Connect with us

ದಿನದ ಸುದ್ದಿ

‘ಸಿಯೋಲ್‌ ಜಾಗತಿಕ ಸಮ್ಮೇಳನ’ಕ್ಕೆ ತರಳಬಾಳು ಶ್ರೀ ಜಗದ್ಗುರುವರ್ಯರು

Published

on

ಸುದ್ದಿದಿನ, ಸಿರಿಗೆರೆ: ದಕ್ಷಿಣ ಕೋರಿಯಾದ ಸಿಯೋಲ್‌ನಲ್ಲಿ ‘ಶಾಂತಿ, ಸದೃಢತೆ ಮತ್ತು ಮಾನವೀಯ ಸಂಬಂಧಗಳ ಅಭಿವೃದ್ಧಿ’ ವಿಷಯ ಕುರಿತು ಆಯೋಜಿಸಿರುವ ಜಾಗತಿಕ ಸಮ್ಮೇಳನದಲ್ಲಿ ತರಳಬಾಳು ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಭಾಗವಹಿಸಲಿದ್ದಾರೆ.

ಯೂನಿವರ್ಸಲ್‌ ಪೀಸ್‌ ಫೌಂಡೇಷನ್‌ ಆಯೋಜಿಸಿರುವ ಈ ಸಮ್ಮೇಳನ ಫೆ.7ರಿಂದ 11 ರವರೆಗೆ ನಡೆಯಲಿದ್ದು, ಜಗತ್ತಿನ ವಿವಿಧ ಕ್ಷೇತ್ರಗಳಲ್ಲಿ ವಿಶೇಷ ಸಾಧನೆ ಮಾಡಿದ ಗಣ್ಯರನ್ನು ಸಮ್ಮೇಳನಕ್ಕೆ ಆಹ್ವಾನಿಸಲಾಗಿದೆ. ಸರ್ಕಾರಿ ಸೇವೆ ಸಲ್ಲಿಸಿದವರು, ರಾಜಕೀಯ ಮುತ್ಸದ್ಧಿಗಳು, ಧಾರ್ಮಿಕ ಮುಖಂಡರು, ಮಹಿಳಾ ಪ್ರತಿನಿಧಿಗಳು ಹಾಗೂ ನಾಗರಿಕ ಸಂಸ್ಥೆಗಳ ಮುಖಂಡರು ಭಾಗವಹಿಸಲಿದ್ದಾರೆ.

ಸಮಾವೇಶದ ಬಳಿಕ ದಕ್ಷಿಣ ಕೋರಿಯಾ ದೇಶದ ಪ್ರಮುಖರು, ಸರ್ಕಾರದ ಪ್ರತಿನಿಧಿಗಳು ಮತ್ತು ಚಿಂತಕರೊಡನೆ ಸಂವಾದ ನಡೆಯಲಿದ್ದು ತರಳಬಾಳು ಶ್ರೀಗಳು ತಮ್ಮ ಅಭಿಪ್ರಾಯ ಮಂಡಿಸಲಿದ್ದಾರೆ. ಅಲ್ಲದೆ ಫೆ.10 ರಂದು ಸಿಯೋಲ್‌ನಲ್ಲಿ ಯೂನಿವರ್ಸಲ್‌ ಪೀಸ್‌ ಫೌಂಡೇಷನ್‌ ಸಂಸ್ಥಾಪಕರ ದಿನಾಚರಣೆ ನಡೆಯಲಿದ್ದು, ಆ ಕಾರ್ಯಕ್ರಮದಲ್ಲೂ ಪಾಲ್ಗೊಳ್ಳಲಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9986715401

ದಿನದ ಸುದ್ದಿ

ದಾವಣಗೆರೆ | ಮಾ.10ರಂದು ಅಂಗವಿಕಲರಿಗೆ ಕಿಟ್ ವಿತರಣೆ

Published

on

ಸಾಂದರ್ಭಿಕ ಚಿತ್ರ

ಸುದ್ದಿದಿನ,ದಾವಣಗೆರೆ : ಮಾ.10 ರಂದು ಬೆಳಿಗ್ಗೆ 10.30 ಕ್ಕೆ ದಿ ಅಸೋಸಿಯೇಷನ್ ಆಫ್ ಪೀಪಲ್ ವಿತ್ ಡಿಸಿಬಲಿಟಿ, ಜಿಲ್ಲಾ ಅಂಗವಿಕಲರ ಅಭಿವೃದ್ದಿ ಕಾರ್ಯಕ್ರಮ #1027, 1ನೇ ಮುಖ್ಯರಸ್ತೆ, 3ನೇ ಅಡ್ಡರಸ್ತೆ, ಎಸ್.ಬಿ.ಎಂ ಬ್ಯಾಂಕ್ ಹತ್ತಿರ, ನಿಟ್ಟುವಳ್ಳಿ ಹೊಸ ಬಡಾವಣೆ ದಾವಣಗೆರೆ ಇಲ್ಲಿ ಅಂಗವಿಕಲರಿಗೆ ವೈದ್ಯಕೀಯ ಉಪಕರಣಗಳು ಹಾಗೂ ಸಲಕರಣೆಗಳನ್ನು ವಿತರಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ದಾವಣಗೆರೆ ತಾಲ್ಲೂಕು ಆರೋಗ್ಯಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ | ಎಸ್ ಎಸ್ ಸಿ ವತಿಯಿಂದ ತಾಂತ್ರಿಕೇತರ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಎಸ್ ಎಸ್ ಸಿ ವತಿಯಿಂದ ತಾಂತ್ರಿಕೇತರ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ

Published

on

ಸುದ್ದಿದಿನ,ದಾವಣಗೆರೆ: ಸಿಬ್ಬಂದಿ ನೇಮಕಾತಿ ಆಯೋಗದ (ssc) ವತಿಯಿಂದ ನಾನ್-ಟೆಕ್ನಿಕಲ್(ತಾಂತ್ರಿಕೇತರ) ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆ ಹೊರಡಿಸಿದ್ದು, ಈ ಸ್ಪರ್ಧಾತ್ಮಕ ಪರೀಕ್ಷೆಯು ಕಂಪ್ಯೂಟರ್ ಆಧಾರಿತವಾಗಿರುತ್ತದೆ. ಎಸ್.ಎಸ್.ಎಲ್.ಸಿ ತೇರ್ಗಡೆ ಹೊಂದಿದ ಆಸಕ್ತ ಅಭ್ಯರ್ಥಿಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.

ಅಭ್ಯರ್ಥಿಗಳ ವಯೋಮಿತಿ 27 ವರ್ಷ. ಪ.ಜಾತಿ/ಪ.ಪಂಗಡದ ಅಭ್ಯರ್ಥಿಗಳಿಗೆ 5 ವರ್ಷ ಹಾಗೂ ಓಬಿಸಿ ಅಭ್ಯರ್ಥಿಗಳಿಗೆ 3 ವರ್ಷ ವಯೋಮಿತಿಯಲ್ಲಿ ಸಡಿಲಿಕೆ ಇರುತ್ತದೆ. ಅರ್ಜಿ ಸಲ್ಲಿಸಲು ಮಾ.21 ಕೊನೆಯ ದಿನಾಂಕವಾಗಿದ್ದು, ಈ ವೆಬ್‍ಸೈಟ್
https://ssc.nic.in or www.ssckkr.kar.nic.in
ಮೂಲಕ ಆನ್‍ಲೈನ್‍ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ.

ಇದನ್ನೂ ಓದಿ | ದಾವಣಗೆರೆ | ಮಹಿಳೆಯರು ಸಂಕೋಲೆಗಳನ್ನು ಬದಿಗೊತ್ತಿ ಸಾಧನೆ ಕಡೆ ಗಮನ ಕೊಡಬೇಕು : ನ್ಯಾ.ಗೀತಾ.ಕೆ.ಬಿ

ಹೆಚ್ಚಿನ ಮಾಹಿತಿಗಾಗಿ ಸಹಾಯವಾಣಿ ನಂ: 08025502520/9483862020 ಅಥವಾ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ದಾವಣಗೆರೆ. ದೂರವಾಣಿ ಸಂಖ್ಯೆ: 08192-259446 ಇಲ್ಲಿಗೆ ಸಂಪರ್ಕಿಸಬಹುದಾಗಿದೆ ಎಂದು ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದ ಉದ್ಯೋಗಾಧಿಕಾರಿ ಗಿರೀಶ್.ಕೆ.ಎನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ದಾವಣಗೆರೆ | ನಗರದಲ್ಲಿಂದು ವಿದ್ಯುತ್ ವ್ಯತ್ಯಯ

Published

on

ಸುದ್ದಿದಿನ,ದಾವಣಗೆರೆ : 220/66 ಕೆ.ವಿ. ಕೇಂದ್ರದಿಂದ ಎಸ್.ಆರ್.ಎಸ್.ನಿಂದ ಸರಬರಾಜಾಗುವ 66 ಕೆ.ವಿ. ದಾವಣಗೆರೆ ಹಾಗೂ ಯರಗುಂಟ ವಿತರಣಾ ಮಾರ್ಗದಲ್ಲಿ ತುರ್ತಾಗಿ ನಿರ್ವಾಹಣಾ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಮಾ.09 ರಂದು ಬೆಳಿಗ್ಗೆ 9 ಗಂಟೆಯಿಂದ ಮದ್ಯಾಹ್ನ 4 ಗಂಟೆಯವರೆಗೆ 66/11 ಕೆ.ವಿ. ದಾವಣಗೆರೆ, 220/66 ಕೆ.ವಿ. ದಾವಣಗೆರೆ ಎಸ್.ಆರ್.ಎಸ್. ಮತ್ತು 66/11ಕೆ.ವಿ. ಯರಗುಂಟ ವಿದ್ಯುತ್ ವಿತರಣಾ ಕೇಂದ್ರದಿಂದ ಸರಬರಾಜಾಗುವ ಎಲ್ಲಾ 11ಕೆ.ವಿ. ವಿದ್ಯುತ್ ಮಾರ್ಗಗಳಲ್ಲಿ ವಿದ್ಯುತ್ ವ್ಯತ್ಯಯ ಆಗಲಿದೆ.

ಇದನ್ನೂ ಓದಿ | ರಮೇಶ್ ಜಾರಕಿಹೊಳಿ ಸೆಕ್ಸ್ ಸಿಡಿ ಪ್ರಕರಣ : ಯುವತಿ ಪತ್ತೆ..!?

ದಾವಣಗೆರೆ ತಾಲೂಕಿನ ದಾವಣಗೆರೆ ನಗರದ ಎಲ್ಲಾ ಪ್ರದೇಶಗಳಲ್ಲಿ ಹಾಗೂ ಬೆಳವನೂರು, ಶಿರಮಗೊಂಡನಹಳ್ಳಿ, ಶಾಮನೂರು, ಕುಂದವಾಡ, ಬಾತಿ ಅಮೃತನಗರ, ನೀಲನಹಳ್ಳಿ, ಬೂದಿಹಾಳ್, ಕಕ್ಕರಗೊಳ್ಳ ಹಾಗೂ ಸುತ್ತಮುತ್ತಲಿನ ಎಲ್ಲಾ ಗ್ರಾಮಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ಪ್ರಕಟಣೆ ತಿಳಿಸಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading
Advertisement

Title

ದಿನದ ಸುದ್ದಿ18 mins ago

ದಾವಣಗೆರೆ | ಮಾ.10ರಂದು ಅಂಗವಿಕಲರಿಗೆ ಕಿಟ್ ವಿತರಣೆ

ಸುದ್ದಿದಿನ,ದಾವಣಗೆರೆ : ಮಾ.10 ರಂದು ಬೆಳಿಗ್ಗೆ 10.30 ಕ್ಕೆ ದಿ ಅಸೋಸಿಯೇಷನ್ ಆಫ್ ಪೀಪಲ್ ವಿತ್ ಡಿಸಿಬಲಿಟಿ, ಜಿಲ್ಲಾ ಅಂಗವಿಕಲರ ಅಭಿವೃದ್ದಿ ಕಾರ್ಯಕ್ರಮ #1027, 1ನೇ ಮುಖ್ಯರಸ್ತೆ,...

ದಿನದ ಸುದ್ದಿ28 mins ago

ಎಸ್ ಎಸ್ ಸಿ ವತಿಯಿಂದ ತಾಂತ್ರಿಕೇತರ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ

ಸುದ್ದಿದಿನ,ದಾವಣಗೆರೆ: ಸಿಬ್ಬಂದಿ ನೇಮಕಾತಿ ಆಯೋಗದ (ssc) ವತಿಯಿಂದ ನಾನ್-ಟೆಕ್ನಿಕಲ್(ತಾಂತ್ರಿಕೇತರ) ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆ ಹೊರಡಿಸಿದ್ದು, ಈ ಸ್ಪರ್ಧಾತ್ಮಕ ಪರೀಕ್ಷೆಯು ಕಂಪ್ಯೂಟರ್ ಆಧಾರಿತವಾಗಿರುತ್ತದೆ. ಎಸ್.ಎಸ್.ಎಲ್.ಸಿ ತೇರ್ಗಡೆ ಹೊಂದಿದ ಆಸಕ್ತ...

ದಿನದ ಸುದ್ದಿ48 mins ago

ದಾವಣಗೆರೆ | ನಗರದಲ್ಲಿಂದು ವಿದ್ಯುತ್ ವ್ಯತ್ಯಯ

ಸುದ್ದಿದಿನ,ದಾವಣಗೆರೆ : 220/66 ಕೆ.ವಿ. ಕೇಂದ್ರದಿಂದ ಎಸ್.ಆರ್.ಎಸ್.ನಿಂದ ಸರಬರಾಜಾಗುವ 66 ಕೆ.ವಿ. ದಾವಣಗೆರೆ ಹಾಗೂ ಯರಗುಂಟ ವಿತರಣಾ ಮಾರ್ಗದಲ್ಲಿ ತುರ್ತಾಗಿ ನಿರ್ವಾಹಣಾ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಮಾ.09 ರಂದು...

ದಿನದ ಸುದ್ದಿ56 mins ago

ದಾವಣಗೆರೆ | ಮಹಿಳೆಯರು ಸಂಕೋಲೆಗಳನ್ನು ಬದಿಗೊತ್ತಿ ಸಾಧನೆ ಕಡೆ ಗಮನ ಕೊಡಬೇಕು : ನ್ಯಾ.ಗೀತಾ.ಕೆ.ಬಿ

ಸುದ್ದಿದಿನ,ದಾವಣಗೆರೆ : ಪ್ರಸ್ತುತ ಎಲ್ಲಾ ಕ್ಷೇತ್ರಗಳಲ್ಲೂ ಮಹಿಳೆಯರು ವಿಶೇಷವಾದ ಸ್ಥಾನಮಾನಗಳಿಗೆ ಪಾತ್ರರಾಗಿದ್ದರೂ ಒದಗಿ ಬರುವ ಸಂಕೋಲೆಗಳನ್ನು ಬದಿಗೊತ್ತಿ ಸಾಧನೆ ಮಾಡುವತ್ತ ಗಮನಹರಿಸಬೇಕು ಎಂದು ಪ್ರಧಾನ ಜಿಲ್ಲಾ ಮತ್ತು...

ದಿನದ ಸುದ್ದಿ2 hours ago

ರಮೇಶ್ ಜಾರಕಿಹೊಳಿ ಸೆಕ್ಸ್ ಸಿಡಿ ಪ್ರಕರಣ : ಯುವತಿ ಪತ್ತೆ..!?

ಸುದ್ದಿದಿನ, ಬೆಂಗಳೂರು: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಜೊತೆ ಅಶ್ಲೀಲ ವಿಡಿಯೋ ಚಾಟ್ ನಡೆಸಿದ್ದ ಯುವತಿ ದುಬೈಗೆ ಹಾರಿದ್ದಾಳೆ ಎನ್ನಲಾಗುತ್ತಿತ್ತು. ಆದರೆ ಬೆಂಗಳೂರಿನ ಆರ್.ಟಿ.ನಗರದಲ್ಲೇ ಆಕೆ ಇದ್ದಾಳೆ...

ನಿತ್ಯ ಭವಿಷ್ಯ2 hours ago

ಮದುವೆಯಾಗಲು ಯಾವ ಗ್ರಹಗಳು ಚೆನ್ನಾಗಿರಬೇಕು? ಎಂಬುದರ ಎಂಬುವುದರ ಬಗ್ಗೆ ಮಾಹಿತಿ..!

  ಸೋಮಶೇಖರ್B.Sc ಜಾತಕ ಬರೆಯುವುದು, ಜಾತಕ ವಿಶ್ಲೇಷಣೆಗಾರರು, ರಾಶಿ ಹರಳು ತಿಳಿಸುವುದು. ವಂಶಪಾರಂಪರಿಕ ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ, ಹಾಗೂ ಸಂಖ್ಯಾಶಾಸ್ತ್ರ ಪರಿಣಿತರು. Mob.9353488403 ಸಾಮಾನ್ಯವಾಗಿ ವಿವಾಹದ ಮೊದಲು ಜಾತಕ...

ನಿತ್ಯ ಭವಿಷ್ಯ3 hours ago

ಮಂಗಳವಾರ- ರಾಶಿ ಭವಿಷ್ಯ | ಈ ರಾಶಿಯವರಿಗೆ ವಿದೇಶದಲ್ಲಿ ಪ್ಲಾಟ್ ಖರೀದಿಸುವ ಯೋಗ ಇದೆ

ವಿಜಯ ಏಕಾದಶಿ ಸೂರ್ಯೋದಯ: 06:30 AM, ಸೂರ್ಯಸ್ತ: 06:28 PM ಶಾರ್ವರೀ ನಾಮ ಸಂವತ್ಸರ ಮಾಘ ಮಾಸ, ಶಿಶಿರ ಋತು, ಉತ್ತರಾಯಣ,ಕೃಷ್ಣ ಪಕ್ಷ, ತಿಥಿ: ಏಕಾದಶೀ (...

ದಿನದ ಸುದ್ದಿ13 hours ago

ರಾಜ್ಯ ಬಜೆಟ್ ನ ಪಾವಿತ್ರ್ಯವನ್ನೇ ಹಾಳು ಮಾಡಿದ ಬಿ.ಎಸ್.ಯಡಿಯೂರಪ್ಪ : ಸಿದ್ದರಾಮಯ್ಯ ಕಿಡಿ

ಸುದ್ದಿದಿನ, ಬೆಂಗಳೂರು: ‘ಆಪರೇಷನ್ ಕಮಲ’ ಎಂಬ ಅನೈತಿಕ ರಾಜಕೀಯದ ಮೂಲಕ ಅಧಿಕಾರಕ್ಕೆ ಬಂದಿರುವ ಬಿಜೆಪಿ ಸರ್ಕಾರ ರಾಜ್ಯವನ್ನು ದಶಕಗಳ ಹಿಂದಕ್ಕೆ ಒಯ್ಯುವ “ಆಪರೇಷನ್ ಬರ್ಬಾದ್” ಕಾರ್ಯಕ್ರಮವನ್ನು ಯಶಸ್ವಿಯಾಗಿ...

ದಿನದ ಸುದ್ದಿ13 hours ago

ರಾಜ್ಯ ಬಜೆಟ್-2021 ವಿಶ್ಲೇಷಣೆ | ಯಡ್ಡಿ ಬಜೆಟ್ – ಉತ್ಪ್ರೇಕ್ಷೆ, ತಾರತಮ್ಯ ಮತ್ತು ಸುಳ್ಳು ಅಂಕಿಅಂಶಗಳ ಕಣ್ಕಟ್ಟು..!

ಶಿವಸುಂದರ್ ಆತ್ಮೀಯರೇ , ಬಜೆಟ್ಟಿನ ಬಗ್ಗೆ ಈಗಾಗಲೇ ಸಾಕಷ್ಟು ಅಭಿಪ್ರಾಯಗಳು ಬಂದಾಗಿವೆ. ಇತರ ಎಲ್ಲಾ ಕ್ಷೇತ್ರಗಳಿಗೂ ತೋರಿಕೆಯಲ್ಲಾದರೂ ಬಜೆಟ್ ಹೆಚ್ಚಳ ಮಾಡಿರುವ ಯಡ್ಡಿ ಸರ್ಕಾರ SCSP-STP ಯೋಜನೆಗಳಿಗೆ...

ಅಂತರಂಗ15 hours ago

ವಿಶ್ವ ಮಹಿಳಾ ದಿನ : ದಿವ್ಯಶ್ರೀ ಮನದ ಮಾತು..!

ದಿವ್ಯಶ್ರೀ.ವಿ, ಬೆಂಗಳೂರು ಪ್ರತಿವರ್ಷ ಮಾರ್ಚ್‌ 8 ರಂದು ಅಂತಾರಾಷ್ಟ್ರೀಯ ಮಹಿಳಾ ದಿನವೆಂದು ವಿಶ್ವದೆಲ್ಲೆಡೆ ಆಚರಿಸಲಾಗುತ್ತದೆ. ಈ ಮೂಲಕ ಮಹಿಳೆಯರಿಗೆ ಗೌರವ ಸಲ್ಲಿಸಲಾಗುತ್ತದೆ. ಇಂಥದ್ದೊಂದು ದಿನ ಮೊದಲ ಬಾರಿಗೆ...

Trending