಗಳೊಂದಿಗೆ ಸೆಸ್ಕ್ ಕಚೇರಿಗೆ ತೆರಳಿ ಪ್ರಕ್ರಿಯೆ ಪೂರ್ಣಗೊಳಿಸುವುದು ಮುಖ್ಯವಾಗಿದೆ.

-
ಅಂತರಂಗ4 days agoಡಾ. ಆತ್ಮಾರಾಮನ ಆತ್ಮನಿವೇದನೆ | ಮೆಟ್ಟಿಲಿನವನು
-
ದಿನದ ಸುದ್ದಿ6 days agoವಿಶ್ವ ವೆಂಕಟೇಶ್ವರ ಸಂಸ್ಥೆಯ ಹೆಸರು ಹಾಳು ಮಾಡುವ ಹುನ್ನಾರ: ವಿಠಲ ರುಕ್ಮಿಣಿ ಮಠದ ವಿರುದ್ಧ ಗಂಭೀರ ಆರೋಪ
-
ದಿನದ ಸುದ್ದಿ2 days agoಭರವಸೆ ಕೊಟ್ಟು ಯುವಜನರನ್ನು ಮನೆಗೆ ಕಳುಹಿಸಿದ ಸರ್ಕಾರಕ್ಕೆ ಈಗ ಪ್ರತಿಭಟನೆಯ ಬಿಸಿ: ಸೆ.5ಕ್ಕೆ ದೆಹಲಿಯಲ್ಲಿ CJP ಬೃಹತ್ ಮೆರವಣಿಗೆ!
-
ದಿನದ ಸುದ್ದಿ2 days agoKPSC ಪರೀಕ್ಷಾ ಹಗರಣ: 329 ಅಭ್ಯರ್ಥಿಗಳಿಗೆ CID ನೋಟಿಸ್, IAS ಅಧಿಕಾರಿ ವಿರುದ್ಧ ED ಆರೋಪ
-
ದಿನದ ಸುದ್ದಿ1 day agoವಂಚನೆ | ಪ್ರಭಾರ ಕಾರ್ಯಪಾಲಕ ಅಭಿಯಂತರ ಸೋಮ್ಲನಾಯ್ಕ ವಿರುದ್ಧ ಲೋಕಾಗೆ ದೂರು
-
ದಿನದ ಸುದ್ದಿ2 days agoಸರ್ವರ್ ಡೌನ್, ಅಧಿಕಾರಿಗಳ ವಿಳಂಬ: ‘ಎ-ಖಾತೆ’ಗಾಗಿ ಕಾದು ಕುಳಿತ 60 ಸಾವಿರಕ್ಕೂ ಹೆಚ್ಚು ಅರ್ಜಿದಾರರು!
-
ದಿನದ ಸುದ್ದಿ2 days agoಉದ್ದಿಮೆದಾರರಿಗೆ ನೆರವು ಯೋಜನೆ; ಅರ್ಜಿ ಆಹ್ವಾನ
-
ದಿನದ ಸುದ್ದಿ2 days agoತುಂಗಭದ್ರಾದಲ್ಲಿ ನೀರಿನ ಹರಿವು ಕುಸಿತ: ಹರಿಹರದ 24×7 ‘ಜಲಸಿರಿ’ಗೆ ಬ್ರೇಕ್, ನೀರು ಪೂರೈಕೆ ಸಮಯ ಕಡಿತ


